ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ನಿವೃತ್ತ ನೌಕರರ ತುಟ್ಟಿ ಭತ್ಯೆ ಶೀಘ್ರವೇ ಹೆಚ್ಚಳವಾಗಲಿದೆ. ಜನವರಿ ಒಂದರಿಂದಲೇ ತುಟ್ಟಿ ಭತ್ಯೆ ಏರಿಕೆಯಾಗಲಿದ್ದು, ಈ ತಿಂಗಳ ವೇತನದಲ್ಲಿ ಹೆಚ್ಚಳವಾಗಲಿದೆ.
ಕೇಂದ್ರ ಸರ್ಕಾರ ನೌಕರರು ಮತ್ತು ನಿವೃತ್ತ ನೌಕರರ ತುಟ್ಟಿ ಭತ್ಯೆ(ಡಿಎ) ಮತ್ತು ಡಿಯರ್ ನೆಸ್(ಡಿಆರ್) ಪರಿಹಾರದಲ್ಲಿ ಶೇಕಡ 2ರಷ್ಟು ಏರಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಡಿಸೆಂಬರ್ 31ರಂದು ಬಿಡುಗಡೆ ಮಾಡಿದ 2025 ನವೆಂಬರ್ ನ ಅಖಿಲ ಭಾರತ ಕೈಗಾರಿಕಾ ಕಾರ್ಮಿಕ ಗ್ರಾಹಕರ ದರ ಸೂಚ್ಯಂಕದ ಹಿನ್ನೆಲೆಯಲ್ಲಿ ಡಿಎ ಮತ್ತು ಡಿಆರ್ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ಜನವರಿ 1ರಿಂದ ಏರಿಕೆ ಅನ್ವಯವಾಗಲಿದ್ದು, ಈ ತಿಂಗಳ ವೇತನದಲ್ಲಿ ಹೆಚ್ಚಳವಾಗಲಿದೆ ಎಂದು ಹೇಳಲಾಗಿದೆ.
































