ಮಂಗಳೂರು: ನಿನ್ನೆ ಸುರಿದ ಧಾರಾಕಾರ ಮಳೆಗೆ ನಗರದ ಹಲವೆಡೆ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದೆ. ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೆ ಕೂಡಾ ಹಾನಿಯಾಗಿದೆ. ನಿರಂತರವಾಗಿ ಸುರಿದ ಬಿರುಸಿನ ಮಳೆಗೆ ನಗರದ ಕೆಲವು ಕಡೆ ಕೃತಕ ನೆರೆ ಆವರಿಸಿದೆ.
ಮಳೆ ನೀರು ನಿಂತ ಕಾರಣ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಬಿಜೈ ಬಳಿ ತಡರಾತ್ರಿ ಗುಡ್ಡೆ ಕುಸಿದು ಸಂಚಾರ ವ್ಯವಸ್ಥೆಯೂ ಅಸ್ತವ್ಯಸ್ತವಾಗಿದೆ.
ಮಳೆ ಹಾನಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಡೆಗೋಡೆಯೊಂದು ಬಿದ್ದ ಪರಿಣಾಮ ಹಲವಾರು ಬೈಕ್ ಗಳು ಜಖಂಗೊಂಡಿದ್ದು ಕಾರಿಗೂ ಕೂಡಾ ಹಾನಿಯಾಗಿದೆ.