ಚಿತ್ರದುರ್ಗ : ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಸಂಪದ ಯೋಜನೆ ಮೂಲಕ 2024-25 ನೇ ಸಾಲಿನ ಕಾರ್ಯಕ್ರಮದಡಿ ಚಿತ್ರದುರ್ಗ ಜಿಲ್ಲೆಯ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಯೋಜನೆಯಡಿ ಸಾಮಾನ್ಯ ವರ್ಗದವರಿಗೆ ಘಟಕ ವೆಚ್ಚದ ಶೇ.40 ರಷ್ಟು ಹಾಗೂ ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೇ.60 ರಷ್ಟು ಸಹಾಯ ಧನ ನೀಡಲಾಗುವುದು. ಜಿಲ್ಲೆಗೆ ಒಂದು ಮಧ್ಯಮ ಗಾತ್ರದ ಅಲಂಕಾರಿಕ ಮೀನುಗಳ ಪಾಲನೆ ಘಟಕದ ಗುರಿ ನಿಗದಿ ಮಾಡಲಾಗಿದ್ದು, ಮಹಿಳೆಯರು ಅರ್ಜಿ ಸಲ್ಲಿಸಬಹುದು.
ಆಸಕ್ತರು ಮೇ 20 ರೊಳಗೆ ಅರ್ಜಿಗಳನ್ನು ಸಂಬಧಿಸಿದ ತಾಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಛೇರಿಗೆ ಅಗತ್ಯ ದಾಖಲಾತಿಗಳ ಸಹಿತ ಸಲ್ಲಿಸುವಂತೆ ಮೀನುಗಾರಿಕೆ ಉಪನಿರ್ದೇಶಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಜೋಗಿಮಟ್ಟಿ ರಸ್ತೆಯ ಪ್ರಶಾಂತ ನಗರದ, ಡಾ.ರವಿಚಂದ್ರನ್ ಕಟ್ಟದಲ್ಲಿನ ಮೀನುಗಾರಿಕೆ ಉಪನಿರ್ದೇಶಕರ ಕಛೇರಿ ಭೇಟಿ ನೀಡಬಹುದು. ದೂರವಾಣಿ ಸಂಖ್ಯೆ 08194-234004 ಕರೆ ಮಾಡಬಹುದು