18,662ಕೋಟಿ ರೂ.ವೆಚ್ಚದಲ್ಲಿ ಮೊದಲ ನೀರಿನಾಳದ ರಸ್ತೆ-ಅಸ್ಸಾಂ ನಲ್ಲಿ ರೈಲು ಸುರಂಗವನ್ನು ನಿರ್ಮಿಸಲಿದೆ ಭಾರತ

WhatsApp
Telegram
Facebook
Twitter
LinkedIn

ಹೊಸದಿಲ್ಲಿ: 18,662 ಕೋ.ರೂ.ಗಳ ವೆಚ್ಚದಲ್ಲಿ ಅಸ್ಸಾಂ ನಲ್ಲಿ ಬ್ರಹ್ಮಪುತ್ರಾ ನದಿಯ ಅಡಿಯಲ್ಲಿ ಗೋಹಪುರ ಮತ್ತು ನುಮಾಲಿಗಡ ನಡುವೆ ಪ್ರವೇಶ ನಿಯಂತ್ರಿತ ಚತುಷ್ಪಥ ಗ್ರೀನ್ನೀಲ್ಡ್ ಕಾರಿಡಾರ್ ನಿರ್ಮಾಣಕ್ಕೆ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ಶನಿವಾರ ಅನುಮೋದನೆ ನೀಡಿದೆ.

ಇದು ಭಾರತದ ಮೊದಲ ಮತ್ತು ವಿಶ್ವದ ಎರಡನೇ ನೀರಿನಾಳದಲ್ಲಿಯ ರಸ್ತೆ-ರೈಲು ಸುರಂಗವಾಗಲಿದೆ.ಪ್ರಸ್ತುತ ರಾ.ಹೆ.715ರಲ್ಲಿನ ನುಮಾಲಿಗಡ ಮತ್ತು ರಾ.ಹೆ.15ರಲ್ಲಿಯ ಗೋಹಪುರ ನಡುವೆ 240 ಕಿ.ಮೀ.ಅಂತರವಿದೆ. ಈ ಮಾರ್ಗವು ರಾ.ಹೆ.52ರಲ್ಲಿಯ ಸಿಲ್ವಾಟ್‌ ಸಮೀಪದ ಕಾಲಿಯಾಭಂಭೋರಾ ಮೂಲಕ ಹಾದು ಹೋಗುತ್ತಿದ್ದು ಪ್ರಯಾಣವು ಆರು ಗಂಟೆಗಳನ್ನು ತೆಗೆದುಕೊಳ್ಳುತ್ತದೆ.ಸುರಂಗವನ್ನು ವಿನ್ಯಾಸ-ಸಾಮಗ್ರಿಗಳ ಖರೀದಿ-ನಿರ್ಮಾಣ (ಇಪಿಸಿ) ಮಾದರಿಯಲ್ಲಿ ನಿರ್ಮಿಸಲಾಗುವುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ತಿಳಿಸಿದೆ.ಯೋಜನೆಯು ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ಮತ್ತು ಇತರ ಈಶಾನ್ಯ ರಾಜ್ಯಗಳಿಗೆ ಗಮನಾರ್ಹ ಪ್ರಯೋಜನವನ್ನು ನೀಡಲಿದೆ. ಜೊತೆಗೆ ಸರಕು ಸಾಗಣೆ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಲಾಜಿಸ್ಟಿಕ್ ವೆಚ್ಚವನ್ನು ತಗ್ಗಿಸುತ್ತದೆ ಮತ್ತು ಪ್ರದೇಶದಲ್ಲಿ ಸಾಮಾಜಿಕ-ಆರ್ಥಿಕ ಬೆಳವಣಿಗೆಗೆ ಪೂರಕವಾಗಲಿದೆ.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon