ಹರಿಯಾಣ: ಕೆನಡಾದಲ್ಲಿ ಮತ್ತು ಜರ್ಮನಿಯಲ್ಲಿ ಕೈತುಂಬ ಸಂಬಳ ನೀಡುವ ಎಂಎನ್‌ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ, ಐಪಿಎಸ್ ಪೂಜಾ ಯಾದವ್ ಹರಿಯಾಣ ಮೂಲದವರು. ಕೆಲಸ ಬಿಟ್ಟು ಎರಡನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪಾಸ್ ಮಾಡಿ, ಐಪಿಎಸ್ ಅಧಿಕಾರಿ ಆದವರ ಕತೆ ರೋಚಕ.!
ವಿದೇಶಿ ಎಂಎನ್‌ಸಿ ಕಂಪನಿ ಉದ್ಯೋಗಕ್ಕೆ ಗುಡ್‌ಬೈ ಹೇಳಿ, ಯುಪಿಎಸ್‌ಸಿ ಪರೀಕ್ಷೆ ಬರೆದವರು ಪೂಜಾ ಯಾದವ್. ನಂತರ ಶ್ರಮಹಾಕಿ ಓದಿದ ಇವರು ತಮ್ಮ ಎರಡನೇ ಪ್ರಯತ್ನದಲ್ಲಿ ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡಿ, ಯಶಸ್ಸು ಗಳಿಸಿದರು. ಐಪಿಎಸ್ ಅಧಿಕಾರಿಯೂ ಆದರು. ಪೂಜಾ ಯಾದವ್ ತಮ್ಮ ಶಾಲಾ ಶಿಕ್ಷಣವನ್ನು ಹರಿಯಾಣದಲ್ಲಿ ಪಡೆದರು. ತಮ್ಮ ಎಂ.ಟೆಕ್ ಪದವಿಯನ್ನು ಬಯೋಟೆಕ್ನಾಲಜಿ ಮತ್ತು ಫುಡ್ ಟೆಕ್ನಾಲಜಿ ವಿಷಯದಲ್ಲಿ ಓದಿ ಮುಗಿಸಿದರು. ನಂತರ ಕೆಲಸಕ್ಕಾಗಿ ಕೆನಡಾ ಮತ್ತು ಜರ್ಮನಿಗೆ ಹೋಗಿ ಅಲ್ಲೇ ಕೆಲವು ವರ್ಷಗಳು ಕೆಲಸ ಮಾಡಿದರು. ದೇಶಕ್ಕೆ ಸೇವೆ ಮಾಡುವ ಸಲುವಾಗಿ ವಿದೇಶಿ ಉದ್ಯೋಗ ಬಿಟ್ಟು ಬಂದ ಪೂಜಾ ರವರು ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು.
ಮೊದಲ ಪ್ರಯತ್ನದಲ್ಲಿ ಅರ್ಹತೆ ಪಡೆಯಲಿಲ್ಲ. ಆದರೆ ಗುರಿ ಬಿಡದ ಅವರು ತಮ್ಮ ಎರಡನೇ ಪ್ರಯತ್ನದಲ್ಲೇ ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡುವ ಮೂಲಕ, 2018 ರ ಬ್ಯಾಚ್‌ನಲ್ಲಿ ಐಪಿಎಸ್ ಅಧಿಕಾರಿಯಾಗಿ ಹೊರಹೊಮ್ಮಿದರು.
ಪೂಜಾ ಎಂ.ಟೆಕ್ ಮಾಡಿ, ವಿದೇಶದಲ್ಲಿಯ ಕೆಲಸಕ್ಕೆ ಹೋಗಿದ್ರು ಎಂಬ ಕಾರಣಕ್ಕೆ ಅವರು ಶ್ರೀಮಂತರೆ ಇರಬಹುದು ಎಂದು ಭಾವಿಸುವವರೇ ಹೆಚ್ಚು. ಆದರೆ ಅವರ ಕುಟುಂಬ ಆರ್ಥಿಕವಾಗಿ ಹೆಚ್ಚು ಸಮಸ್ಯೆಗಳನ್ನು ಅನುಭವಿಸಿದೆ. ಇವರು ಬಡ ಕುಟುಂಬದಿಂದ ಬಂದ ಛಲಗಾರ್ತಿ ಆಗಿದ್ದಾರೆ.
ಹಣದ ಸಮಸ್ಯೆ ನೀಗಿಸಿಕೊಳ್ಳುವ ಸಲುವಾಗಿಯೇ ಅವರು ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಅಲ್ಲದೇ ತಮ್ಮ ಸ್ನಾತಕೋತ್ತರ ಪದವಿ ಅಧ್ಯಯನ ವೇಳೆ ರಿಷಶ್ಪನಿಷ್ಟ್ ಕೆಲಸ ಕೂಡ ಮಾಡಿದ್ದಾರೆ. ಪೂಜಾ ಯಾದವ್ ಐಎಎಸ್ ಅಧಿಕಾರಿ ವಿಕಲ್ಪ್ ಭಾರಧ್ವಜ್ ರನ್ನು 2021 ರ ಫೆಬ್ರವರಿ 18 ರಂದು ವಿವಾಹವಾಗಿದ್ದಾರೆ. ಅವರು ಲಾಲ್ ಬಹದ್ಧೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್ , ಮಸ್ಸೂರಿ ಯಲ್ಲಿಯೇ ಪರಿಚಿತರಾಗಿದ್ದರು. ವಿಕಲ್ಪ್ 2016 ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಆಗಿದ್ದಾರೆ.