ಚಿತ್ರದುರ್ಗ: ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಕೈಮಗ್ಗ ನೇಕಾರರಿಗೆ ವಿಮಾ ಯೋಜನೆ ಕಲ್ಪಿಸುವ ಸಲುವಾಗಿ 2024-25ನೇ ಸಾಲಿನ ನೇಕಾರ ಸಮ್ಮಾನ್ ಯೋಜನೆಯಡಿ ನೊಂದಣಿಯಾಗಿರುವ ಕೈಮಗ್ಗ ನೇಕಾರರನ್ನು ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನೆ (PMJJBY) ಮತ್ತು ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯಡಿ (PMSBY) ಅಳವಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಅದರಂತೆ 2024-25ನೇ ಸಾಲಿನಲ್ಲಿ ನೇಕಾರರ ಸಮ್ಮಾನ್ ಯೋಜನೆಯಡಿ ನೊಂದಣಿಯಾಗಿರುವ ಕೈಮಗ್ಗ ನೇಕಾರರಲ್ಲಿ 18 ರಿಂದ 50 ವರ್ಷದ ಅರ್ಹ ನೇಕಾರರನ್ನು PMJJBYಯೋಜನೆಯಡಿ ಆಳವಡಿಸುವುದು. ಹಾಗೂ 18 ರಿಂದ 70 ವರ್ಷದ ಅರ್ಹ ನೇಕಾರರನ್ನು PMSBY ಈ ಯೋಜನೆಯಡಿ ಅಳವಡಿಸಿ ಮೇಲಿನಂತೆ ಅರ್ಹ ನೇಕಾರರನ್ನು ಈ ಯೋಜನೆಗಳಲ್ಲಿ ಅಳವಡಿಸಿ Annexure-FI, ಪಿ.ಎಂ.ಜಿ.ಜೆ.ಬಿ.ವೈ/ಪಿಎಂಎಸ್‍ಬಿವೈ ಯೋಜನೆಯಡಿ ಆಳವಡಿಸಿರುವ ಸ್ವೀಕೃತಿ, ರೂ.436/- ಮತ್ತು ರೂ.20/- ಕಡಿತವಾಗಿರುವ ಬ್ಯಾಂಕ್ ಸ್ಟೇಟ್‍ಮೆಂಟ್ ಪ್ರತಿ ಹಾಗೂ ಆಧಾರ್ ಕಾರ್ಡ್ ಈ ದಾಖಲಾತಿಗಳೊಂದಿಗೆ ಈ ಕಚೇರಿಗೆ ಇದೇ ಏಪ್ರಿಲ್ 31 ರೊಳಗಾಗಿ ಸಲ್ಲಿಸಲು ಸೂಚಿಸಲಾಗಿದೆ.
ಹೆಚ್ಚಿನ ಮಾಹತಿಗಾಗಿ ದೂರವಾಣಿ ಸಂಖ್ಯೆ 08194-221426 ಗೆ ಕಚೇರಿಯ ವೇಳೆಯಲ್ಲಿ ನೇರವಾಗಿ ಸಂಪರ್ಕಿಸಬಹುದು ಎಂದು ಕೈಮಗ್ಗ ಮತ್ತು ಜವಳಿ ಉಪನಿರ್ದೇಶಕರು ತಿಳಿಸಿದ್ದಾರೆ.