ರಾಜ್ಯದಲ್ಲಿ ಹಕ್ಕಿ ಜ್ವರದ ಭೀತಿಯಿಂದ ಕೆಲವು ಕಡೆಗಳಲ್ಲಿ ಜನರು ಚಿಕನ್ ತಿನ್ನಲು ಹಿಂದೇಟು ಹಾಕುತ್ತಿದ್ದಾರೆ.
ಇದರಿಂದ ಚಿಕನ್ ಬೆಲೆ ಇಳಿಕೆ ಆಗಿದ್ದು, ಒಂದಷ್ಟು ಜನ ಯಾವುದಕ್ಕೂ ಹೆದರದೆ ಖರೀದಿಗೆ ಮುಗಿಬಿದ್ದಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ 70 ರೂ. ಚಿಕನ್ ರೇಟ್ ಕಡಿಮೆಯಾಗಿದ್ದು, ಮಟನ್ ಗೆ ಫುಲ್ ಡಿಮ್ಯಾಂಡ್ ಬಂದಿದೆ. 270 ರೂ. ಇದ್ದ ಚಿಕನ್ ದರ ಇದೀಗ 200 ರೂ. ತಲುಪಿದೆ. ಗ್ರಾಮಾಂತರದಲ್ಲಿ ಬೆಲೆ ಪ್ರತಿ ಕೇಜಿಗೆ 240 ರೂ. ರಿಂದ
180ರೂ.ಗೆ ಇಳಿಕೆ ಕಂಡಿದೆ.
































