ಸಿಂಗಾಪುರ : ಡೆಹ್ರಾಡೂನ್ ಮೂಲದ 39 ವರ್ಷದ ಭಾರತೀಯ ನರ್ಸ್, ಇಲಿಪಿ ಶಿವ ನಾಗು, ಸಿಂಗಾಪುರದ ಪ್ರತಿಷ್ಠಿತ ರಾಫೆಲ್ ಆಸ್ಪತ್ರೆಯಲ್ಲಿ ಸ್ಟಾಪ್ ನರ್ಸ್ ಆಗಿದ್ದ ವೇಳೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಈತನಿಗೆ ಒಂದು ವರ್ಷ, ಎರಡು ತಿಂಗಳು ಜೈಲು ಶಿಕ್ಷೆ ನೀಡಲಾಗಿದೆ.
ನ್ಯಾಯಾಲಯದ ದಾಖಲೆಗಳ ಪ್ರಕಾರ, ಈ ಘಟನೆ ಕಳೆದ ಜೂನ್ 18 ರಂದು ನಾರ್ತ್ ಬ್ರಿಡ್ಜ್ ರಸ್ತೆಯಲ್ಲಿರುವ ಆಸ್ಪತ್ರೆಯಲ್ಲಿ ನಡೆದಿದೆ. ಸಂತ್ರಸ್ತ ವ್ಯಕ್ತಿ ತನ್ನ ಅಜ್ಜನನ್ನು ಭೇಟಿಗಾಗಿ ಆಸ್ಪತ್ರೆಗೆ ಬಂದಿದ್ದಾಗ, ಇಲಿಪಿ ಶಿವ ನಾಗು ಅವರು ಸಂತ್ರಸ್ತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಸಂತ್ರಸ್ತನನ್ನು ಸೋಂಕು ಬಾರದಂತೆ ತಡೆಯುವ ನೆಪದಲ್ಲಿ ಆತನ ಕೈಗೆ ಸೋಪು ಹಚ್ಚಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ವರದಿಯಾಗಿದೆ.
ಘಟನೆಯ ಸಮಯದಲ್ಲಿ, ಸಂತ್ರಸ್ತ ರೋಗಿ ಶೌಚಾಲಯಕ್ಕೆ ಹೋಗಿದ್ದ. ಅಲ್ಲಿಗೆ ಬಂದ ಇಲಿಪಿ, ಅಚಾನಕ್ ಅವರ ಮೇಲೆ ದೌರ್ಜನ್ಯ ನಡೆಸಿದ ಹಿನ್ನೆಲೆಯಲ್ಲಿ, ಸಂತ್ರಸ್ತ ಶಾಕ್ ಆಗಿ ಸ್ತಬ್ಧನಾಗಿದ್ದ. ಘಟನೆ ಬೆಳಕಿಗೆ ಬಂದ ಬಳಿಕ, ಜೂನ್ 21 ರಂದು ಪ್ರಕರಣ ವರದಿ ಮಾಡಲಾಯಿತು ಮತ್ತು ಎರಡು ದಿನಗಳ ನಂತರ ಆರೋಪಿಯನ್ನು ಬಂಧಿಸಲಾಗಿದೆ.
































