ದಾವಣಗೆರೆ : ನಗರದ ಜಿಲ್ಲಾ ವಿಪತ್ತುನಿರ್ವಹಣಾ ಪ್ರಾಧಿಕಾರದಲ್ಲಿ ತೆರವಾಗಿರುವ ಜಿಲ್ಲಾ ವಿಪತ್ತು ಪರಿಣಿತರ ಹುದ್ದೆಗೆ ಒಂದು ವರ್ಷದ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ, ಅರ್ಜಿ ಸಲ್ಲಿಸಲು ಮಾರ್ಚ್ 21 ಕೊನೆಯ ದಿನವಾಗಿದೆ.
ಮಾಸಿಕ ರೂ.48400 ಗಳಂತೆ ಸಂಭಾವನೆ ನೀಡಲಾಗುತ್ತದೆ. ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಿಜ್ಞಾನ, ಸಮಾಜ ವಿಜ್ಞಾನ, ಗ್ರಾಮೀಣಾಭಿವೃದ್ಧಿ, ಪರಿಸರ ವಿಜ್ಞಾನ, ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು. ವಿಪತ್ತು ನಿರ್ವಹಣೆಯಲ್ಲಿ ಕನಿಷ್ಠ 3 ರಿಂದ 5 ವರ್ಷಗಳ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ವಿಪತ್ತು ನಿರ್ವಹಣಾ ಕಾಯ್ದೆ 2005 ಮತ್ತು ವಿವಿಧ ವಿಪತ್ತುಗಳ ಕುರಿತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಮಾರ್ಗಸೂಚಿಗಳ ಬಗ್ಗೆ ತಿಳಿದಿರಬೇಕು. ಬಲವಾದ ಸಂವಹನ ಮತ್ತು ಪ್ರಸ್ತುತಿ ಕೌಶಲ್ಯಗಳನ್ನು ಹೊಂದಿರಬೇಕು. ಕನ್ನಡ ಮತ್ತು ಇಂಗ್ಲಿμï ಭಾμÉಗಳಲ್ಲಿ ಪರಿಣಿತರಾಗಿರಬೇಕು. ಒS ಆಫೀಸ್, ಸ್ಪ್ರೆಡ್‍ಶೀಟ್, PPಖಿ ಮತ್ತು ಇಂಟರ್ನೆಟ್ ಅಪ್ಲಿಕೇಶನ್‍ಗಳ ಉತ್ತಮ ಜ್ಞಾನ ಹೊಂದಿರಬೇಕು.
ಆಸಕ್ತರು ಅರ್ಜಿಯನ್ನು ಸ್ವಯಂ-ದೃಢೀಕೃತ ಪ್ರತಿಗಳು ಸ್ವ-ವಿವರದೊಂದಿಗೆ ಉಪ ಆಯುಕ್ತರು, ವಿಪತ್ತು ನಿರ್ವಹಣಾ ಕೋಶ, ಉಪ ಆಯುಕ್ತರ ಕಚೇರಿ, ಪ್ಲಾಟ್ ಸಂಖ್ಯೆ.77, ಕರೂರ್ ಕೈಗಾರಿಕಾ ಪ್ರದೇಶ, ಹಳೆಯ ಪಿ.ಬಿ. ರಸ್ತೆ, ದಾವಣಗೆರೆ ಇಲ್ಲಿಗೆ ಇದೇ ಮಾ.21 ರೊಳಗೆ ನೊಂದಣಿ ಅಂಚೆ ಮೂಲಕÀ ಕಳುಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ 9945235035 ಸಂಖ್ಯೆಗೆ ಸಂಪರ್ಕಿಸಬೇಕೆಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದ್ದಾರೆ.