ಚಿತ್ರದುರ್ಗ: ಷೇರುದಾರರು ನಮ್ಮನ್ನು ನಂಬಿ ನಮ್ಮ ಗುಂಪಿಗೆ ಪೂರ್ಣ ಪ್ರಮಾಣದ ಬಹುಮತವನ್ನು ನೀಡಿದ್ದಾರೆ ಇದಕ್ಕೆ ತಕ್ಕಂತೆ ಮುಂದಿನ ದಿನಮಾನದಲ್ಲಿ ಸೊಸೈಟಿಯನ್ನು ಅಭಿವೃದ್ದಿಯತ್ತ ಕೊಂಡ್ಯೂಯುವ ಹೊಣೆಗಾರಿಕೆ ನಮ್ಮ ಮೇಲಿದೆ, ಯಾರಿಗೇ ಸಾಲವನ್ನು ನೀಡುವಾಗಲೂ ಸಹಾ ಅವರ ಬಗ್ಗೆ ಪೂರ್ಣ ಪ್ರಮಾಣದಲ್ಲಿ ಪರೀಶೀಲನೆಯನ್ನು ಮಾಡುವುದರ ಮೂಲಕ ಸಾಲವನ್ನು ನೀಡಬೇಕಿದೆ ಎಂದು ವೀರಶೈವ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ನ ನೂತನ ಅಧ್ಯಕ್ಷರಾದ ಶಿವಕುಮಾರ್ ಪಟೇಲ್ ತಿಳಿಸಿದರು.
ಚಿತ್ರದುರ್ಗ ನಗರದ ನೀಲಕಂಠೇಶ್ವರ ದೇವಸ್ಥಾನದ ಬಳಿಯಲ್ಲಿರುವ ವೀರಶೈವ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಲಿಮಿಟೆಡ್ಗೆ ಕಳೆದ 28 ರಂದು ಚುನಾವಣೆ ನಡೆದಿದ್ದು, ಇದರಲ್ಲಿ ಆಯ್ಕೆಯಾದ 11 ಜನ ನಿರ್ದೆಶಕರಲ್ಲಿ ಇಂದು ಸೊಸೈಟಿಯ ಅಧ್ಯಕ್ಷ-ಉಪಾದ್ಯಕ್ಷ ಸ್ಥಾನಕ್ಕೆ ಚುನಾವಣಾಧಿಕಾರಿಗಳಾದ ಮೊಹಮ್ಮದ್ ಯೂನುಸ್ ಪರ್ವೀಜ್ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಶಿವಕುಮಾರ್ ಪಟೇಲ್ ರವರು ಅಧಿಕಾರವನ್ನು ಸ್ವೀಕಾರ ಮಾಡಿದ ನಂತರ ಮಾತನಾಡಿ, ಒಂದು ಹಣಕಾಸು ಸಂಸ್ಥೆ ಉತ್ತಮವಾಗಿ ನಡೆಯಬೇಕಾದರೆ ಅಲ್ಲಿನ ಕಾರ್ಯಕಾರಿ ಸಮಿತಿ, ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗ ಉತ್ತಮವಾಗಿ ಇದ್ದಾಗ ಮಾತ್ರ ಆ ಹಣಕಾಸು ಸಂಸ್ಥೆ ಚನ್ನಾಗಿ ನಡೆಯಲು ಸಾಧ್ಯವಿದೆ, ಈ ಹಿನ್ನಲೆಯಲ್ಲಿ ನಮ್ಮಲ್ಲಿ ಯಾರೇ ಸಾಲವನ್ನು ಪಡೆಯುವಾಗ ಅವರ ಪೂರ್ವ ಪರವನ್ನು ತಿಳಿದುಕೊಂಡು ಸಾಲವನ್ನು ನೀಡಬೇಕಿದೆ, ಸಾಲಕ್ಕೆ ಜಾಮೀದಾರರಾಗುವವರು ಸಹಾ ಅವರ ಬಗ್ಗೆ ತಿಳಿಯುವುದು ಒಳ್ಳೇಯದು ಎಂದರು.
ಈ ಭಾರಿ ಗೆಲುವು ಸಾಧಿಸಿದ ಸೊಸೈಟಿಯ ನಿರ್ದೆಶಕರಲ್ಲಿ ಬಹುತೇಕರು ಪುನರ್ ಆಯ್ಕೆಯಾಗಿದ್ಧಾರೆ, ಕೆಲವರು ಹೊಸದಾಗಿ ಆಯ್ಕೆಯಾಗಿದ್ದಾರೆ ಇವರು ಸೊಸೈಟಿಯ ನಿಯಮಗಳನ್ನು ತಿಳಿಯಬೇಕಿದೆ. ಕಳೆದ ಬಾರಿ ಸೊಸೈಟಿಯು ಯಾವುದೇ ರೀತಿಯ ಸುಸ್ತಿ ಇಲ್ಲದ ರೀತಿಯಲ್ಲಿ ಆಡಳಿತವನ್ನು ನಡೆಸಲಾಗಿದೆ. ಕಳೆದ ವರ್ಷದಲ್ಲಿ ಕೆಲವರು ಚಿಕ್ಕ ಸಾಲವನ್ನು ನೀಡಿಲ್ಲ ಎಂದು ಆರೋಪವನ್ನು ಮಾಡಿದ್ದಾರೆ ಆದರೆ ನಮ್ಮ ಹಿಂದಿನ 5 ವರ್ಷದ ಆಡಳಿತದಲ್ಲಿ 25 ಸಾವಿರ ರೂ.ಗಳ ಅವಧಿಯ ಸಾಲವನ್ನು 30 ಲಕ್ಷ ರೂ.ಗಳಷ್ಟು ನೀಡಲಾಗಿದೆ. 5 0ಸಾವಿರ ದಿಂದ 2 ಲಕ್ಷ ರೂ.ಗಳ ಸಾಲವನ್ನು 2 ಕೋಟಿ 65 ಸಾವಿರ ರೂ.ಗಳವರೆಗೆ ಸಾಲವನ್ನು ನೀಡಲಾಗಿದೆ. 2 ಲಕ್ಷದಿಂದ 5 ಲಕ್ಷದವರೆಗೆ 1 ಕೋಟಿ ಯಷ್ಟು ಸಾಲವನ್ನು ನೀಡಲಾಗಿದೆ. ಸಾಲಕ್ಕಾಗಿ ಬಂದ ಅರ್ಜಿಗಳಲ್ಲಿ ಶೇ95 ರಷ್ಟು ಸಾಲವನ್ನು ನೀಡಲಾಗಿದೆ ಉಳಿದವನ್ನು ನಾನಾ ಕಾರಣಗಳಿಂದ ಸಾಲವನ್ನು ನೀಡಲಾಗಿಲ್ಲ, ಕಾನೂನು ರೀತಿಯಲ್ಲಿ ಸರಿಯಿದ್ದವು ದಾಖಲಾತಿ ಸರಿಯಾಗಿ ಇರುವವನ್ನು ಯಾವುದನ್ನು ಸಹಾ ತಿರಸ್ಕಾರ ಮಾಡಿಲ್ಲ ಎಂದರು.
ಸಾಲವನ್ನು ಪಡೆಯುವಾಗ ದಾಖಲಾತಿ ಸರಿಯಾಗಿ ಇದ್ದಲ್ಲಿ ನಮ್ಮ ಕಾನೂನು ಸಲಹೆಗಾರರು ಸರಿಯಾದ ವರದಿಯನ್ನು ನೀಡಿದರೆ ಸಾಕು ಸಾಲ ಸಿಗುತ್ತದೆ ಈ ರೀತಿಯಾಗಿ ಇದ್ದವರು ಯಾವುದೇ ಶಿಫಾರಸ್ಸು ಮಾಡುವ ಅಗತ್ಯ ಇಲ್ಲ, ಸಾಲವನ್ನು ಪಡೆಯುವವರು ಅವರ ವಹಿವಾಟನ್ನು ನೋಡಿ ಸಾಲವನ್ನು ಕಾನೂನು ವ್ಯಾಪ್ತಿಯಲ್ಲಿ ನೀಡಲಾಗುವುದು, ಎಲ್ಲರಿಗೂ ಸಹಾ ನೆರವಾಗಬೇಕೆಂಬುದು ನಮ್ಮ ಅಭೀಪ್ರಾಯವಾಗಿದೆ ಅದರೆ ಸಾಲವನ್ನು ನೀಡುವಾಗ ಸಹಕಾರ ಸಂಘದ ಕಾನೂನುಗಳನ್ನು ಮೀರಿ ಯಾವುದನ್ನು ಮಾಡಿಲ್ಲ ಎಲ್ಲವನ್ನು ಸಹಕಾರ ಸಂಘದ ಅಡಿಯಲ್ಲಿಯೇ ಮಾಡಲಾಗಿದೆ ಎಂದ ಅವರು, ವೀರಶೈವ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಸಮಾಜದ ಒಂದು ಕಣ್ಣು ಇದ್ದ ಹಾಗೇ ಇಲ್ಲಿ ಹಿರಿಯ ಸಲಹೆ, ಸೂಚನೆಗಳನ್ನು ಪಡೆಯುವುದರ ಮೂಲಕ ಸೊಸೈಟಿಯನ್ನು ಮುನ್ನೆಡಸಬೇಕಿದೆ, ಇದರ ಹೊಣೆಗಾರಿಕೆ ನಮ್ಮ ಮೇಲಿದೆ ಎಂದು ಶಿವಕುಮಾರ್ ಪಟೇಲ್ ತಿಳಿಸಿದರು.
ಮುಂದಿನ ದಿನದಲ್ಲಿ ನಮ್ಮ ಸೊಸೈಟಿಯ ವಹಿವಾಟನ್ನು ಈಗಿಗಿಂತ ಎರಡು ಪಟ್ಟು ಮಾಡಲಾಗುತ್ತಿದೆ . ಕಳೆದ ವರ್ಷ ಆಶ್ವಾಸನೆಯನ್ನು ನೀಡಲಾಗಿತ್ತು 1 ಕೋಟಿಯನ್ನು ಮುಟ್ಟುತ್ತೇವೆ ಎಂದಯ ಅದರಂತೆ 1 ಕೋಟಿ ಯನ್ನು ದಾಟಿದೆ, ಮುಂದಿನ ದಿನದಲ್ಲಿ ನಮ್ಮ ಸೊಸೈಟಿಯು ಷೇರುದಾರರಿಗೆ ವಿವಿಧ ರೀತಿಯ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಈಗ ಕ್ಯೋಆರ್ಕೋಡನ್ನು ಬಿಡುಗಡೆ ಮಾಡಿದ್ದು ಇದರಿಂದ ಷೇರುದಾರರು ಗ್ರಾಹಕರು ಸುಲಭವಾಗಿ ವಹಿವಾಟನ್ನು ಮಾಡಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವೀರಶೈವ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ನ ಉಪಾಧ್ಯಕ್ಷರಾಗಿ ಸಿ.ಚಂದ್ರಪ್ಪರವರನ್ನು ಆಯ್ಕೆ ಮಾಡಲಾಯಿತು ಈ ಸಮಯದಲ್ಲಿ ಸೊಸೈಟಿಯ ನಿರ್ದೆಶಕರುಗಳಾದ ಬಿ.ಎಂ. ಕರಿಬಸಯ್ಯ, ಜೆ.ಎಸ್.ಪ್ರಸಾದ್, ಜೆ.ಟಿ.ಸುರೇಶ್, ಕೆ.ಹೆಚ್.ಮುರುಗೇಂದ್ರಪ್ಪ, ಡಿ.ಎಸ್.ರಾಜೇಶ್, ನೀಲಕಂಠೇ ಶ್ವರಪ್ಪ, ರೀನಾ ಕೆ.ಜಿ. ಜಿ.ಆರ್ ನಿವೇದಿತಾ ಹಾಗೂ ಶೈಲಜ ಎಂ ಉಪಸ್ಥಿತರಿದ್ದರು.
ವೀರಶೈವ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ಗೆ ನೂತನವಾಗಿ ಅಧ್ಯಕ್ಷರಾಗಿ ಶಿವಕುಮಾರ್ ಪಟೇಲ್ ಹಾಗೂ ಉಪಾಧ್ಯಕ್ಷರಾಗಿ ಸಿ.ಚಂದ್ರಪ್ಪ ಆಯ್ಕೆಯಾಗಿದ್ದು ಇವರನ್ನು ಅವರ ಹಿತೈಷಿಗಳು, ಅಭಿಮಾನಿಗಳು ಬಂಧುಗಳು ಶಾಲು, ಹಾರ, ಶಾಲು, ಬೊಕ್ಕೆಯನ್ನು ನೀಡುವುದರ ಮೂಲಕ ಶುಭ ಹಾರೈಸಿದರು.

































