ಚಿತ್ರದುರ್ಗ : ಚಿತ್ರದುರ್ಗ ತಾಲ್ಲೂಕಿ ದೊಡ್ಡಸಿದ್ದವ್ವನಹಳ್ಳಿ, ಕಸವನಹಳ್ಳಿ, ಎಣ್ಣೆಗೆರೆ, ಮತ್ತು ತೋಪರಮಾಳಿಗೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಹೆಚ್ಚಿನ ಮಳೆಯಿಂದಾಗಿ ಈರುಳ್ಳಿ ಬೆಳೆಗೆ ಹಾನಿಯಾಗಿದೆ. ಬೆಳೆ ಹಾನಿಯಾದ ರೈತರ ಜಮೀನುಗಳಿಗೆ ತೋಟಗಾರಿಕೆ ಉಪನಿರ್ದೇಶಕ ಶರಣಬಸಪ್ಪ ಭೋಗಿ ಮತ್ತು ಸಹಾಯಕ ತೋಟಗಾರಿಕೆ ನಿರ್ದೇಶಕ ಬಿ.ದೇವರಾಜು ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈರುಳ್ಳಿ ಬೆಳೆ ಹಾನಿಯಾಗಿರುವ ರೈತರು, ಬೆಳೆ ಹಾನಿ ಹಾಗೂ ಅಧಿಕಾರಿಗಳು ಜಮೀನಿಗೆ ಭೇಟಿ ನೀಡಿ ಪರೀಶಿಲಿಸಿರುವ ಫೋಟೋಗಳೊಂದಿಗೆ ಆಧಾರ್ ಕಾರ್ಡ್, ಎಫ್.ಐ.ಡಿ., ಪಹಣಿ, ಬ್ಯಾಂಕ್ ಪಾಸ್‍ಬುಕ್, ನಕಲು ಪ್ರತಿಯೊಂದಿಗೆ ತೋಟಗಾರಿಕೆ ಇಲಾಖೆಗೆ ಅರ್ಜಿಯನ್ನು ನೀಡಿ, ರೈತರು ಪರಿಹಾರ ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.