ಚಿತ್ರದುರ್ಗ : ಸುಪ್ರೀಂ ಕೋರ್ಟ್ ತೀರ್ಪಿನಂತೆ ಒಳ ಮೀಸಲಾತಿ ವರ್ಗಿಕರಣಕ್ಕೆ ಸಮೀಕ್ಷೆಗೆ ಅಧಿಕಾರಿಗಳು ಬಂದಾಗ ಬಂಜಾರ(ಲಂಬಾಣಿ) ಎಂದು ಬರೆಸುವಂತೆ ಕರ್ನಾಟಕ ತಾಂಡ ಅಭಿವೃದ್ದಿ ನಿಗಮದ ಅಧ್ಯಕ್ಷ ಜಯದೇವನಾಯ್ಕ ಮನವಿ ಮಾಡಿದರು.
ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ 3395 ತಾಂಡಗಳಿದ್ದು, ಯುಗಾಗಿ ಹಬ್ಬದ ನಂತರ ಕೆಲಸ ಹುಡುಕಿಕೊಂಡು ವಲಸೆ ಹೋಗಿ ಅಕ್ಟೋಬರ್ ವೇಳೆಗೆ ಹಿಂದಿರುಗುತ್ತಾರೆ. ಹಾಗಾಗಿ ಆ ಸಂದರ್ಭದಲ್ಲಿ ಜಾತಿ ಗಣತಿ ನಡೆಸುವಂತೆ ರಾಜ್ಯ ಸರ್ಕಾರ ಹಾಗೂ ಜಸ್ಟಿಸ್ ನಾಗಮೋಹನ್ದಾಸ್
ಇವರಿಗೆ ಮನವಿ ಮಾಡಿಕೊಂಡಿದ್ದೇವೆ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಹಿಂದುಳಿದಿರುವುದನ್ನು ಆಧಾರವಾಗಿಟ್ಟುಕೊಂಡು ಕರಾರುವಕ್ಕಾಗಿ ಅಂಕಿ ಅಂಶಗಳನ್ನು ಜಾತಿ ಗಣತಿಯಲ್ಲಿ ಸಂಗ್ರಹಿಸಬೇಕು. ಗೋವಾದಲ್ಲಿ ಎಪ್ಪತ್ತರಿಂದ ಎಂಬತ್ತು ಸಾವಿರದಷ್ಟು ಲಂಬಾಣಿ ಜನಾಂಗದವರಿದ್ದಾರೆ. ರಾಜ್ಯದಿಂದ ಅಧಿಕಾರಿಗಳನ್ನು ಕಳಿಸಿ ಅಂಕಿ ಅಂಶಗಳನ್ನು ಪಡೆದುಕೊಳ್ಳುವಂತೆಯೂ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಐದರಿಂದ ಹದಿನೇಳರವರೆಗೆ, 19 ರಿಂದ 21 ರವರಗೆ ಹಾಗೂ 19 ರಿಂದ 23 ರವರೆಗೆ ಆನ್ಲೈನ್ನಲ್ಲಿಯೂ ಜನಗಣಿತಿ ನಡೆಯಲಿದೆ. ಮೂರು ಹಂತಗಳಲ್ಲಿ ಒಳ ಮೀಸಲಾತಿ ಸಮೀಕ್ಷೆಗೆ ಅಧಿಕಾರಿಗಳು ತಾಂಡಾಗಳಿಗೆ ಬಂದಾಗ ವಿದ್ಯಾವಂತರು ಮಾಹಿತಿ ಕೊಡಬೇಕು. ಹೈದರಾಬಾದ್ ಕರ್ನಾಟಕ, ಬಾಂಬೆ ಕರ್ನಾಟಕ, ಮಧ್ಯ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದಲ್ಲಿ ಲಂಬಾಣಿ ಜನಾಂಗ ಕೆಲಸ ಹುಡುಕಿಕೊಂಡು ಗುಳೆ ಹೋಗುವುದು ಸಹಜ. ಅಕ್ಟೋಬರ್ನಲ್ಲಿ ತಾಂಡಾಗಳಿಗೆ ಹಿಂದಿರುಗುತ್ತಾರೆ. ಅಂತಹ ಸಂದರ್ಭಗಳಲ್ಲಿ ಸಮೀಕ್ಷೆ ನಡೆಸುವುದರಿಂದ ಈ ಜನಾಂಗಕ್ಕೆ ಅನುಕೂಲವಾಗುತ್ತದೆಂದು ಜಸ್ಟಿಸ್ ನಾಗಮೋಹನ್ದಾಸ್ರವರ ಗಮನಕ್ಕೆ ತಂದಿದ್ದೇವೆ. ಎರಡು ತಿಂಗಳಲ್ಲಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ಕೊಡಬೇಕಿದೆ ಎಂಬ ಉತ್ತರ ನೀಡಿದ್ದಾರೆ. ಲಂಬಾಣಿ ಜನಾಂಗದ ಭವಿಷ್ಯ ನಿರ್ಧರಿಸುವ ಜನಗಣತಿ ಕರಾರುವಕ್ಕಾಗಿರಬೇಕೆಂಬುದು ನಮ್ಮ ಉದ್ದೇಶ ಎಂದು ಹೇಳಿದರು.
ರಾಘವೇಂದ್ರನಾಯ್ಕ ಮಾತನಾಡಿ ಒಳ ಮೀಸಲಾತಿ ಸಮೀಕ್ಷೆಗೆ ಸರ್ಕಾರ ಸಿದ್ದಪಡಿಸಿರುವ ಪ್ರಶ್ನಾವಳಿಗಳು ಮರು ಪರಿಶೀಲನೆಯಾಗಬೇಕು. ದತ್ತಾಂಶ ಸಂಗ್ರಹಕ್ಕೆ ಸರ್ಕಾರದ ಮೇಲೆ ಯಾವ ಒತ್ತಡವೂ ಇಲ್ಲ. ಕೂಲಂಕುಶವಾಗಿ ತಾಳ್ಮೆಯಿಂದ ಗಣತಿಯಾಗಬೇಕು. ಅವಸರದಲ್ಲಿ ದತ್ತಾಂಶ ಸಂಗ್ರಹವಾಗಬಾರದು. ಸಮನ್ವಯ ಸಮಿತಿ ರಚಿಸುವಾಗ ಎಲ್ಲಾ ಸಮಾಜದ ಮುಖಂಡರುಗಳನ್ನು ಏಕೆ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಸರ್ಕಾರವನ್ನು ಪ್ರಶ್ನಿಸಿದರು?
ಬಸವರಾಜನಾಯ್ಕ, ಲಿಂಗಾನಾಯ್ಕ, ಪುಟ್ಟಾನಾಯ್ಕ, ಅನಂತಮೂರ್ತಿನಾಯ್ಕ, ಶ್ರೀನಿವಾಸನಾಯ್ಕ, ತಿಪ್ಪೇಸ್ವಾಮಿ, ನರೇನಹಳ್ಳಿ ಅರುಣ್ಕುಮಾರ್ ಇನ್ನು ಅನೇಕರು