ಚಿತ್ರದುರ್ಗ : ಸರ್ಕಾರಕ್ಕೆ ನಾಗಮೋಹನ್ ದಾಸ್ ಸಲ್ಲಿಸಿದ ವರದಿಯಲ್ಲಿ ಛಲವಾದಿ ಸಮುದಾಯಕ್ಕೆ ನೀಡುವ ಮೀಸಲಾತಿಯ ಪ್ರಮಾಣ ಕಡಿಮೆಯಾಗಿದೆ ಎಂದು ಸೋರಿಕೆ ವರದಿಯಿಂದ ತಿಳಿದು ಬಂದಿದೆ ಇದು ಏನಾದರೂ ನಿಜವಾದರೆ ಮುಂದಿನ ದಿನದಲ್ಲಿ ಇದರ ವಿರುದ್ದ ಹೋರಾಟವನ್ನು ಮಾಡಲಾಗುವುದು ಎಂದು ಛಲವಾದಿ ಗುರುಪೀಠದ ಶ್ರಿ ಬಸವನಾಗಿ ದೇವ ಶ್ರೀಗಳು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶ್ರೀಗಳು, ನಾಗಮೋಹನ್ ದಾಸ್ ರವರ ಆಯೋಗ ನಮ್ಮ ಸಮುದಾಯದ ಮನೆಗಳನ್ನು ಸರಿಯಾದ ರೀತಿಯಲ್ಲಿ ಗುರುತಿಸಿಲ್ಲ, ಇದರಿಂದ ನಮ್ಮ ಸಮುದಾಯದ ಜನಸಂಖ್ಯೆಯ ಪ್ರಮಾಣ ಕಡಿಮೆಯಾಗಿದೆ,ಇದರಿಂದ ನಮಗೆ ಸಿಗುವಂತ ಮೀಸಲಾತಿಯ ಪ್ರಮಾಣದಲ್ಲಿಯೂ ಸಹಾ ಕಡಿಮೆಯಾಗಿದೆ ಎಂದ ಅವರು ನಿನ್ನೆ ನಾಗಮೋಹನ್ ದಾಸ್ ರವರು ಸರ್ಕಾರಕ್ಕೆ ತಮ್ಮ ವರದಿಯನ್ನು ಸಲ್ಲಿಸಿದ್ದಾರೆ.
ಇದರಲ್ಲಿ ನಮ್ಮ ಸಮುದಾಯಕ್ಕೆ ಶೇ.೫ ರಷ್ಟು ಮೀಸಲಾತಿಯನ್ನು ಮಾತ್ರ ನೀಡಲಾಗಿದೆ ಎಂದು ಪತ್ರಿಕೆಗಳಲ್ಲಿ ಸೋರಿಕೆ ವರದಿಯಿಂದ ತಿಳಿದು ಬಂದಿದೆ ಆದರೆ ಈ ವರದಿ ಇನ್ನೂ ಸಚಿವ ಸಂಪುಟದ ಮುಂದೆ ಹೋಗಿ ಅಲ್ಲಿ ಅಂಗೀಕಾರವಾಗಿ ಸದನದಲ್ಲಿ ಚರ್ಚೆಯಾಗಬೇಕಿದೆ ತದ ನಂತರ ಅದರ ಅಂಗೀಕಾರದ ಪ್ರಶ್ನೆ ಈಗ ಪತ್ರಿಕೆಗಳಲ್ಲಿ ಪ್ರಕಟವಾದ ವರದಿಯಿಂದ ನಮ್ಮ ಸಮುದಾಯಕ್ಕೆ ಅನ್ಯಾಯವಾಗಿದೆ ಎಂದು ಹೇಳಲಾಗುತ್ತಿದೆ ಇದರ ಬಗ್ಗೆ ನಮ್ಮ ಗುರುಪೀಠ ಹೋರಾಟವನ್ನು ಮಾಡಲು ಸಹಾ ಮುಂದಾಗಲಿದೆ ಎಂದರು.
ಕಳೆದ ವರದಿಯಿಂದ ನಮ್ಮ ಸಮುದಾಯಕ್ಕೇ ಶೇ೫.೫೦ರಷ್ಟು ಮೀಸಲಾತಿ ಇತ್ತು ಆದರೆ ಈಗ ಅದರ ಪ್ರಮಾಣ ಕಡಿಮೆಯಾಗಿದೆ ಯಾರೇ ವರದಿಯನ್ನು ನೀಡಿದರೂ ಸಹಾ ಸಮುದಾಯದ ಜನಸಂಖ್ಯೆಯ ಆಧಾರದ ಮೇಲೆ ಮೀಸಲಾತಿಯ ಪ್ರಮಾಣವನ್ನು ನಿಗಧಿ ಮಾಡಬೇಕು ಆದರೆ ನಾಗಮೋಹನ್ ದಾಸ್ ರವರು ನಮ್ಮ ಸಮುದಾಯಕ್ಕೆ ಇದುವರೆವಿಗೂ ಇದ್ದ ಮೀಸಲಾತಿಯ ಪ್ರಮಾಣಕ್ಕಿಂತ ಕಡಿಮೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ ಇದು ಏನಾದರೂ ನಿಜವಾಗಿದ್ದರೆ ಇದರ ವಿರುದ್ದ ಮುಂದಿನ ದಿನದಲ್ಲಿ ಹೋರಾಟವನ್ನು ರೂಪಿಸಲಾಗುವುದೆಂದು ತಿಳಿಸಿದ ಶ್ರೀಗಳು ಸಚಿವ ಸಂಪುಟದಲ್ಲಿ ಈ ವರದಿ ಸಲ್ಲಿಕೆಯಾಗಿ ಅದರಲ್ಲಿನ ಮಾಹಿತಿ ಬಹಿರಂಗವಾಗಿ ಅದರಲ್ಲಿ ನಮ್ಮ ಸಮುದಾಯಕ್ಕೆ ಎಷ್ಟು ಮೀಸಲಾತಿಯನ್ನು ನೀಡಲಾಗಿದೆ ಎಂದು ತಿಳಿದು ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದೆಂದು ಬಸವನಾಗಿ ದೇವ ಶ್ರೀಗಳು ತಿಳಿಸಿದರು.
ಗೋಷ್ಟಿಯಲ್ಲಿ ಉಪಸ್ಥಿತರಿದ್ದ ಛಲವಾದಿ ಸಮುದಾಯದ ಮುಖಂಡರಾದ ಛಲವಾದಿ ತಿಪ್ಪೇಸ್ವಾಮಿ , ನಟರಾಜ್, ದೂಡ್ಡಸಿದ್ದವ್ವನಹಳ್ಳಿಯ ಜಗದೀಶ್, ಅರುಣ್ ಕುಮಾರ್, ಮಂಜುನಾಥ್, ಭಾಗವಹಿಸಿದ್ದರು.