ಭಾರತೀಯ ಮಹಿಳಾ ಪೈಲಟ್ ಪಾಕ್‌ನಲ್ಲಿ ಸೆರೆ- ಇಲ್ಲಿದೆ ವೈರಲ್‌ ಸುದ್ದಿಯ ಅಸಲಿಯತ್ತು

WhatsApp
Telegram
Facebook
Twitter
LinkedIn

ನವದೆಹಲಿ: ಭಾರತೀಯ ವಾಯುಪಡೆಯ, ಮೊದಲ ಮಹಿಳಾ ರಫೇಲ್ ಪೈಲಟ್ ಶಿವಾನಿ ಸಿಂಗ್(Shivangi Singh) ಅವರನ್ನು ಪಾಕಿಸ್ತಾನದಲ್ಲಿ ಸೆರೆಹಿಡಿಯಲಾಗಿದೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರlಲ್‌ ಆಗಿದೆ. ಶಿವಾನಿ ಸಿಂಗ್ ಅವರು ಜೆಟ್‌ನಿಂದ ಜಿಗಿಯುವಾಗ ಪಾಕಿಸ್ತಾನದಲ್ಲಿ ಸೆರೆಹಿಡಿಯಲ್ಪಟ್ಟರು ಎಂದು ಪಾಕಿಸ್ತಾನದ ಕೆಲವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಪಿಐಬಿ ಸತ್ಯಶೋಧನ (PIB Fact Check) ವೇಳೆ ಇದೊಂದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಪಿಐಬಿ, ಭಾರತೀಯ ವಾಯುಪಡೆಯ ಮಹಿಳಾ ಪೈಲಟ್ ಸೆರೆಹಿಡಿಯಲ್ಪಟ್ಟಿಲ್ಲ ಎಂದು ತಿಳಿಸಿದೆ.

ಇದಕ್ಕೂ ಮೊದಲು, ಹಿಮಾಲಯ ಪ್ರದೇಶದ ವಿವಿಧ ಪ್ರದೇಶಗಳಲ್ಲಿ ಭಾರತೀಯ ವಾಯುಪಡೆಯ (IAF) ಮೂರು ಯುದ್ಧ ವಿಮಾನಗಳು ಪತನಗೊಂಡಿವೆ ಎಂದು ನಕಲಿ ಒಂದು ಪೋಸ್ಟ್ ಒಂದು ವೈರಲ್‌ ಆಗಿತ್ತು. ಒಟ್ಟಾರೆ ಪಾಕಿಸ್ತಾನ ಸುಳ್ಳು ಸುದ್ದಿಯ ಮೂಲಕ ಭಾರತೀಯ ನಾಗರಿಕರ ದಾರಿತಪ್ಪಿಸುವ ಕೆಲಸ ಮಾಡುತ್ತಿದೆ. ಈ ಬಗ್ಗೆ ಪಿಐಬಿ, ಸಾರ್ವಜನಿಕರಲ್ಲಿ ಜಾಗರೂಕರಾಗಿರಿ ಮತ್ತು ಭೀತಿಯನ್ನು ಹರಡುವ ಇಂತಹ ಪೋಸ್ಟ್‌ಗಳಿಗೆ ಆತಂಕ ಪಡಬೇಡಿ ಎಂದು ಒತ್ತಾಯಿಸಿದೆ.

ಭಾರತದಲ್ಲಿಯೂ ಕೆಲ ಹಿತಶತ್ರುಗಳು, ಸೇನಾ ಕಾರ್ಯಾಚರಣೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಅಪ್‌ಲೋಡ್‌ ಮಾಡುವ ಮೂಲಕ ವಿಕೃತಿ ಮೆರೆದಿರುವ ಪ್ರಕರಣಗಳು ಈಗಾಗಲೇ ಬೆಳಕಿಗೆ ಬಂದಿದೆ. ವಿಜಯಪುರದಲ್ಲಿ ದಂತ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳು ‘ಆಪರೇಷನ್‌ ಸಿಂದೂರ’ ಟೀಕಿಸಿ, ಪಾಕ್‌ ಧ್ವಜ ಹಾಕಿ ಪೋಸ್ಟ್‌ ಮಾಡಿದ್ದು, ಆಕೆಯ ವಿರುದ್ಧ ದೂರು ದಾಖಲಾಗಿದೆ. ಬೆಳ್ತಂಗಡಿಯಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳು ‘ಆಪರೇಷನ್ ಸಿಂದೂರ್’ ಗೆ ಧಿಕ್ಕಾರದ ಹ್ಯಾಶ್ ಟ್ಯಾಗ್ ಹಾಕಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇದೇ ವೇಳೆ, ನಿಟ್ಟೆ ಎಂಜಿನಿಯರಿಂಗ್‌ ಕಾಲೇಜಿನ ಹಾಸ್ಟೆಲ್‌ನಲ್ಲಿ ದೇಶದ್ರೋಹಿ ಗೋಡೆಬರಹ ಕಾಣಿಸಿಕೊಂಡಿದೆ.

 

ವಿಜಯಪುರದ ಫಾರೂಖಿ ಶೇಖ್ ಎಂಬಾಕೆ ‘ಆಪರೇಷನ್‌ ಸಿಂದೂರ’ ಟೀಕಿಸಿ, ವಾಟ್ಸಪ್‌ ಸ್ಟೇಟಸ್‌ ಹಾಕಿಕೊಂಡಿದ್ದಾಳೆ. @hoodyyyyyyy ಹೆಸರಿನ ಖಾತೆಯಲ್ಲಿ ಪೋಸ್ಟ್ ಹಾಕಲಾಗಿದ್ದು, ‘To my Pakistani Friends, people of IOJK, AJK, Avoid going to near military Govt Installation. If you are leaving close to 200 KM border Radius please move inland. May Allah Protect us all from India Ameen#sos’ ಎಂದು ಪಾಕಿಸ್ತಾನ ಧ್ವಜದ ಭಾವಚಿತ್ರ ಹಾಕಿ ಪೋಸ್ಟ್ ಮಾಡಿದ್ದಾಳೆ. (ಪಾಕಿಸ್ತಾನ ಹಾಗೂ ಇತರರಿಗೆ ದೇವರು ರಕ್ಷಣೆ ಮಾಡಲಿ. ಪಾಕಿಸ್ತಾನಿಯರು ಗಡಿ, ಗಡಿಯಿಂದ 200 ಕಿಲೋ ಮೀಟರ್ ವ್ಯಾಪ್ತಿಗೆ ಹೋಗಬೇಡಿ) ಎಂದು ಪೋಸ್ಟ್ ಹಾಕಿ ಪಾಕ್‌ ಪರ ಪ್ರೇಮ ಮೆರೆದಿದ್ದಾಳೆ. ಆಕೆಯ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಆಕೆ ಕ್ಷಮೆಯಾಚಿಸಿ, ‘ಜೈ ಹಿಂದ್’ ಎಂದು ಪೋಸ್ಟ್ ಮಾಡಿದ್ದಾಳೆ.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon