ಬೆಂಗಳೂರು: ಇದೀಗ ಗ್ರಾಹಕರಿಗೆ ಅಡುಗೆ ಎಣ್ಣೆ ಬೆಲೆ ಏರಿಕೆಯ ಬರೆ ಬಿದ್ದಿದೆ. ಅದರಲ್ಲೂ ತೆಂಗಿನಕಾಯಿ ಎಣ್ಣೆ ದರ ಲೀಟರ್ಗೆ 300 ರೂ. ಗಡಿ ದಾಟಿದೆ.
ಯಾವುದೇ ಅಡುಗೆ ಮಾಡುವುದಾದರೂ ಅಡುಗೆ ಎಣ್ಣೆ ಮುಖ್ಯವಾಗಿ ಬೇಕಾಗುತ್ತದೆ. ಆದರೆ ಖಾದ್ಯ ತೈಲ ಬೆಲೆ ಕಳೆದೊಂದು ತಿಂಗಳಿಂದ ಏರಿಕೆಯಾಗುತ್ತಲೇ ಇದೆ. ಈ ಮೂಲಕ ಅಡುಗೆ ಎಣ್ಣೆ 10-20 ರೂ. ಏರಿಕೆ ಕಂಡಿದೆ.
ಜಾಗತಿಕ ಮಟ್ಟದಲ್ಲಿ ಪೂರೈಕೆ ಕಡಿಮೆಯಾಗುತ್ತಿರುವ ಹಿನ್ನೆಲೆ ಸನ್ ಫ್ಲವರ್ ಎಣ್ಣೆ ದರ ಏರಿಕೆಯಾದೆ. ಪ್ರಮುಖವಾಗಿ ಸನ್ ಫ್ಲವರ್, ಪಾಮ್ ಆಯಿಲ್, ಕಡಲೇಕಾಯಿ ಎಣ್ಣೆ, ಅರಳೆಎಣ್ಣೆ ಹಾಗೂ ಸಾಸಿವೆ ಎಣ್ಣೆಯಲ್ಲಿ 10-20 ರೂ. ರೂ. ಹೆಚ್ಚಾಗಿದೆ ಎಂದು ಖಾದ್ಯತೈಲ ವ್ಯಾಪಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.