ಹೆಸರುಕಾಳು ಕೇವಲ ತಿನ್ನೋಕೆ ಮಾತ್ರ ರುಚಿ ಅಂತ ಅಂದುಕೊಳ್ಳಬೇಡಿ. ಹೆಸರುಕಾಳಿನ ಮಹಿಮೆ ಅಂತಿಥದಲ್ಲ. ಸೌಂದರ್ಯ ಹೆಚ್ಚಿಸುವ ಅನೇಕ ಗುಣಗಳು ಹೆಸರುಕಾಳಿನಲ್ಲಿದೆ. ಆರೋಗ್ಯದ ಹಿತದೃಷ್ಟಿಯಿಂದ ಮಾತ್ರ ಇದು ಬೆಸ್ಟ್ ಅಂದುಕೊಳ್ಳಬೇಡಿ, ಬದಲಾಗಿ ನಿಮ್ಮ ಮೊಡವೆ ಸಮಸ್ಯೆ, ಡ್ರೈ ಸ್ಕಿನ್ ಸಮಸ್ಯೆ, ಕೂದಲಿನ ಆರೋಗ್ಯ ಹೀಗೆ ಹಲವು ಸಮಸ್ಯೆಗಳಿಗೆ ಹೆಸರು ಕಾಳು ಪರಿಹಾರ ನೀಡಲಿದೆ.
ಡೆಡ್ ಸ್ಕಿನ್ ತೊಡೆದು ಹಾಕಿ, ಚರ್ಮದ ಟೆಕ್ಚರ್ ಹೊಳೆಯುವಂತೆ ಮಾಡುವ ಸಾಮರ್ಥ್ಯ ಹೆಸರುಕಾಳಿಗಿದೆ. ಇದ್ರಲ್ಲಿ ವಿಟಮಿನ್ ಎ ಮತ್ತು ಸಿ ಅಂಶ ಹೇರಳವಾಗಿದ್ದು ಚರ್ಮದ ಕಾಂತಿ ಹೆಚ್ಚಿಸುವ ಗುಣ ಹೊಂದಿದೆ. ನೈಸರ್ಗಿಕವಾಗಿ ದೊರಕುವ ವಸ್ತುಗಳಿಂದಲೇ ಹೇಗೆ ಹೆಸರುಕಾಳು ಬಳಸಿ ನೀವು ನಿಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು ಸಂಪೂರ್ಣ ಮಾಹಿತಿ ಇಲ್ಲಿದೆ.
ಚರ್ಮದ ಹೊಳಪು ಹೆಚ್ಚಿಸಲು ಹೆಸರುಕಾಳು
50 ಗ್ರಾಂನಷ್ಟು ಹೆಸರುಕಾಳನ್ನು ಒಂದು ರಾತ್ರಿ ನೀರಿನಲ್ಲಿ ಹಾಕಿ ನೆನಸಿಡಿ. ಮಾರನೇ ದಿನ ಬೆಳಿಗ್ಗೆ ಅದನ್ನು ಮಿಕ್ಸಿ ಅಥವಾ ಗ್ರೈಂಡರ್ ಮಾಡಿ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟಿಗೆ ಒಂದು ಟೇಬಲ್ ಸ್ಪೂನ್ ಜೇನುತುಪ್ಪ ಮತ್ತು 1 ಟೇಬಲ್ ಸ್ಪೂನ್ ಬಾದಾಮಿ ಎಣ್ಣೆಯನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.. ಮಿಕ್ಸ್ ಮಾಡಿದ ಕೂಡಲೇ ಮುಖಕ್ಕೆ ಅಪ್ಲೈ ಮಾಡಿ., ಸುಮಾರು ಹದಿನೈದರಿಂದ ಇಪತ್ತು ನಿಮಿಷ ಹಾಗೆಯೇ ಬಿಡಿ. ನಂತ್ರ ತಣ್ಣನೆಯ ನೀರಿನಲ್ಲಿ ಮುಖವನ್ನು ತೊಳೆಯಿರಿ. ಪ್ರತಿ ಎರಡು ದಿನಗಳಿಗೊಮ್ಮೆ ಈ ಪ್ಯಾಕ್ ಅಪ್ಲೈ ಮಾಡಿ ಮತ್ತು ಕಾಂತಿಯುತವಾದ ಹೊಳಪಿನ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಿ.
ತೇವಾಂಶ ಕಳೆದುಕೊಂಡು ಶುಷ್ಕಗೊಳ್ಳುವ ತ್ವಚೆಯುಳ್ಳವರಿಗೆ ಹೆಸರುಕಾಳು ಹೇಳಿ ಮಾಡಿಸಿದ ಒಂದು ಪರಮೌಷಧಿ. ಇದ್ರಲ್ಲಿ ವಿಟಮಿನ್ ಮತ್ತು ಎಝೈಮ್ ಅಂಶಗಳು ಚರ್ಮದ ತೇವಾಂಶವನ್ನು ಉಳಿಸುವಲ್ಲಿ ನೆರವಾಗುತ್ತೆ. ಎರಡು ಟೇಬಲ್ ಸ್ಪೂನ್ ಆಗುವಷ್ಟು ಹೆಸರುಕಾಳನ್ನು ರಾತ್ರಿಯೇ ಹಾಲಿನಲ್ಲಿ ನೆನಸಿಡಿ. ಮರುದಿನ ಬೆಳಿಗ್ಗೆ ಅದರ ಪೇಸ್ಟ್ ತಯಾರಿಸಿಕೊಳ್ಳಿ. ಇದಕ್ಕೆ ಯಾವುದೇ ಇತರೆ ವಸ್ತುಗಳನ್ನು ಮಿಶ್ರಣ ಮಾಡುವ ಅಗತ್ಯವಿಲ್ಲ. ಪೇಸ್ಟ್ ತಯಾರಿಸಿದ ಕೂಡಲೇ ನಿಮ್ಮ ಕುತ್ತಿಗೆ ಮತ್ತು ಮುಖದ ಭಾಗಕ್ಕೆ ಅಪ್ಲೈ ಮಾಡ್ಕೊಳ್ಳಿ. ಸುಮಾರು 20 ನಿಮಿಷದ ನಂತರ ತಣ್ಣನೆಯ ನೀರಿನಿಂದ ಮುಖ ತೊಳೆಯಿರಿ. ಇದನ್ನು ವಾರಕ್ಕೆ ಮೂರು ಬಾರಿ ಮಾಡಿದ್ರೆ ನಿಮ್ಮ ಶುಷ್ಕ ತ್ವಚೆ ನಿವಾರಣೆಯಾಗಿ ಹೈಡ್ರೇಟ್ ಆಗಲು ನೆರವಾಗುತ್ತೆ.
ನಿಮ್ಮ ಚರ್ಮವನ್ನು ತಿಳಿಗೊಳಿಸಿ, ಮುಖದಲ್ಲಿ ಅನಗತ್ಯವಾಗಿ ಬೆಳೆದಿರುವ ಕೂದಲನ್ನು ತೆಗೆಯಲು ಕೂಡ ಹೆಸರುಕಾಳನ್ನು ಬಳಕೆ ಮಾಡಬಹುದು. ಅದ್ರಲ್ಲೂ ಬಾಯಿ ಮತ್ತು ಕೆನ್ನೆಯ ಭಾಗದಲ್ಲಿ ಬೆಳೆಯುವ ಹೆಚ್ಚುವರಿ ಕೂದಲನ್ನು ತೆಗೆಯಲು ಇದು ಸಹಕಾರಿ. ಸುಮಾರು ನೂರು ಗ್ರಾಂನಷ್ಟು ಹೆಸರುಕಾಳನ್ನು ರಾತ್ರಿಯೇ ನೀರಿನಲ್ಲಿ ನೆನಸಿಟ್ಟು ಬೆಳಿಗ್ಗೆ ಅದನ್ನು ಗ್ರೈಂಡ್ ಮಾಡ್ಕೊಳ್ಳಿ. ಈ ಪೇಸ್ಟಿಗೆ ಎರಡು ಟೇಬಲ್ ಸ್ಪೂನ್ ಗಂಧದ ಪುಡಿ ಮತ್ತು ಎರಡು ಟೇಬಲ್ ಸ್ಪೂನ್ ಕಿತ್ತಲೆ ಸಿಪ್ಪೆಯ ಪುಡಿಯನ್ನು ಸೇರಿಸಿ.ನಂತರ ಅದಕ್ಕೆ ಕೆಲವು ಹನಿಗಳಷ್ಟು ಅಥವಾ ಪೇಸ್ಟ್ ತಯಾರಿಸಿಕೊಳ್ಳಲು ಸಹಕಾರಿಯಾಗುವಷ್ಟು ಹಾಲನ್ನು ಸೇರಿಸಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ಮುಖಕ್ಕೆ ಅಪ್ಲೈ ಮಾಡಿ. ವೃತ್ತಾಕಾರದಲ್ಲಿ ಮುಖವನ್ನು ಸ್ಕ್ರಬ್ ಮಾಡ್ಕೊಳ್ಳಿ. ಕೆಲವು ನಿಮಿಷಗಳವರೆಗೆ ಸ್ಕ್ರಬ್ ಮಾಡಿದ ನಂತ್ರ ಮುಖವನ್ನು ತಣ್ಣನೆಯ ನೀರಿನಲ್ಲಿ ತೊಳೆಯಿರಿ.. ವಾರಕ್ಕೆ ಎರಡರಿಂದ ಮೂರು ಬಾರಿ ಹೀಗೆ ಮಾಡಿದ್ರೆ ಫಲಿತಾಂಶ ಏನು ಅನ್ನೋದನ್ನು ನೀವೇ ಗಮನಿಸಿಕೊಳ್ಳಬಹುದು.
ಹೆಸರುಕಾಳಿಗೆ ನೈಸರ್ಗಿಕವಾಗಿಯೇ ಮುಖವನ್ನು ಬ್ಲೀಚ್ ಮಾಡುವ ಸಾಮರ್ಥ್ಯವಿದೆ. ಅದು ನಿಮ್ಮ ಚರ್ಮಕ್ಕೆ ಸೂರ್ಯನ ಕಿರಣಗಳಿಂದಾಗುವ ಹಾನಿಯನ್ನು ತೊಡೆದು ಹಾಕುವಲ್ಲಿ ನೆರವಾಗುತ್ತೆ. ಅಷ್ಟೇ ಅಲ್ಲ ಕೀಟಾಣು ಪ್ರತಿಬಂಧಕ ಗುಣವನ್ನೂ ಕೂಡ ಇದು ಹೊಂದಿದೆ. ಚರ್ಮಕ್ಕೆ ತಂಪು ಫೀಲ್ ನೀಡಿ, ಚರ್ಮ ಫ್ರೆಶ್ ಆಗಿ ಕಾಣುವುದೂ ಅಲ್ಲದೆ ಚರ್ಮದಲ್ಲಿ ಗ್ಲೋ ಬರುವಂತೆ ನೋಡಿಕೊಳ್ಳುತ್ತೆ. ರಾತ್ರಿಯೇ ಸುಮಾರು ಮುಕ್ಕಾಲು ಕಪ್ ನಷ್ಟು ಹೆಸರುಕಾಳನ್ನು ನೀರಿನಲ್ಲಿ ನೆನಸಿಡಿ. ಬೆಳಿಗ್ಗೆ ಅದನ್ನು ಚೆನ್ನಾಗಿ ಪೇಸ್ಟ್ ಮಾಡ್ಕೊಳ್ಳಿ. ಅದಕ್ಕೆ ಎರಡು ಟೇಬಲ್ ಸ್ಪೂನ್ ಮೊಸರು ಸೇರಿಸಿ ನಿಮ್ಮ ಚರ್ಮದಲ್ಲಿ ಟ್ಯೂನ್ ಆಗಿರುವ ಜಾಗಕ್ಕೆ ಅಪ್ಲೈ ಮಾಡಿ.ಹತ್ತು ನಿಮಿಷದ ನಂತ್ರ ವಾಷ್ ಮಾಡಿ. ದಿನ ಬಿಟ್ಟು ದಿನ ಹೀಗೆ ಮಾಡಿಕೊಳ್ಳೋದ್ರಿಂದ ಚರ್ಮದ ಟ್ಯಾನ್ ರಿಮೂವ್ ಆಗಲು ಇದು ನೆರವಾಗುತ್ತೆ.
ಚರ್ಮದ ರಂದ್ರಗಳು ಜಿಡ್ಡಿನಂಶ ಮತ್ತು ಧೂಳಿನಿಂದ ಮುಚ್ಚಿಹೋಗುವುದನ್ನು ತಡೆದು ಚರ್ಮದ ಸರಾಗ ಉಸಿರಾಟಕ್ಕೆ ನೆರವು ನೀಡುವ ಸಾಮರ್ಥ್ಯ ಹೆಸರುಕಾಳಿಗಿದೆ. ಚರ್ಮದಲ್ಲಿರುವ ಕೊಳಕುಗಳನ್ನು ತೆಗೆದುಹಾಕಿ ಫ್ರೆಶ್ ಆಗಿ ಮತ್ತು ಸ್ವಚ್ಛವಾಗಿ ಕಾಣುವಂತೆ ಮಾಡುವ ಸಾಮರ್ಥ್ಯ ಹೆಸರುಕಾಳಿಗಿದೆ. ಕಾಲು ಕಪ್ ನಷ್ಟು ಹೆಸರುಕಾಳನ್ನು ರಾತ್ರಿಯೆ ನೆನೆಹಾಕಿ ಬೆಳಿಗ್ಗೆ ಪೇಸ್ಟ್ ತಯಾರಿಸಿಕೊಳ್ಳಿ.. ಅದಕ್ಕೆ ಮನೆಯಲ್ಲೇ ತಯಾರಿಸಿದ ಎರಡು ಟೇಬಲ್ ಸ್ಪೂನ್ ತುಪ್ಪವನ್ನು ಮಿಕ್ಸ್ ಮಾಡಿ. ಈ ಪೇಸ್ಟನ್ನು ಚರ್ಮದ ಮೇಲ್ಮುಖವಾಗಿ ಮಸಾಜ್ ಮಾಡಿ. ವಾರಕ್ಕೆ ಮೂರು ಬಾರಿ ಈ ಪೇಸ್ಟ್ ತಯಾರಿಸಿಕೊಂಡು ಹಚ್ಚಿಕೊಳ್ಳಿ. ಮುಖದ ಮೊಡವೆಗಳು ಹೇಳಹೆಸರಿಲ್ಲದಂತೆ ಮಾಯವಾಗದೇ ಇದ್ರೆ ಆಮೇಲೆ ಹೇಳಿ.
ಕೂದಲಿನ ಬೆಳವಣಿಗೆಗೂ ಬೇಕು ಹೆಸರುಕಾಳು
ಹೆಸರುಕಾಳು ಕೂದಲಿಗೆ ತಂಪು ಫೀಲಿಂಗ್ ನೀಡಿ ಬೆಸ್ಟ್ ಕಂಡೀಷನರ್ ಆಗೋದು ಮಾತ್ರವಲ್ಲ, ಕೂದಲಿನ ಬೆಳವಣಿಗೆಗೂ ನೆರವಾಗುತ್ತೆ. ಹೆಸರುಕಾಳಿನಲ್ಲಿ ಫ್ಯಾಟ್, ಮಿನರಲ್ಸ್, ಮತ್ತು ವಿಟಮಿನ್ ಅಂಶಗಳು ಹೇರಳವಾಗಿರೋದ್ರಿಂದ ಇದು ಕೂದಲು ತುಂಡುತುಂಡಾಗಿ ಉದುರುವುದನ್ನು ನಿಯಂತ್ರಿಸುತ್ತೆ. ವಿಟಮಿನ್ ಸಿ ಮತ್ತು ಆಂಟಿ ಆಕ್ಸಿಡೆಂಟ್ ಗುಣಗಳು ಕೂದಲು ಬುಡಸಮೇತ ಕಿತ್ತು ಬರುವುದನ್ನು ತಡೆಯುತ್ತೆ. ಮುಕ್ಕಾಲು ಕಪ್ ನಷ್ಟು ಹೆಸರುಕಾಳನ್ನು ನೀರಿನಲ್ಲಿ ಒಂದು ರಾತ್ರಿ ನೆನಸಿಟ್ಟು ಬೆಳಿಗ್ಗೆ ಪ್ರೆಷರ್ ಕುಕ್ಕರ್ ಬಳಸಿ ಬೇಯಿಸಿ. ಬೆಂದ ಮಿಶ್ರಣವನ್ನು ತಣ್ಣಗಾದ ನಂತ್ರ ಪೇಸ್ಟ್ ತಯಾರಿಸಿಕೊಳ್ಳಿ. ಕೂದಲು ಉದ್ದು ಇರುವವರು ಇನ್ನೂ ಹೆಚ್ಚು ಹೆಸರುಕಾಳನ್ನು ತೆಗೆದುಕೊಳ್ಳಬಹುದು. ತಯಾರಿಸಿಕೊಂಡ ಪೇಸ್ಟಿಗೆ ಒಂದು ಮೊಟ್ಟೆಯ ಬಿಳಿಭಾಗವನ್ನು ಸೇರಿಸಿ, ಮತ್ತು ಒಂದು ಟೇಬಲ್ ಸ್ಪೂನ್ ಆಗುವಷ್ಟು ಲಿಂಬೆಯ ರಸವನ್ನು ಮಿಶ್ರಣ ಮಾಡಿ.. ನಂತ್ರ ಅರ್ದ ಬಟ್ಟಲಿನಷ್ಟು ಮೊಸರನ್ನು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಕಲಸಿ ಪೇಸ್ಟ್ ತಯಾರಿಸಿಕೊಳ್ಳಿ.
ಇದನ್ನು ನಿಮ್ಮ ಕೂದಲಿಗೆ ಅಪ್ಲೈ ಮಾಡಿ. ಎರಡು ಗಂಟೆ ಕೂದಲಿನಲ್ಲಿ ಈ ಮಿಶ್ರಣವಿರಲಿ. ಆ ಕಡೆ ಈ ಕಡೆ ಓಡಾಡುವಾಗ ಮಿಶ್ರಣ ತೊಂದರೆ ನೀಡಬಾರದು ಅಂದ್ರೆ ಹೇರ್ ಕ್ಯಾಪ್ ತೊಟ್ಟುಕೊಳ್ಳಿ. ಎರಡುಗಂಟೆಯ ನಂತ್ರ ಮೈಲ್ಡ್ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ. ಒಂದು ವಾರಕ್ಕೆ ಒಮ್ಮೆ ಈ ಹೇರ್ ಪ್ಯಾಕ್ ಬಳಸಿಕೊಳ್ಳಬಹುದು. ಕೂದಲು ದಟ್ಟವಾಗಿ ಮತ್ತು ಉದ್ದವಾಗಿ ಬೆಳೆಯುವುದನ್ನು ನೀವೇ ಗಮಿಸಿಕೊಳ್ಳಬಹುದು.ಹೀಗೆ ಹಲವು ಕಾರಣಗಳಿಂದಾಗಿ ಹೆಸರುಕಾಳು ನಿಮ್ಮ ಚರ್ಮ ಮತ್ತು ಕೂದಲಿನ ಸೌಂದರ್ಯವರ್ಧಕವಾಗಿ ಕೆಲಸ ಮಾಡುತ್ತೆ.