ಹುಬ್ಬಳ್ಳಿ : ಕೇಂದ್ರೀಯ ಲೋಕಸೇವಾ ಆಯೋಗದ ( ಯುಪಿಎಸ್ಸಿ ) ಪರೀಕ್ಷೆಯಲ್ಲಿ ಹುಬ್ಬಳ್ಳಿಯ ತಹಸಿನ್ ಬಾನು ದವಡಿ ತಮ್ಮ ಮೊದಲ ಪ್ರಯತ್ನದಲ್ಲೇ ತಹಸಿನ್ ಬಾನು 482 ನೇ ರ್ಯಾಂಕ್ ಪಡೆದು ಉತ್ತೀರ್ಣರಾಗಿದ್ದಾರೆ. ಅವರ ಸ್ಪೂರ್ತಿದಾಯ ಕಥೆ ಇಲ್ಲಿದೆ.
ಹುಬ್ಬಳ್ಳಿ ನಗರದ ಖಾದರ್ ಬಾಷಾ ಹಾಗೂ ಹಸೀನ ಬೇಗಂ ದಂಪತಿ ಪುತ್ರಿ ತಹಸಿನ್ ಬಾನು ಯುಪಿಎಸ್ಸಿಯಲ್ಲಿ ಉತ್ತೀರ್ಣರಾಗಿರುವ ರಾಜ್ಯದ ಏಕೈಕ ಮುಸ್ಲಿಂ ಯುವತಿಯಾಗಿದ್ದಾರೆ. ಪ್ರಾಥಮಿಕ ಶಿಕ್ಷಣದದಿಂದ ಪಿಯುಸಿವರೆಗೆ ಹುಬ್ಬಳ್ಳಿ ನಗರದಲ್ಲೇ ವ್ಯಾಸಂಗ ಮಾಡಿರುವ ಬಾನು ಬಳಿಕ ಧಾರವಾಡ ಕೃಷಿ ವಿವಿಯಲ್ಲಿ ಬಿಎಸ್ಸಿ ಪದವಿ ಪಡೆದಿದ್ದಾರೆ.
ಜನರ ಸೇವೆ ಮಾಡಬೇಕೆಂಬ ಉದ್ದೇಶದಿಂದ ಯುಪಿಎಸ್ಸಿ ಬರೆದು ಆಯ್ಕೆಯಾದರು. ಇವರ ತಂದೆ ನೈಋತ್ಯ ರೈಲ್ವೆ ಇಲಾಖೆಯಲ್ಲಿ ಗಾರ್ಡ್ ಆಗಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ. ಹುಬ್ಬಳ್ಳಿಯ ತಹಸಿನ್ ಬಾನು ದೇಶದಲ್ಲಿ2021ರ ಸಾಲಿನಲ್ಲಿ ಕೇವಲ 21ನೇ ವಯಸ್ಸಿನಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಕರ್ನಾಟಕ ಏಕೈಕ ಮತ್ತು ದೇಶದ 21ನೇ ಮುಸ್ಲೀಮ್ ವಿದ್ಯಾರ್ಥಿಯರಾಗಿದ್ದಾರೆ.
































