ನವದೆಹಲಿ : ಅಂಚೆ ಕಚೇರಿಗಳನ್ನು ಉಳಿಸಲು ಹಾಗೂ ಮತ್ತೆ ಹೆಚ್ಚು ಹೆಚ್ಚು ಕಾರ್ಯನಿರ್ವಹಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೊಸ ಯೋಜನೆ ಒಂದನ್ನು ಕೈಗೊಂಡಿದೆ.
Gen Z (ಜೆನ್-ಜಿ) 1997 ರಿಂದ 2012 ರ ನಡುವೆ ಜನಿಸಿದ ತಲೆಮಾರಿಗಾಗಿ ಹೊಸ ಯೋಜನೆಯೊಂದನ್ನು ಅಂಚೆ ಕಚೇರಿ ಮೂಲಕ ಪರಿಚಯಿಸಿದೆ. ಡಿಸೆಂಬರ್ 9 ರಂದು ಇಂಡಿಯಾ ಪೋಸ್ಟ್ ಎರಡು ಆಧುನಿಕ ಮತ್ತು ವಿದ್ಯಾರ್ಥಿ ಕೇಂದ್ರಿತ Gen-Z ಅಂಚೆ ಕಚೇರಿಗಳನ್ನು ಸ್ಥಾಪಿಸಿದೆ. ಒಂದನ್ನು ಕೇರಳದ ಕೊಟ್ಟಾಯಂನ ಸಿಎಂಸಿ ಕಾಲೇಜು, ಇನ್ನೊಂದು ವಿಶಾಖಪಟ್ಟಣಂನ ಆಂಧ್ರ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಯಿತು.
ಈ ಹೊಸ ಅಂಚೆ ಕಚೇರಿಗಳ ವಿನ್ಯಾಸಗಳು ಸೃಜನಶೀಲತೆ ಮತ್ತು ತಂತ್ರಜ್ಞಾನದಿಂದ ಕೂಡಿದೆ. Gen-Z ಆಧಾರಿತ ಅಂಚೆ ಕಚೇರಿಗಳು ಇಂದಿನ ಮಕ್ಕಳಿಗೆ ತುಂಬಾ ಅಗತ್ಯವಾಗಿದೆ. ಇದು ವಿದ್ಯಾರ್ಥಿಗಳಿಗೆ ಹೆಚ್ಚು ಸಂಶೋಧನೆ ಮಾಡಲು ಸಹಾಯ ಮಾಡುತ್ತದೆ.
ಕೇರಳದ ಕೊಟ್ಟಾಯಂನಲ್ಲಿರುವ ಸಿಎಮ್ಎಸ್ ಕಾಲೇಜಿನಲ್ಲಿ ಎರಡು ಆಧುನಿಕ ಶೈಲಿಯ ಜೆನ್-ಝಡ್-ವಿಷಯದ ಅಂಚೆ ಕಚೇರಿಗಳನ್ನು ತೆರೆಯಲಾಗಿದೆ. ಇನ್ನೊಂದು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ಆಂಧ್ರ ವಿಶ್ವವಿದ್ಯಾಲಯದಲ್ಲಿ. ಮೊದಲ Gen-Z ಅಂಚೆ ಕಚೇರಿಯನ್ನು ಐಐಟಿ ದೆಹಲಿಯಲ್ಲಿ ತೆರೆಯಲಾಗಿದೆ. ಇದು ಅಂಚೆ ಸೇವೆಗಳಿಗೆ ಆಧುನಿಕ ಸ್ಪರ್ಶವನ್ನು ತರುವ ಪ್ರಯತ್ನದ ಭಾಗವಾಗಿದೆ.
ಕೇರಳ ಹಾಗೂ ಆಂಧ್ರದಲ್ಲಿರುವ ಎರಡು Gen-Z ಅಂಚೆ ವಿಶಿಷ್ಟವಾದ ಆಧುನಿಕ ಒಳಾಂಗಣಗಳನ್ನು ಹೊಂದಿವೆ. ಉತ್ತಮ ತಂತ್ರಜ್ಞಾನಗಳನ್ನು ಬಳಸಲಾಗಿದೆ. ಜತೆಗೆ ಯುವಕರಿಗೆ ವಿಶ್ರಾಂತಿ ವಾತಾವರಣವನ್ನು ನೀಡುತ್ತವೆ. ಇನ್ನು ಕೇರಳದಲ್ಲಿ ಅಂಚೆ ಕಚೇರಿ ಸ್ಥಳವನ್ನು ವಿದ್ಯಾರ್ಥಿಗಳು ಸ್ವತಃ ಇಂಡಿಯಾ ಪೋಸ್ಟ್ ಸಹಯೋಗದೊಂದಿಗೆ ವಿನ್ಯಾಸಗೊಳಿಸಿದ್ದಾರೆ.

































