ಭಾರತ್ ಎಲೆಕ್ಟ್ರಾನಿಕ್ಸ್ ಶಿಕ್ಷಣ ಸಂಸ್ಥೆಯಲ್ಲಿ 2025-26ನೇ ಸಾಲಿಗೆ ಶಿಕ್ಷಕರು ಮತ್ತು ಶಿಕ್ಷಕರೇತರ ಹುದ್ದೆ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ತಾತ್ಕಾಲಿಕವಾಗಿ ಗುತ್ತಿಗೆ ಆಧಾರದ ಮೇಲೆ ಈ ಹುದ್ದೆ ನೇಮಕಾತಿ ನಡೆಯಲಿದೆ. BEL ಎಂಟು ಶಿಕ್ಷಣ ಸಂಸ್ಥೆಗಳಿಗೆ ಈ ಹುದ್ದೆಗಳ ನೇಮಕಾತಿ ನಡೆಯಲಿದೆ.
ಹುದ್ದೆ ವಿವರ : ಶಿಕ್ಷಕರು ಮತ್ತು ಶಿಕ್ಷಕರೇತರ ಸಿಬ್ಬಂದಿ ಒಟ್ಟು ಹುದ್ದೆಗಳು – 57
ಅಧಿಸೂಚನೆ (ಬಿಇಎಲ್)
ವಿದ್ಯಾರ್ಹತೆ: ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ ಜೊತೆಗೆ ಬಿಎಡ್ ಪೂರ್ಣಗೊಳಿಸಿರಬೇಕು.
ಶಿಕ್ಷಕರೇತರ ಹುದ್ದೆ: ಪದವಿ ವಿದ್ಯಾರ್ಹತೆ ಹೊಂದಿರಬೇಕು. ಈಗಾಗಲೇ ಶಿಕ್ಷಣ ಸಂಸ್ಥೆಗಳಲ್ಲಿ ಹುದ್ದೆ ನಿರ್ವಹಣೆ ಮಾಡಿದ ಮೂರು ವರ್ಷದ ಅನುಭವ ಹೊಂದಿರಬೇಕು.
ವಯೋಮಿತಿ : ಅಭ್ಯರ್ಥಿಗಳು ಹುದ್ದೆಗೆ ಅರ್ಜಿ ಸಲ್ಲಿಸುವ ಗರಿಷ್ಠ ವಯೋಮಿತಿ 45 ವರ್ಷ
ಅರ್ಜಿ ಸಲ್ಲಿಕೆ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ಅಧಿಸೂಚನೆ ಜೊತೆಗೆ ನೀಡಿರುವ ನಿಗದಿತ ಅರ್ಜಿಯನ್ನು ಭರ್ತಿ ಮಾಡಿ. ಅದರೊಂದಿಗೆ ಅಗತ್ಯ ದಾಖಲೆ ಪ್ರಮಾಣ ಪತ್ರದೊಂದಿಗೆ ಕೆಳಗಿನ ಹುದ್ದೆಗಳಿಗೆ ಸಾಮಾನ್ಯ ಪೋಸ್ಟ್ ಅಥವಾ ಸ್ಪೀಡ್ ಪೋಸ್ಟ್ ಮಾಡಬಹುದಾಗಿದೆ.
ಅರ್ಜಿ ಸಲ್ಲಿಕೆ ವಿಳಾಸ : ಕಾರ್ಯದರ್ಶಿಗಳಿಗೆ- ಬಿಇಇಎಲ್, ಇಇಎಲ್ ಹೈ ಸ್ಕೂಲ್ ಬಿಲ್ಡಿಂಗ್, ಜಾಲಹಳ್ಳಿ ಪೋಸ್ಟ್, ಬೆಂಗಳೂರು- 560013.
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕಡೆಯ ದಿನ ಏಪ್ರಿಲ್ 4 ಆಗಿದೆ.
ಈ ಹುದ್ದೆ ಕುರಿತ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು bel-india.in ಇಲ್ಲಿಗೆ ಭೇಟಿ ನೀಡಬಹುದು.