ಜಗದ್ಗುರು ಜಯದೇವ ವೃತ್ತ ಮತ್ತು ನಾಮಫಲಕ ಉದ್ಘಾಟನೆ.!

WhatsApp
Telegram
Facebook
Twitter
LinkedIn

 

ಚಿತ್ರದುರ್ಗ:ನಾಡಿನಲ್ಲಿ ತ್ರಿವಿಧ ರೀತಿಯ ದಾಸೋಹವನ್ನು ಮಾಡುವುದರ ಮೂಲಕ ಜನತೆಯನ್ನು ಉತ್ತಮವಾದ ದಾರಿಯತ್ತ ಕೊಂಡ್ಯೂದ ಕೀರ್ತಿ ಜಯದೇವ ಶ್ರೀಗಳಿಗೆ ಸಲ್ಲುತ್ತದೆ ಎಂದು ಹೆಬ್ಬಾಳ್ನ ವಿರಕ್ತ ಮಠದ ಮಹಾಂತ ರುದ್ರೇಶ್ವರ ಮಹಾಸ್ವಾಮಿಗಳು ತಿಳಿಸಿದರು.

ಜಿಲ್ಲಾ ಬೇಡ ಜಂಗಮ ಸಮಾಜ ಸಂಸ್ಥೆವತಿಯಿಂದ ಚಿತ್ರದುರ್ಗದ ಶ್ರೀ ಚಿನ್ಮೂಲಾದ್ರಿ ಬೃಹನ್ಮಠದ ತ್ರಿವಿಧ ದಾಸೋಹ ತತ್ವದ ರೂವಾರಿ ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ 150ನೇ ಜಯಂತೋತ್ಸವ ಶುಭ ಸಂದರ್ಭದಲ್ಲಿ ಚಿತ್ರದುರ್ಗದ ಮೆದೇಹಳ್ಳಿ ರಸ್ತೆಯ ರಾಷ್ಟ್ರೀಯ ಹೆದ್ದಾರಿ ಬ್ರಿಡ್ಜ್ ಸೇತುವೆಯ ಹತ್ತಿರ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಜಗದ್ಗುರು ಜಯದೇವ ವೃತ್ತ ಮತ್ತು ನಾಮಫಲಕ ಉದ್ಘಾಟನಾ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು,

ಅಂದಿನ ಕಾಲದಲ್ಲಿ ಶಿಕ್ಷಣ ಇಲ್ಲದೆ ಜನತೆ ಪರದಾಡುತ್ತಿದ್ಧಾಗ ನಾಡಿನ ಎಲ್ಲಡೆ ಶಾಲೆಗಳನ್ನು ತೆರೆಯುವುದರ ಮೂಲಕ ಅವರಿಗೆ ಅನ್ನದಾನ ವಿದ್ಯಾದಾನ ಹಾಗೂ ಧರ್ಮದ ಬಗ್ಗೆ ತಿಳಿಸುವ ಕಾರ್ಯವನ್ನು ಜಯದೇವ ಶ್ರೀಗಳು ಮಾಡಿದ್ದರು. ಶ್ರೀಗಳು ಉದಾರವಾದ ಮನಸ್ಸುನ್ನು ಹೊಂದಿದವರಾಗಿದ್ದರು ಕಷ್ಠ ಎಂದು ಬಂಧವರಿಗೆ ಸಹಾಯವನ್ನು ಮಾಡುವುದರ ಮೂಲಕ ಕೊಡುಗೈ ದಾನಿಗಳು ಎಂದು ಹೆಸರನ್ನು ಪಡೆದಿದ್ದರು.

ಅವರ ಬದುಕು ಜೀವನ ಬೇರೆಯವರಿಗೆ ಅದರ್ಶಮಯವಾಗಿತ್ತು. ಸನ್ಯಾಸವನ್ನು ಸ್ವೀಕಾರ ಮಾಡಿದ ಸ್ವಾಮಿಗಳು ಸಮಾಜಕ್ಕೆ ಏನನ್ನು ನೀಡಬೇಕೂ ಅದನ್ನೆಲ್ಲಾವನ್ನು ಸಹಾ ನೀಡಿದ್ದಾರೆ. ನಿಷ್ಠೆಯಿಂದ ಸಮಾಜವನ್ನು ಕಟ್ಟಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಅನ್ನದಾನ ಶಿಕ್ಷಣವನ್ನು ಜಾತಿ ಮತÀ ಬೇಧ ಇಲ್ಲದೆ ಎಲ್ಲರಿಗೂ ಸಹಾ ನೀಡಿದ ಕೀರ್ತಿ ಜಯದೇವ ಶ್ರೀಗಳಿಗೆ ಸಲ್ಲುತ್ತದೆ. ಮಠದ ಕೆರೆಯ ಮುಂಭಾಗದ ಕರೆಯಲ್ಲಿ ಜಯದೇವ ಮೂರ್ತಿಯನ್ನು ನಿರ್ಮಾಣ ಮಾಡಿ ಅದನ್ನು ಪ್ರವಾಸಿ ಕೇಂದ್ರವನ್ನಾಗಿ ಮಾಡಿ ಇದರ ಮಧ್ಯದಲ್ಲಿ ಜಯದೇವ ಶ್ರಿಗಳ ಕಂಚಿನ ಮೂರ್ತಿಯನ್ನು ಸ್ಥಾಪನೆ ಮಾಡಬೇಕಿದೆ ಎಂದು ಶ್ರೀಗಳು ತಿಳಿಸಿ ಅವರ ಆದರ್ಶ ಮತ್ತು ತತ್ವಗಳನ್ನು ನಾವುಗಳು ಮೈಗೂಡಿಸಿಕೊಳ್ಳಬೇಕಿದೆ ಎಂದರು.

ದಾವಣಗೆರೆಯ ಶ್ರೀ ವಿರಕ್ತ ಮಠದ ಡಾ. ಬಸವಪ್ರಭು ಮಹಾಸ್ವಾಮಿಗಳು ಮಾತನಾಡಿ, ಇಂದಿನ ಕಾಲದಲ್ಲಿ ಎಲ್ಲವೂ ಸಹಾ ಸುಲಭವಾಗಿ ಸಿಗುತ್ತದೆ ಆದರೆ ಜಯದೇವ ಶ್ರೀಗಳು ಇದ್ದ ಕಾಲದಲ್ಲಿ ಏನು ಇರಲಿಲ್ಲ, ಇಂದನ ಹಾಗೆ ಕಾರು, ಬಸ್ಸು ವಿಮಾನ, ಮೊಬೈಲ್ ಪೋನ್ ದೂರವಾಣಿ ಇರಲಿಲ್ಲ ಎಲ್ಲೆ ಹೋದರು ಸಹಾ ನಡೆದೇ ಇಲ್ಲದೆ ಎತ್ತಿನ ಗಾಡಿ ಅಥವಾ ಕುದುರೆ ಗಾಡಿಯ ಮೇಲೆ ಹೋಗಬೇಕಿತ್ತು ಇಂತಹ ಸಮಯದಲ್ಲಿ ಜಯದೇವ ಶ್ರೀಗಳು ನಾಡನ್ನು ಸುತ್ತುವುದರ ಮೂಲಕ ಸಮಾಜವನ್ನು ಕಟ್ಟಿದರು, ನಾಡಿನ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಶಿಕ್ಷಣ ಸಂಸ್ಥೇಗಳನ್ನು ತೆರೆಯುವುದರ ಮೂಲಕ ಬಡ ಮಕ್ಕಳಿಗೆ  ಶಿಕ್ಷಣವನ್ನು ದೂರಕುವಂತೆ ಮಾಡಿದ ಕೀರ್ತಿ ಜಯದೇವ ಶ್ರೀಗಳಿಗೆ ಸಲುತ್ತದೆ. 53 ವರ್ಷ ಮುರುಘಾ ಮಠದ ಪೀಠಾಧೀಪತಿಗಳಾಗಿ ಉತ್ತಮವಾದ ಕಾರ್ಯವನ್ನು ಮಾಡಿದ್ದಾರೆ  ಈ ಯುಗವನ್ನು ಸುವರ್ಣ ಯುಗ ಎಂದು ಕರೆಯಲಾಯಿತು ಎಂದರು.

ಶ್ರೀಗಳು ಪೀಠಾಧ್ಯಕ್ಷರಾದ ಸಮಯದಲ್ಲಿ ಮುರುಘಾ ಮಠ ಸಾಲದಲ್ಲಿ ಇತ್ತು ಅದನ್ನು ಪೀಠಾಧ್ಯಕ್ಷರಾಗಿ ಸಾಲವನ್ನು ತೀರಿಸುವುದರ ಮೂಲಕ ಮಠವನ್ನು ನವ ಕೋಟಿ ನಾರಾಯಣ ಎಂಬಂತೆ ಮಾಡಿದರು. ಸಮಾಜದ ಪ್ರಗತಿಗೆ ಸುತ್ತು ಕಟ್ಟು ಎಂದು ಮುರುಘೇಶ ಸೂಚನೆ ನೀಡಿದಂತೆ ಜಯದೇವ ಶ್ರೀಗಳು ದೇಶವನ್ನು ಸುತ್ತುವುದರ ಮೂಲಕ ಬಡತನ,ಆಸಮಾನತೆ, ಆನಕ್ಷರತೆ, ದರಿದ್ರತನ, ಕಿತ್ತು ಹಾಕಿ ಶಿಕ್ಷಣವನ್ನು ನೀಡಿದರು. ಬದುಕನ್ನು ಉದ್ದಾರ ಮಾಡಿದವರ ಜಯದೇವ ಶ್ರೀಗಳು ಮಹಾತ್ಮಗಾಂಧಿಜೀಯವರು ಶ್ರೀಗಳನ್ನು ಬೇಟಿ ಮಾಡಿ ಇವರ ಕಾರ್ಯವನ್ನು ಶ್ಲಾಘಿಸಿ ಕರ್ನಾಟಕ ಏಕೀಕರಣಕ್ಕೆ ಜಯದೇವ ಶ್ರೀಗಳ ಕೊಡುಗೆಯೂ ಸಹಾ ಹೆಚ್ಚಿನ ರೀತಿಯಲ್ಲಿ ಇದೆ. ಶ್ರೀಗಳು ಸ್ಥಾಪನೆ ಮಾಡಿದ ಹಾಸ್ಟಲ್ಗಳಲ್ಲಿ ಇಂದಿನ ಉನ್ನತ ಸ್ಥಾನವನ್ನು ಪಡೆದ ಹಲವಾರು ಜನತೆ ಓದಿದ್ದಾರೆ. ತ್ರಿವಿಧ ದಾಸೋಹಕ್ಕೆ ಪಿತಮಾಹ ಎಂದರೆ ಜಯದೇವ ಶ್ರೀಗಳು ತ್ರಿವಿಧ ದಾಸೋಹಕ್ಕೆ ಅರ್ಥವನ್ನು ನೀಡಿದರು ಜಯದೇವ ಶ್ರೀಗಳು, ಆನ್ನ, ಅಕ್ಷರ, ಆಶ್ರಯ ದಾಸೋಹ ತ್ರಿವಿಧ ಧಾಸೋಹದ ರೂವಾರಿಗಳಾಗಿದ್ದಾರೆ. ಇಂದು ಅವರು ನಮ್ಮ ಬಳಿ ಇಲ್ಲ ಆದರೆ ಅವರು ಮಾಡಿದ  ಸಮಾಜ ಸೇವೆ ಇಂದಿಗೂ ಸಹಾ ನಮ್ಮ ಬಳಿ ಸಾಕ್ಷಿಯಾಗಿದೆ,

ಕಾರ್ಯಕ್ರಮದಲ್ಲಿ ಸಂಸದರಾದ ಗೋವಿಂದ ಕಾರಜೋಳ, ಶಾಸಕರಾದ ಕೆ. ಸಿ. ವೀರೇಂದ್ರ (ಪಪ್ಪಿ), ವಿಧಾನ ಪರಿಷತ್ತು ಸದಸ್ಯರಾದ ಕೆ.ಎಸ್.ನವೀನ್, ಮಾಜಿ ಶಾಸಕರುಗಳಾದ ಎಸ್.ಕೆ.ಬಸವರಾಜನ್, ನಗರಸಭೆ ಅಧ್ಯಕ್ಷರಾದ ಶ್ರೀಮತಿ ಸವಿತಾ ರಘು, ಉಪಾಧ್ಯಕ್ಷರಾದ ಶ್ರೀಮತಿ ಶ್ರೀದೇವಿ ಚಕ್ರವರ್ತಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎಂ.ಕೆ. ತಾಜ್ಪೀರ್, ಆಯುಕ್ತರಾದ ಎಂ.ಎಸ್. ಸೋಮಶೇಖರ್, ಜಿಲ್ಲಾ ಬೇಡ ಜಂಗಮ ಸಮಾಜ ಸಂಸ್ಥೆಯ ಅಧ್ಯಕ್ಷರಾದ ಸೋಮಶೇಖರ್ ಮಂಡಿಮಠ್, ನಗರಸಭೆಯ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷರಾದ ಕೆ.ಬಿ.ಸುರೇಶ್, ಅ.ಭಾ.ವೀ. ಮಹಾಸಭಾದ ಅಧ್ಯಕ್ಷರಾದ ಮಹಡಿ ಶಿವಮೂರ್ತಿ, ವೀರಶೈವ ಸಮಾಜದ ಅಧ್ಯಕ್ಷರಾದ ಹೆಚ್.ಎನ್.ತಿಪ್ಪೇಸ್ವಾಮಿ, ಮಲ್ಲಿಕಾರ್ಜನ್, ಜ್ಞಾನ ಮೂರ್ತಿ, ವಿದ್ಯಾ ವಿಕಾಸನ ವಿಜಯಕುಮಾರ್, ಷಣ್ಮುಖಪ್ಪ ಶರಣಯ್ಯ, ಸೇರಿದಂತೆ ಇತರರು ಭಾಗವಹಿಸಿದ್ದರು, ಇದೇ ಸಂದರ್ಭ ದಲ್ಲಿ ಅ.ಭಾ.ವೀ.ಮಹಾಸಭಾದ ಜಿಲ್ಲಾ ಕಾರ್ಯದರ್ಶಿಗಳಾದ ಎಂ.ಶಶಿಧರ್ ಬಾಬುರವರನ್ನು ಸನ್ಮಾನಿಸ ಲಾಯಿತು.

ತೋಟಪ್ಪ ಪ್ರಾರ್ಥಿಸಿದರೆ, ಬಾಪೂಜಿ ಸಮೂಹ ಸಂಸ್ಥೆಗಳು ಮತ್ತು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಡಾ. ಕೆ. ಎಂ. ವೀರೇಶ್ ಸ್ವಾಗತಿಸಿದರು. ಷಡಾಕ್ಷರಯ್ಯ ಕಾರ್ಯಕ್ರಮ ನಿರೂಪಿಸಿದರು.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon