ಹೋಂ ಸ್ಟೇ ಹಾಗೂ ರೆಸಾರ್ಟ್ ಗಳಲ್ಲಿ ಅವಘಡಗಳು ನಡೆದಲ್ಲಿ ಮಾಲೀಕರೇ ಜವಾಬ್ದಾರಿ : ಪ್ರವಾಸೋದ್ಯಮ ಇಲಾಖೆ

WhatsApp
Telegram
Facebook
Twitter
LinkedIn

ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಜಿಲ್ಲೆಯಾದ್ಯಂತ ಪ್ರವಾಸೋದ್ಯಮ ಇಲಾಖೆಯಿಂದ ಅನುಮೋದನೆಗೊಂಡ ಹೋಂ ಸ್ಟೇ, ಹೋಟೆಲ್, ರೆಸಾರ್ಟ್ ನ್ನು ನಡೆಸುತ್ತಿರುವ ಮಾಲೀಕರು ನಿಮ್ಮ ಒಡೆತನದ ರೆಸಾರ್ಟ, ಹೋಂಸ್ಟೇಗಳಲ್ಲಿ ಅವಘಡ ನಡೆದಲ್ಲಿ ನೀವೇ ಜವಾಬ್ದಾರಿ ಎಂದು ಪ್ರವಾಸೋದ್ಯಮ ಇಲಾಖೆ ಹೇಳಿದೆ. ಅಕ್ರಮಗಳ ನಂತರ ಪ್ರವಾಸೋದ್ಯಮ ಇಲಾಖೆ ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿದೆ ಎಂದು ಸಾರ್ವಜನಿಕರು ಲೇವಡಿ ಮಾಡಿದ್ದಾರೆ.

ಪ್ರವಾಸೋದ್ಯಮ ಇಲಾಖೆಯಿಂದ ಹೋಂಸ್ಟೇ ನಡೆಸಲು ಮಾತ್ರ ಅನುಮತಿಯನ್ನು ನೀಡಲಾಗಿದ್ದು, ಇತರ ಕ್ರೀಡೆಗಳಿಗೆ ಅವಕಾಶವನ್ನು ಮಾಡಿಕೊಟ್ಟಿರುವುದಿಲ್ಲ.
ಆದ್ದರಿಂದ ಹೋಂ ಸ್ಟೇಯಲ್ಲಿ ಇನ್ನಿತರ ಚಟುವಟಿಕೆಗಳು ಅಂದರೆ ಜೀಪ್ ಲೈನ್, ಬೋಟಿಂಗ್, ಜಾರ್ಬಿಂಗ್, ಕಯಾಕಿಂಗ್, ಸ್ವೀಮ್ಮಿಂಗ್ ರೋಪ್ ಗೇಮ್ಸ್, ಅರ್ಚರಿ, ಡಾರ್ಟ ಬೋರ್ಡ ಹಾಗೂ ಇನ್ನಿತರ ಚಟುವಟಿಕೆಗಳನ್ನು ನಡೆಸುತ್ತಿದ್ದಲ್ಲಿ ಈ ಕೂಡಲೇ ಪ್ರವಾಸೋದ್ಯಮ ಇಲಾಖೆ ಕಾರವಾರ ಉತ್ತರಕನ್ನಡ ಜಿಲ್ಲೆರವರಿಗೆ ಮಾಹಿತಿ ನೀಡಬೇಕಾಗಿದ್ದು , ಸದರಿ ಚಟುವಟಿಕೆ ನಡೆಸಲು ಪೂರಕ ದಾಖಲೆಗಳನ್ನು ಸಲ್ಲಿಸಿ ಕೂಡಲೇ ಅನುಮತಿಯನ್ನು ಪಡೆಯಬೇಕು. ಅನುಮತಿ ಪಡೆಯದೆ ಇರುವುದರ ಬಗ್ಗೆ ಮಾಹಿತಿ ಕಂಡುಬಂದಲ್ಲಿ ಹೋಂಸ್ಟೇಗಳ ಸ್ಥಳ ತಪಾಸಣೆ ನಡೆಸಿ ಅನುಮತಿ ಪತ್ರವನ್ನು ರದ್ದುಗೊಳಿಸಲಾಗುವುದು ಹಾಗೂ ಕಾನೂನು ಸೂಕ್ತ ಕ್ರಮ ಕೈಗೊಳ್ಳಲಾಗುವುದು.

ಹೋಂ ಸ್ಟೇ, ಹೋಟೆಲ್/ರೆಸಾರ್ಟ್ಗಳಲ್ಲಿ ಜೀಪ್ ಲೈನ್, ಬೋಟಿಂಗ್, ಜಾರ್ಬಿಂಗ್, ಕಯಾಕಿಂಗ್, ಸ್ಟಿಮ್ಮಿಂಗ್ ರೋಪ್ ಗೇಮ್ಸ್, ಆರ್ಚರಿ, ಡಾರ್ಟ ಬೋರ್ಡ ಹಾಗೂ ಇನ್ನಿತರ ಚಟುವಟಿಕೆಗಳನ್ನು ಪ್ರವಾಸಿಗರ /ಸಾರ್ವಜನಿಕರ ಸುರಕ್ಷತೆ ಹಾಗೂ ಹಿತದೃಷ್ಟಿಯಿಂದ ಬೇಕಾಗುವ ಎಲ್ಲಾ ಮುಂಜಾಗೃತ ಕ್ರಮಗಳನ್ನು ಕೈಗೊಂಡು ತಮ್ಮ ಸಿಬ್ಬಂದಿಗಳ ನೇತೃತ್ವದಲ್ಲಿ ನಡೆಸಬೇಕು. ಸದರಿ ಈ ವಿಷಯದ ಕುರಿತು ನಿಷ್ಕಾಳಜಿಯನ್ನು ತೋರಿ ಯಾವುದೇ ಅವಘಡಗಳು ನಡೆದಿರುವುದು ಕಂಡುಬಂದಲ್ಲಿ ಸದರಿ ಅವಘಡಕ್ಕೆ ಹೊಂಸ್ಟೇ, ಹೋಟೆಲ್/ರೆಸಾರ್ಟ್ ಮಾಲೀಕರೆ ಜವಾಬ್ದಾರರಾಗಿದ್ದು ಸದರಿರವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

ಅನೇಕ ಮಾಲೀಕರ ಬಳಿ ಪ್ರವಾಸೋದ್ಯಮ ಇಲಾಖೆಯ ನಿಯಮಾವಳಿಗಳ ಅನುಸಾರ ನೊಂದಣಿ ಮಾಡಲು ಸರಿಯಾದ ದಾಖಲೆಗಳು ಲಭ್ಯವಿಲ್ಲದೆ ಪಂಚಾಯಿತಿ ಯಿಂದ ನಿರಾಪೇಕ್ಷಣಾ ಪ್ರಮಾಣ ಪತ್ರ ಹಾಗೂ ಪೋಲಿಸ್ ಇಲಾಖೆಯ ನಿರಾಪೇಕ್ಷಣಾ ಪ್ರಮಾಣದೊಂದಿಗೆ ನಡೆಸುತ್ತಿದ್ದಾರೆ.

ಹೀಗಾಗಿ ಜಿಲ್ಲೆಯಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಹೋಂ ಸ್ಟೇಗಳಿಂದಾಗಿ ಅನೈತಿಕ ಚಟುವಟಿಕೆಗಳು ಹೆಚ್ಚುತ್ತಿರುವುದು ಕಂಡು ಬಂದಿರುತ್ತದೆ. ಆದ್ದರಿಂದ ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆಯದಿದ್ದಲ್ಲಿ ಈ ಕೂಡಲೆ ಹೋಟೆಲ್/ರೆಸಾರ್ಟ್ಗಳನ್ನು ಆನ್‌ಲೈನ್ kttf.karnatakatourism.org ಮೂಲಕ ಅಗತ್ಯ ದಾಖಲೆೆಗಳನ್ನು ನೀಡಿ ಪ್ರವಾಸೋದ್ಯಮ ಇಲಾಖೆಯಡಿ ಅಥವಾ ಕೇಂದ್ರ ಸರ್ಕಾರದ Breakfast (https://tourism.gov.in) ಅಡಿಯಲ್ಲಿ ನೊಂದಣಿ ಮಾಡಿಕೊಳ್ಳಬೇಕು. ಈ ಸುದ್ದಿ ಪ್ರಕಟಣೆಗೊಂಡ ಮುಂದಿನ 15 ದಿನಗಳೊಳಗೆ ನೊಂದಣಿ ಮಾಡದೆ ಅನಧಿಕೃತವಾಗಿ ನಡೆಸಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು ಪ್ರವಾಸೋದ್ಯಮ ಇಲಾಖೆ ಉತ್ತರ ಕನ್ನಡ ಜಿಲ್ಲೆ ಕಾರವಾರರವರನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದೆಂದು ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಉಪ ನಿರ್ದೇಶಕ ಜಯಂತ ಎಚ್.ವಿ. ತಿಳಿಸಿದ್ದಾರೆ.

BC Suddi   About Us
For Feedback - [email protected]

Related News

LATEST Post

WhatsApp Icon Telegram Icon