ಚಿತ್ರದುರ್ಗ: ಶಾಸನಗಳು, ಸ್ಮಾರಕಗಳು ನಮ್ಮ ಪರಂಪರೆಯ ಪ್ರತಿರೂಪಗಳಾಗಿವೆ ಎಂದು ಶಾಲಾ ಶಿಕ್ಷಣ ಇಲಾಖೆಯಉಪನಿರ್ದೇಶಕ ಎಂ.ಆರ್.ಮಂಜುನಾಥ್ ಹೇಳಿದರು.
ನಗರದಚಿನ್ಮೂಲಾದ್ರಿ ಪ್ರೌಢಶಾಲಾ ಸಭಾಂಗಣದಲ್ಲಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಮೈಸೂರು ಮತ್ತುಡಿ.ಡಿ.ಪಿ.ಐಕಚೇರಿ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರಾಚ್ಯಪ್ರಜ್ಞೆ ಸ್ಪರ್ಧಾಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಮ್ಮ ಪೂರ್ವಜರು ಪ್ರಾಚ್ಯಾವಶೇಷಗಳು, ಪಾರಂಪರಿಕ ಕಟ್ಟಡಗಳು, ಕೋಟೆ ಕೊತ್ತಲಗಳನ್ನು ಕೊಡುಗೆಯಾಗಿ ನೀಡಿದ್ದು ಅವು ನಮ್ಮ ಪರಂಪರೆಗೆ ಸಾಕ್ಷಿಯಾಗಿ ಇಂದಿಗೂ ಜೀವಂತವಾಗಿ ಉಳಿದಿವೆ. ನಮ್ಮ ಪರಂಪರೆಯ ಪ್ರತಿರೂಪಗಳಾಗಿರುವ ಪ್ರಾಚ್ಯಾವಶೇಷಗಳನ್ನು ಸಂರಕ್ಷಿಸುವುದು ನಮ್ಮೆಲ್ಲರಆದ್ಯಕರ್ತವ್ಯವಾಗಿದೆ.ಪಾರಂಪರಿಕ ಸಂಪತ್ತಿನ ಬಗ್ಗೆ ಪ್ರೌಢಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿ ಸಂರಕ್ಷಿಸುವ ಮನೋಭಾವ ಬೆಳೆಸಬೇಕು ಎಂದು ಶಿಕ್ಷಕರಿಗೆ ಸಲಹೆ ನೀಡಿದರು.
ನೋಡಲ್‌ಅಧಿಕಾರಿ ಕೆ.ಜಿ.ಪ್ರಶಾಂತ್ ಮಾತನಾಡಿ, ಸರ್ಕಾರಿ, ಅನುದಾನಿತ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಪ್ರಬಂಧ, ಭಾಷಣ, ಚಿತ್ರಕಲೆ ಮತ್ತುರಸಪ್ರಶ್ನೆ ಸ್ಪರ್ಧೆಗಳನ್ನು ಜಿಲ್ಲಾ ಹಂತದಲ್ಲಿಆಯೋಜಿಸಲಾಗಿದ್ದು ಪ್ರಥಮ, ದ್ವಿತೀಯ ಮತ್ತುತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳು ರಾಜ್ಯ ಹಂತದ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆಎಂದು ತಿಳಿಸಿದರು. ಪ್ರಬಂಧ ಸ್ಪರ್ಧೆ-ಹೊಳಲ್ಕೆರೆ ಪಟ್ಟಣದಎಂ.ಎA. ಸರ್ಕಾರಿ ಪ್ರೌಢಶಾಲೆಯ ಪಲ್ಲವಿ ಎನ್.(ಪ್ರ), ಭಾಷಣ-ನವ್ಯ(ತೃ), ಚಿತ್ರಕಲೆ-ಸಂಜಯ್(ಪ್ರ), ಚಿತ್ರದುರ್ಗತಾ.ಚವಲಿಹಳ್ಳಿ ಗೊಲ್ಲರಹಟ್ಟಿ ಸರ್ಕಾರಿ ಪ್ರೌಢಶಾಲೆ ಜಿ.ವಿ ರಶ್ಮಿ ಪ್ರಬಂಧ-(ದ್ವಿ), ರಸಪ್ರಶ್ನೆ- ತನುಜಾ, ವಸುಂಧರ(ಪ್ರ),ಹಿರಿಯೂರುತಾ. ಅಂಬಲಗೆರೆ ಸರ್ಕಾರಿ ಪ್ರೌಢಶಾಲೆ ಪ್ರಬಂಧ- ವಿ.ನಯನ(ತೃ), ಚಿತ್ರಕಲೆ- ದರ್ಶಿನಿ(ದ್ವಿ), ಭಾಷಣ ಸ್ಪರ್ಧೆ-ಹಿರಿಯೂರುತಾ, ಜೆ.ಜಿ ಹಳ್ಳಿ ಸರ್ಕಾರಿ ಪ್ರೌಢಶಾಲೆಯ ಶಶಾಂಕ್(ಪ್ರ), ಮೊಳಕಾಲ್ಮೂರು ತಾ, ದೇವಸಮುದ್ರ ಸರ್ಕಾರಿ ಪ್ರೌಢಶಾಲೆಐಶ್ವರ್ಯ(ದ್ವಿ), ಚಳ್ಳಕೆರೆ ತಾ, ಎಂ.ಡಿ.ಆರ್.ಎಸ್ ಶಾಲೆಯ ನಿಖಿಲ್(ತೃ), ಹಿರಿಯೂರುತಾ. ಹರಿಯಬ್ಬೆಯ ಕೆ.ಪಿ.ಎಸ್ ಶಾಲೆಯರಸಪ್ರಶ್ನೆ-ಗೌರಮ್ಮ, ಲೋಚನ(ದ್ವಿ) ಸ್ಥಾನ ಪಡೆದಿದ್ದುರಾಜ್ಯಮಟ್ಟಕ್ಕೆಆಯ್ಕೆಯಾಗಿದ್ದಾರೆ.
ಡಿ.ವೈ.ಪಿ.ಸಿ ವೆಂಕಟೇಶಪ್ಪ, ಡಯಟ್‌ಉಪನ್ಯಾಸಕಎಸ್.ಬಸವರಾಜು, ವಿಷಯ ಪರಿವೀಕ್ಷಕರಾದಚಂದ್ರಣ್ಣ, ಗೋವಿಂದಪ್ಪ, ಮಹಾಲಿಂಗಪ್ಪ, ತೀರ್ಪುಗಾರರಾದ ಮಾರುತಿ, ನಟೇಶ್, ನಾಗರಾಜು, ಮಲ್ಲಿಕಾರ್ಜುನಸ್ವಾಮಿ, ಶಶಿಕಲಾ, ದಾದಾಪೀರ್, ಪುಷ್ಪಲತಾ, ಮುಖ್ಯ ಶಿಕ್ಷಕರಾದ ಕೃಷ್ಣಪ್ಪ, ರಂಗನಾಯ್ಕ ಮತ್ತು ವಿದ್ಯಾರ್ಥಿಗಳು ಇದ್ದರು.