“ಬಿಸಿ ಸುದ್ದಿ” ( bcsuddi.com) ಯೂಟ್ಯೂಬ್ ಚಾನಲ್ 2025 ರ ಹೊಸ ವರ್ಷದಲ್ಲಿ ದಿನಾಂಕ 1 ರಂದು ಸಂಜೆ 6-30 ಕ್ಕೆ “ಕೋಟೆನಾಡಿನ ಕವಿ ಕಾವ್ಯ ಪರಿಚಯಎಂಬ ” ವಿನೂತನ ಕಾರ್ಯಕ್ರಮ ಪ್ರಸಾರಮಾಡಲಿದೆ. ಕಾರ್ಯಕ್ರಮದ ಉದ್ಘಾಟನೆ ನಾಡಿನ ಹೆಸರಾಂತ ಕವಿ ಚಂದ್ರಶೇಖರ ತಾಳ್ಯ ಅವರು ನೆರವೇರಿಸಲಿದ್ದಾರೆ.
ಜಿಲ್ಲೆಯ ಹಿರಿಯ ಕವಿಗಳು ಹಾಗೂ ಹೊಸ ತಲೆಮಾರಿನ ಕಾವ್ಯ ಬರೆಯುವವರ ಪರಿಚಯವೇ ಈ ಕಾರ್ಯಕ್ರಮದ ಉದ್ದೇಶ. ಪ್ರತಿಯೊಬ್ಬ ಕವಿ-ಕವಿಯಿತ್ರಿಯರು ಪ್ರತಿ ಭಾನುವಾರದಂದು ತಮ್ಮ ಎರಡು ಕವನಗಳನ್ನು ವಾಚನಮಾಡಲಿದ್ದಾರೆ. ಸಂಜೆ 6-30ಕ್ಕೆ ಕಾರ್ಯಕ್ರಮ ಪ್ರಸಾರವಾಗಲಿದ್ದು, ಹುರಳಿ ಬಸವರಾಜ್ರವರ ನಿರೂಪಣೆ ಇದೆ.
-ಸಂ
ಬಿಸಿ ಸುದ್ದಿ