ತಾಯಿಯನ್ನ ಕೊಲೆ ಮಾಡಿದ ಭಾರತ ಮೂಲದ ವ್ಯಕ್ತಿಗೆ ಲಂಡನ್‌ನಲ್ಲಿ ಜೀವಾವಧಿ ಶಿಕ್ಷೆ

WhatsApp
Telegram
Facebook
Twitter
LinkedIn

ಲಂಡನ್ : ಈಶಾನ್ಯ ಇಂಗ್ಲೆಂಡ್‌ನ ಲೀಸೆಸ್ಟರ್‌ನಲ್ಲಿರುವ ತಮ್ಮ ನಿವಾಸದಲ್ಲಿ 76 ವರ್ಷದ ತಾಯಿಯನ್ನು ಹೊಡೆದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ಮೂಲದ 46 ವರ್ಷದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಮೇ 13ರಂದು ಹತ್ಯೆಯಾದ ವೃದ್ಧೆ ಭಜನ್ ಕೌರ್ ಅವರ ಮೃತದೇಹವನ್ನು ಪತ್ತೆ ಹಚ್ಚಿದ್ದ ಪೊಲೀಸರು ಸಂದೀಪ್ ಸಿಂಗ್ ಅವರನ್ನು ಅರೆಸ್ಟ್ ಮಾಡಿದ್ದರು. ಮೃತ ಭಜನ್ ಕೌರ್ ಅವರ ಮುಖ ಮತ್ತು ತಲೆಗೆ ತೀವ್ರವಾದ ಪೆಟ್ಟು ಬಿದ್ದಿರುವುದು ಕಂಡುಬಂದಿತ್ತು.

ಸAದೀಪ್ ಸಿಂಗ್ ಅನ್ನು ಸತತ 16 ದಿನಗಳ ಕಾಲ ವಿಚಾರಣೆ ನಡೆಸಲಾಯಿತು. ಆ ಬಳಿಕವೇ ಆತನನ್ನು ದೋಷಿ ಎಂದು ಲೀಸೆಸ್ಟರ್ ಕ್ರೋನ್ ನ್ಯಾಯಾಲಯ ನಿರ್ಧರಿಸಿದ್ದು, ಜೀವಾವಧಿ ಶಿಕ್ಷೆ ವಿಧಿಸಿದೆ. 31 ವರ್ಷಗಳು ಜೈಲು ಶಿಕ್ಷೆ ಅನುಭವಿಸಿದ ಬಳಿಕ ಸಂದೀಪ್ ಪೆರೋಲ್‌ಗೆ ಅರ್ಹರಾಗುತ್ತಾರೆ ಎಂದು ಕೋರ್ಟ್ ತಿಳಿಸಿದೆ.

ಇದು ಅತ್ಯಂತ ವಿಚಲಿತಗೊಳಿಸುವ ಪ್ರಕರಣವಾಗಿದ್ದು, ತಮ್ಮ ತಪ್ಪು ಮುಚ್ಚಿಡಲು ಸಿಂಗ್ ಬಹಳ ಯೋಜನೆ ಮಾಡಿದ್ದರು. ತನ್ನ ತಾಯಿಯನ್ನು ಕೊಂದ ನಂತರ, ಸಿಂಗ್ ಹೊರಗೆ ಹೋಗಿ ಗೋಣಿಚೀಲ ಮತ್ತು ಗುದ್ದಲಿಯನ್ನು ಖರೀದಿಸಿದ್ದರು. ತಾಯಿ ಕೌರ್ ಅವರ ಮೃತದೇಹವನ್ನು ತೋಟದಲ್ಲಿ ಹೂಳಲು ಉದ್ದೇಶಿಸಿದ್ದರು. ಆದರೆ, ಗೊಂದಲಕ್ಕೊಳಗಾಗಿ ಕೈಬಿಟ್ಟಿದ್ದರು. ಹತ್ಯೆ ಬಳಿಕ ಮನೆಯನ್ನು ಶುಚಿಗೊಳಿಸಲಾಗಿದೆ. ಸೋಂಕುನಿವಾರಕದ ವಾಸನೆ ಬರುತ್ತಿತ್ತು. ಹತ್ಯೆ ಮುಚ್ಚಿಡಲು ಸಿಂಗ್ ರೂಪಿಸಿದ್ದ ಯೋಜನೆಯನ್ನು ತೋರಿಸುವ ಸ್ಪಷ್ಟ ಪುರಾವೆಗಳಿವೆ ಎಂದು ಡಿಟೆಕ್ಟಿವ್ ಚೀಫ್ ಇನ್ಸ್ಪೆಕ್ಟರ್ ಮಾರ್ಕ್ ಸಿನ್ನಿಕಿ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಅಧಿಕಾರಿಗಳು ಸಿಂಗ್ ಅವರನ್ನು ಸಂಪರ್ಕಿಸಿದಾಗ, ಅವರು ಸುಳ್ಳು ವಿವರಗಳನ್ನು ನೀಡಿದ್ದರು. ತಾಯಿ ಸಾವಿನ ಬಗ್ಗೆ ನನಗೆ ತಿಳಿದಿಲ್ಲ ಎಂದು ಹೇಳಿದ್ದರು ಎಂದು ಡಿಟೆಕ್ಟಿವ್ ತಿಳಿಸಿದ್ದಾರೆ.

ತಂದೆ ತಮಗೆ ಬಿಟ್ಟುಹೋಗಿದ್ದ ಮನೆಯ ಮಾಲೀಕತ್ವದ ವಿಚಾರವಾಗಿ ಜಗಳ ನಡೆದು, ಹತ್ಯೆ ನಡೆದಿದೆ ಎಂಬ ವಿಚಾರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon