ಸಿನಿಮಾದ ನಟಿ ಅರ್ಚನಾ ಕೊಟ್ಟಿಗೆ ಕ್ರಿಕೆಟರ್ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಶರತ್ ಬಿ.ಆರ್ ಕರ್ನಾಟಕ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಆಗಿದ್ದಾರೆ. ಈಗಾಗಲೇ ಶರತ್ ಬಿ. ಆರ್ ಅವರು ಬ್ಯಾಟ್ಸ್ಮನ್, ವಿಕೆಟ್ ಕೀಪರ್ ಆಗಿ ಗುರುತಿಸಿಕೊಂಡಿದ್ದಾರೆ. ಗುಜರಾತ್ ಟೈಟನ್ಸ್ ತಂಡದ ಆಟಗಾರ ಕೂಡ ಆಗಿದ್ದರು.
ಇನ್ನೂ, ನಟಿ ಅರ್ಚನಾ ಕೊಟ್ಟಿಗೆ ಡಿಯರ್ ಸತ್ಯ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಈಗಾಗಲೇ ನಟಿ ಅರ್ಚನಾ ಕೊಟ್ಟಿಗೆ ಇಂಡಸ್ಟ್ರಿಯ ಪ್ರಾಮಿಸಿಂಗ್ ಫೇಸ್ ಎನ್ನುವ ಬಿರುದು ಕೂಡ ಪಡೆದುಕೊಂಡಿದ್ದಾರೆ.
ಉಷಾ ಗೋವಿಂದರಾಜು ನಿರ್ಮಾಣದ “ಎಲ್ರ ಕಾಲೆಳಿಯತ್ತೆ ಕಾಲ” ಸಿನಿಮಾದಲ್ಲಿ ಚಂದನ್ ಶೆಟ್ಟಿ ಜೊತೆಗೆ ನಾಯಕಿ ಅರ್ಚನಾ ಕೊಟ್ಟಿಗೆ ಅಭಿನಯಿಸಿದ್ದಾರೆ. ಒಂದು ಅಲಂಕಾರ ವಿದ್ಯಾರ್ಥಿ ಹಾಗೂ ಶಬರಿ ಸಿನಿಮಾದಲ್ಲಿ ನಟಿಸಿದ್ದಾರೆ.