ನವದೆಹಲಿ: ಐಎಎಸ್ ಪರೀಕ್ಷೆ ಎನ್ನುವುದು ಕಬ್ಬಿಣದ ಕಡಲಡಯಂತೆ. ಯುಪಿಎಸ್‌ಸಿ ಯಲ್ಲಿ ಬೆರಳೆಣಿಕೆಯಷ್ಟು ಜನರು ಮಾತ್ರ ಯಶಸ್ಸು ಕಾಣೋದಕ್ಕೆ ಸಾಧ್ಯ. ಅಂತಹ ಜನರಲ್ಲಿ ಐಪಿಎಸ್ ಅಧಿಕಾರಿ ಆಶ್ನಾ ಚೌಧರಿ ಒಬ್ಬರು. ಐಪಿಎಸ್ ಅಧಿಕಾರಿ ಆಶ್ನಾ ಚೌಧರಿ ಅವರ ಕಥೆ ತುಂಬಾ ಸ್ಪೂರ್ತಿದಾಯಕವಾಗಿದ್ದು, ಎಲ್ಲಾ ಯುಪಿಎಸ್‌ಸಿ ಆಕಾಂಕ್ಷಿಗಳಿಗೂ ಇದು ಸ್ಫೂರ್ತಿ.
ಆಶ್ನಾ ಚೌಧರಿ ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಪಿಲ್ಖುವಾ ಎಂಬ ಸಣ್ಣ ಪಟ್ಟಣದವರು. ಅವರ ತಂದೆ ಡಾ. ಅಜಿತ್ ಸಿಂಗ್ ಸರ್ಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕರು ಮತ್ತು ಅವರ ತಾಯಿ ಇಂದುಸಿಂಗ್ ಗೃಹಿಣಿ. ಆಶ್ನಾ ಚೌಧರಿ ತನ್ನ ಶಾಲಾ ಶಿಕ್ಷಣವನ್ನು ಪಿಲ್ಖುವಾದ ಸೇಂಟ್ ಕ್ಸೇವಿಯರ್ಸ್ ಶಾಲೆ, ಉದಯಪುರದ ಸೇಂಟ್ ಮೇರಿ ಶಾಲೆ ಮತ್ತು ಗಾಜಿಯಾಬಾದ್‌ನ ದೆಹಲಿ ಪಬ್ಲಿಕ್ ಶಾಲೆಗಳಿಂದ ಪೂರ್ಣಗೊಳಿಸಿದರು. ಹನ್ನೆರಡನೇ ತರಗತಿಯಲ್ಲಿ ಶೇಕಡಾ 96.5 ಅಂಕಗಳನ್ನು ಗಳಿಸಿದವರು. ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಆಶ್ನಾ ಚೌಧರಿ ದೆಹಲಿ ವಿಶ್ವವಿದ್ಯಾಲಯದ ಶ್ರೀ ರಾಮ್ ಮಹಿಳಾ ಕಾಲೇಜಿನಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದರು. ಇದಾದ ನಂತರ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸಲು ಪ್ರಾರಂಭಿಸಿದರು.
ಮೂರನೇ ಪ್ರಯತ್ನದಲ್ಲಿ ಯಶಸ್ಸು :
ಆಶ್ನಾ ಚೌಧರಿ 2020 ರಲ್ಲಿ ತನ್ನ ಮೊದಲ ಪ್ರಯತ್ನವನ್ನು ಮಾಡಿದರು, ಆದರೆ ತನ್ನ ಮೊದಲ ಪ್ರಯತ್ನದಲ್ಲಿ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಾಧ್ಯವಾಗಲಿಲ್ಲ. ಆದರೆ ಧೈರ್ಯ ಕಳೆದುಕೊಳ್ಳದೆ, ಮುಂದಿನ ವರ್ಷ 2021 ರಲ್ಲಿ ತನ್ನ ಎರಡನೇ UPSC ಪ್ರಯತ್ನವನ್ನು ಮಾಡಿದರು, ಆದರೆ ಈ ಬಾರಿ ಅವರು ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಕೆಲವು ಅಂಕಗಳಿಂದ ಉತ್ತೀರ್ಣಳಾಗಲು ಸಾಧ್ಯವಾಗಲಿಲ್ಲ. ಎರಡು ಬಾರಿ ವಿಫಲವಾದ ನಂತರ ತುಂಬಾ ನಿರಾಶೆಗೊಂಡರು. ಆದರೆ ಈ ಸಮಯದಲ್ಲಿ ಅವರ ಕುಟುಂಬವು ಅವರನ್ನು ಬೆಂಬಲಿಸಿತು. ಆಶ್ನಾ ಚೌಧರಿ 2022 ರಲ್ಲಿ ತನ್ನ ಮೂರನೇ ಪ್ರಯತ್ನವನ್ನು ಮಾಡಿ ದೊಡ್ಡ ಯಶಸ್ಸನ್ನು ಪಡೆದರು. ಅವರು 116 ನೇ ರ‍್ಯಾಂಕ್ ಪಡೆದರು.
ಆಶ್ನಾ ಚೌಧರಿ ತಮ್ಮ ಆದ್ಯತೆಯಲ್ಲಿ ಐಎಎಸ್ ಆಯ್ಕೆ ಮಾಡುವ ಬದಲು ಐಪಿಎಸ್ ಅಧಿಕಾರಿಯಾಗಲು ಬಯಸಿದರು. ಹೀಗೆ ಐಪಿಎಸ್ ಅಧಿಕಾರಿಯಾಗಿ ಪಯಣ ಆರಂಭಿಸಿದರು. ಆಶ್ನಾ ಚೌಧರಿ ಅವರ ಕಥೆ ತುಂಬಾ ಸ್ಪೂರ್ತಿದಾಯಕವಾಗಿದ್ದು, ಎಲ್ಲಾ ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಸ್ಫೂರ್ತಿದಾಯಕ.