ಬೆಂಗಳೂರು : ಸಿಎಂ ಮತ್ತು ಮಂತ್ರಿಗಳು ಹೊಸ ವರ್ಷದ ಖುಷಿಯಿಂದ ಊಟಕ್ಕೆ ಸೇರಿದ್ದರು. ಅದಕ್ಕೆ ರಾಜಕೀಯ ಕಲ್ಪಿಸೋದು ಬೇಡ ಎಂದು ಡಿನ್ನರ್ ಪಾರ್ಟಿ ಸಭೆಯನ್ನು ಸಚಿವ ಈಶ್ವರ್ ಖಂಡ್ರೆ ಸಮರ್ಥನೆ ಮಾಡಿಕೊಂಡಿದ್ದಾರೆ.
ಡಿನ್ನರ್ ಪಾರ್ಟಿ ವಿಚಾರವಾಗಿ ಅವರು ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಹೊಸ ವರ್ಷದ ಖುಷಿಯಿಂದ ಊಟಕ್ಕೆ ಎಲ್ಲರೂ ಕರೆಯುತ್ತಾರೆ. ನಾನು ಕೂಡಾ ಊಟಕ್ಕೆ ಕರೆಯುತ್ತೇನೆ. ನಿಮ್ಮನ್ನು ಕರೆಯುತ್ತೇನೆ. ಅದರಲ್ಲಿ ತಪ್ಪೇನು ಎಂದು ಪ್ರಶ್ನೆ ಮಾಡಿದ್ದಾರೆ.
ಡಿನ್ನರ್ ಪಾರ್ಟಿಗೆ ರಾಜಕೀಯ ಕಲ್ಪಿಸೋದು ಬೇಡ. ಹೊಸ ವರ್ಷದ ಖುಷಿ ಇರುತ್ತೆ ಅದಕ್ಕೆ ಕರೆದು ಊಟ, ಟಿಫನ್‌ಗೆ ಕರೆಯೋದು ಸಾಮಾನ್ಯ. ಅದಕ್ಕೆ ರಾಜಕೀಯ ಅನ್ನೋದು ಬೇಡ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಬೆಳಗಾವಿಯಲ್ಲಿ ಆಪ್ತ ಸಚಿವರೊಂದಿಗೆ ಸಿಎಂ ಸಿದ್ದರಾಮಯ್ಯ ಡಿನ್ನರ್ ಮೀಟಿಂಗ್ ನಡೆಸಿದ್ದರು. ಈ ವೇಳೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಕುಟುಂಬ ಸದಸ್ಯರ ಜೊತೆ ವಿದೇಶದಲ್ಲಿ ಪ್ರವಾಸದಲ್ಲಿದ್ದರು. ಈ ವೇಳೆಯಲ್ಲೇ ಸಿದ್ದರಾಮಯ್ಯ ಬಣದಿಂದ ಡಿನ್ನರ್ ಮೀಟಿಂಗ್ ನಡೆದಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಮೂಡಿಸಿತ್ತು.