ಬೆಂಗಳೂರು: ಇತ್ತೀಚೆಗೆ ಸಿಲಿಕಾನ್ ಸಿಟಿಯಲ್ಲಿ ಕ್ಯಾಬ್ನಲ್ಲಿ ರೋಮ್ಯಾನ್ಸ್ ಮಾಡುವವರ ಸಂಖ್ಯೆ ಡಬಲ್ ಆಗಿದೆ. ಜೋಡಿಯಾಗಿ ಬರುವ ಪ್ರಯಾಣಿಕರ ಅಸಭ್ಯ ವರ್ತನೆ ಬಹುತೇಕ ಕ್ಯಾಬ್ ಚಾಲಕರಿಗೆ ಸಾಕಷ್ಟು ಸಮಸ್ಯೆ ತಂದಿಟ್ಟಿದೆ.
ಇದೇ ಕಾರಣಕ್ಕೆ ‘ನಮ್ಮ ಯಾತ್ರಿ’ ಚಾಲಕನೊಬ್ಬ ಕ್ಯಾಬ್ನಲ್ಲಿ ಅಸಭ್ಯವಾಗಿ ವರ್ತಿಸಬೇಡಿ ಅಂತ ಪೋಸ್ಟರ್ ಅಂಟಿಸಿದ್ದಾರೆ. ಸದ್ಯ ಎಲ್ಲೆಡೆ ಇದೇ ಪೋಸ್ಟರ್ ವೈರಲ್ ಆಗ್ತಾ ಇದೆ.
‘ಇದು ಕ್ಯಾಬ್… ಖಾಸಗಿ ಜಾಗ ಅಲ್ಲ, ಓಯೋ ರೂಮ್ ಅಲ್ಲ, ರೋಮ್ಯಾನ್ಸ್ ಮಾಡಬೇಡಿ ಎಂದು ಪೋಸ್ಟರ್ಅನ್ನು ಚಾಲಕ ಅಂಟಿಸಿದ್ದಾರೆ. ಸಿಟಿಯಲ್ಲಿ ಎಲ್ಲಾ ಕಡೆ ಈ ಪೋಸ್ಟರ್ ಬಗ್ಗೆಯೇ ಚರ್ಚೆ ಆಗ್ತಾ ಇದೆ.
ಬಹುತೇಕ ಚಾಲಕರು ಇದೇ ರೀತಿ ಪೋಸ್ಟರ್ ಅಂಟಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.