ಚಿತ್ರದುರ್ಗ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗದಲ್ಲಿ ಹಾಲಿ ಇರುವ 66/11 ಕೆವಿ ಚಿತ್ರದುರ್ಗ ವಿದ್ಯುತ್ ಉಪಕೇಂದ್ರದಿಂದ ಪಂಡರಹಳ್ಳಿ 66/11 ಕೆವಿ ಉಪಕೇಂದ್ರದವರೆಗೆ 16.603 ಕಿ.ಮೀ ಉದ್ದದ 66ಕೆವಿ ಕೋಯೆಟ್ ಒಂಟಿ ವಿದ್ಯುತ್ ಪ್ರಸರಣ ಮಾರ್ಗದಲ್ಲಿ ಉದ್ದೇಶಿತ 66ಕೆವಿ ಜೋಡಿ ಪ್ರಸರಣ ಮಾರ್ಗದ ಗೋಪುರದಲ್ಲಿ ಡ್ರೆಕ್ ವಾಹಕದ ಒಂಟಿ ಪ್ರಸರಣ ಮಾರ್ಗ ನಿರ್ಮಾಣದ ಕಾಮಗಾರಿಯು ಮುಕ್ತಾಯಗೊಂಡಿರುತ್ತದೆ.
ಈ 66 ಕೆ.ವಿ.ವಿದ್ಯುತ್ ಮಾರ್ಗವನ್ನು ಇದೇ ಮಾರ್ಚ್ 11ರಂದು ಅಥವಾ ತದನಂತರ ಚೇತನಗೊಳಿಸುವುದರಿಂದ ಈ 66 ಕೆವಿ ಪ್ರಸರಣ ಮಾರ್ಗದ ವಿದ್ಯುತ್ ಗೋಪುರಗಳನ್ನು ಸಾರ್ವಜನಿಕರು ಮುಟ್ಟುವುದಾಗಲಿ, ಹತ್ತುವುದಾಗಲಿ, ಮರದ ರೆಂಬೆ, ಲೋಹದ ತಂತಿಗಳನ್ನು ಹಾಗೂ ಇತರೆ ಯಾವುದೇ ವಸ್ತುಗಳನ್ನು ಮಾರ್ಗದ ಮೇಲೆ ಎಸೆಯುವುದಾಗಲಿ ಮತ್ತು ವಿದ್ಯುತ್ ಗೋಪುರಗಳಿಗೆ ಜಾನುವಾರುಗಳನ್ನು ಕಟ್ಟುವುದಾಗಲಿ ಮಾಡಬಾರದು ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗುತ್ತಿದೆ.
ಈ ಮಾರ್ಗದ ಮೊಗಸಾಲೆಯಲ್ಲಿ ಅಪಾಯದ ಮಟ್ಟದಲ್ಲಿ ಇರುವ ಮರಗಳನ್ನು ಸುರಕ್ಷತೆಯ ದೃಷ್ಠಿಯಿಂದ ಭೂ ಮಾಲೀಕರು ಕೂಡಲೇ ಮಾರ್ಗದ ಮೊಗಸಾಲೆಯಲ್ಲಿರುವ ಮರಗಳನ್ನು ಕಡಿದು ಹಾಕಲು ಅನುಮತಿ ನೀಡಬೇಕು. ಒಂದು ವೇಳೆ ಈ ಸೂಚನೆಯನ್ನು ಉಲ್ಲಂಘಿಸಿದಲ್ಲಿ ಈ ಮಾರ್ಗದಿಂದ ಸಾರ್ವಜನಿಕರಿಗೆ ಆಗುವ ಹಾನಿ, ತೊಂದರೆ, ಅಪಘಾತಗಳಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು ಜವಾಬ್ದಾರಿಯಾಗಿರುವುದಿಲ್ಲ.
ವಿದ್ಯುತ್ ಹಾದುಹೋಗುವ ಪ್ರದೇಶಗಳು: ಚಿತ್ರದುರ್ಗ ನಗರದ ಬಾಪೂಜಿ ನಗರ, ವಿದ್ಯಾನಗರ, ಕೋಡಯ್ಯನಹಟ್ಟಿ, ಮಠದ ಕುರುಬರಹಟ್ಟಿ, ಅಗಸನಕಲ್ಲು, ಮುರುಘರಾಜೇಂದ್ರ ಅಯಿಲ್‍ಮಿಲ್ ಹಿಂಭಾಗ, ಮಾಳಪ್ಪನಹಟ್ಟಿ, ಶ್ಯಾಮರಾವ್ ಬಡಾವಣೆ, ಪೂಜಾ ಮೆಡಲ್ಸ್, ಎನ್.ಎಚ್13 ರಸ್ತೆ, ಕಾವರಿಗರಹಟ್ಟಿ, ಮಾಳಪ್ಪನಹಟ್ಟಿ, ಜಾಲಿಕಟ್ಟೆ, ಜಗದಾಳಿಪುರ, ಈರಜ್ಜನಹಟ್ಟಿ, ಜಾನುಕೊಂಡ, ಪಂಡರಹಳ್ಳಿ ಮತ್ತು ಅತ್ತಿಕಟ್ಟೆ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಮಾರ್ಗ ಹಾದುಹೋಗಲಿದೆ ಎಂದು ಚಿತ್ರದುರ್ಗ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.