ಕೊಲಂಬೊ: ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡುತ್ತಿರುವ ಭಾರತದ ಇನ್ನಿಂಗ್ಸ್‌ನ 25ನೇ ಓವರ್ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ. ಸದ್ಯ ಧಾರಾಕಾರ ಮಳೆಯಾಗುತ್ತಿದ್ದು, ಹೀಗಾಗಿ ಮೈದಾನವನ್ನು ಕವರ್ಗಳಿಂದ ಮುಚ್ಚಲಾಗಿದೆ. 24.1 ಓವರ್‌ಗಳಲ್ಲಿ ಭಾರತವು ಪ್ರ,ಮುಖ 2 ವಿಕೆಟ್ ನಷ್ಟಕ್ಕೆ 147 ರನ್ ಕಲೆಹಾಕಿದೆ. ಶುಭ್ಮನ್ ಗಿಲ್ (58 ರನ್, 52 ಎಸೆತ) ಹಾಗೂ ರೋಹಿತ್ ಶರ್ಮಾ (56 ರನ್, 49 ಎಸೆತ) ವಿಕೆಟ್ ಕಳೆದುಕೊಂಡಿದ್ದಾರೆ. ಸದ್ಯ ಕ್ರೀಸ್ನಲ್ಲಿ ಕೆಎಲ್ ರಾಹುಲ್ (17) ಹಾಗೂ ವಿರಾಟ್ ಕೊಹ್ಲಿ (8) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
