ಉತ್ತರ ಪ್ರದೇಶ : ಪ್ರತಿಯೊಬ್ಬರ ಯಶಸ್ಸಿನ ಹಿಂದೆ ಒಂದು ಕಥೆ ಇರುತ್ತದೆ. ಅದು ಅನೇಕರಿಗೆ ಸ್ಫೂರ್ತಿಯನ್ನು ನೀಡುತ್ತದೆ. ಅಂತಹ ಒಂದು ಕಥೆ ಐಪಿಎಸ್ ಅಧಿಕಾರಿ ಅರಿಬಾ ನೋಮನ್ ಅವರದ್ದು. ಅವರು ತಮ್ಮ ಚಿಕ್ಕಪ್ಪನ ಕನಸನ್ನು ನನಸು ಮಾಡಲು ತಮ್ಮ ಕೆಲಸವನ್ನು ತೊರೆದು ಯುಪಿಎಸ್‌ಸಿ ಪರೀಕ್ಷೆ ಬರೆದು ಐಪಿಎಸ್ ಅಧಿಕಾರಿಯಾಗುವಲ್ಲಿ ಸಫಲರಾಗುತ್ತಾರೆ.
ಅರಿಬಾ ಅವರ ತಂದೆ ನೋಮನ್ ಅಹ್ಮದ್ ಸುಲ್ತಾನ್‌ಪುರದಲ್ಲಿ ನ್ಯಾಷನಲ್ ಇನ್ಶುರೆನ್ಸ್ ಕಂಪನಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಅರಿಬಾ ಅವರು ಸುಲ್ತಾನ್‌ಪುರದ ಸ್ಟೆಲ್ಲಾ ಮೋರಿಸ್ ಕಾನ್ವೆಂಟ್ ಶಾಲೆಯಲ್ಲಿ 10 ನೇ ತರಗತಿಯನ್ನು ಪೂರ್ಣಗೊಳಿಸಿದರು. 10 ನೇ ತರಗತಿಯ ನಂತರ, ಅವರು ತಮ್ಮ ಚಿಕ್ಕಪ್ಪನೊಂದಿಗೆ ದೆಹಲಿಗೆ ತೆರಳಿ ಅಲ್ಲಿ 12 ನೇ ತರಗತಿಯನ್ನು ಪೂರ್ಣಗೊಳಿಸಿದರು. ಅರಿಬಾ ದೆಹಲಿ ವಿಶ್ವವಿದ್ಯಾನಿಲಯದಿಂದ ಕಂಪ್ಯೂಟರ್ ವಿಜ್ಞಾನದಲ್ಲಿ ಬಿ.ಟೆಕ್ ಪದವಿಯನ್ನು ಪಡೆದರು ಮತ್ತು ನಂತರ ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು.
ಆದಾಗ್ಯೂ, ನಂತರ ಅರಿಬಾ ಅವರ ಚಿಕ್ಕಪ್ಪ ಯುಪಿಎಸ್‌ಸಿ ಪರೀಕ್ಷೆ ಬರೆಯಲು ಅವರನ್ನು ಪ್ರೋತ್ಸಾಹಿಸಿದರು. ಇದು ಅರಿಬಾ ಅವರನ್ನು ಆ ಗುರಿಯತ್ತ ಶ್ರಮಿಸಲು ಪ್ರೆರೇಪಿಸಿತು. ಬಳಿಕ ಅವರು ತಮ್ಮ ಕೆಲಸವನ್ನು ತೊರೆದು ಯುಪಿಎಸ್‌ಸಿ ಪರೀಕ್ಷೆ ಬರೆಯಲು ತಯಾರಾಗುತ್ತಾರೆ. ಅರಿಬಾ ನೋಮನ್ ಅವರು ಉತ್ತರ ಪ್ರದೇಶದ ಸುಲ್ತಾನ್‌ಪುರದವರು. 2021 ರಲ್ಲಿ ನಾಲ್ಕನೇ ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದ ಉತ್ತೀರ್ಣರಾಗುವಲ್ಲಿ ಯಶಸ್ವಿಯಾಗುತ್ತಾರೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ಜೊತೆಗೆ 109 ರ‍್ಯಾಂಕ್ ಕೂಡ ಗಳಿಸುತ್ತಾರೆ.