ಚಿತ್ರದುರ್ಗ : 2025ರ ಜನವರಿಯಲ್ಲಿ 12,13ಹಾಗೂ14ರಂದು ಬಾಗಲಕೋಟೆಯ ಹುನಗುಂದ ತಾಲ್ಲೂಕಿನ ಕೂಡಲಸಂಗಮದಲ್ಲಿ 38ನೇ ಶರಣ ಮೇಳ ನಡೆಯಲಿದೆ ಎಂದು ಕೂಡಲ ಸಂಗಮದ ಬಸವಧªರ್ಮ ಪೀಠದ ಕಾರ್ಯಾಧ್ಯಕ್ಷರಾದ ಜಗದ್ಗುರು ಗಂಗಾದೇವಿ ಮಾತಾಜಿಯವರು ತಿಳಿಸಿದರು.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಹಾ ಮಾನವತಾದಿ ಲಿಂಗಾಯತ ಧರ್ಮ ಸಂಸ್ಥಾಕ ಧರ್ಮಗುರು ಬಸವಣ್ಣನವರ ಸಂದೇಶಗಳಲ್ಲಿ ನಂಬಿಕೆ ಇಟ್ಟು ನಡೆಯುವ ಬಸವ ಭಕ್ತರು ಹಾಗೂ ಜಾತಿ, ಮತ,ಪಂಥಗಳ ಬೇಧವಿಲ್ಲದೆ ಎಲ್ಲರೂ ಒಂದೂ ಎಂದು ಸಮಾನಾತ ಭಾವವುಳ್ಳ ಎಲ್ಲಾ ಶರಣರು ಸೇರಿ ನಡೆಸುವ ಮೇಳವೇ ಶರಣ ಮೇಳವಾಗಿದೆ. ಇದು ಲಿಂ|| ಲಿಂಗಾನಂದಾ ಮಹಾಸ್ವಾಮಿಗಳ ಹಾಗೂ ಲಿಂ|| ಮಾತೆ ಮಹಾದೇವಿಯವರ ಸತ್‌ಸಂಕಲ್ಪದ ಕೂಸಾದಾ ಶರಣ ಮೇಳವು 1988ರಿಂದ ಇಲ್ಲಿಯವರೆಗೆ 37 ಸಂವತ್ಸರಗಳನ್ನು ಪೂರೈಸಿದೆ. 2025 ಜನವರಿ 12,13 ಹಾಗೂ 14 ರಂದು ಕೂಡಲಸಂಗಮ ಸುಕ್ಷೇತ್ರದಲ್ಲಿ ನಡೆಯುವ ಶರಣಮೇಳವು 38 ನೇ ಶರಣಮೇಳವಾಗಿದೆ ಎಂದರು.
ಮುಸಲ್ಮಾನ್ ಧರ್ಮಿಯರಿಗೆ ಮಕ್ಕಾ, ಸಿಖ್ಖರಿಗೆ ಅಮೃತಸರ್, ಬೌದ್ದರಿಗೆ ಬುದ್ದಗಯ ಧರ್ಮ ಕ್ಷೇತ್ರಗಳಿರುವಂತೆ ಲಿಂಗಾಯತ ಧರ್ಮಾನುಯಾಯಿಗಳಿಗೆ ವಿಶ್ವಗುರು ಬಸವಣ್ಣನವರ ಐಕ್ಯಸ್ಥಾನವಾದ ಕೂಡಲಸಂಗಮವೇ ಧರ್ಮಕ್ಷೇತ್ರವಾಗಿದೆ. ಈ 38ನೇ ಶರಣಮೇಳಕ್ಕೆ ನಾಡಿನ ಎಲ್ಲಾ ಜನತೆ ಭಾಗವಹಿಸುವುದರ ಮೂಲಕ ಯಶಸ್ವಿ ಮಾಡಬೇಕಿದೆ. ಈ ಸಮಯದಲ್ಲಿ ಸಮುದಾಯ ಪ್ರಾರ್ಥನೆ, ಇಷ್ಟಲಿಂಗ ಪೂಜೆ, ಉಪನ್ಯಾಸ, ಧಾರ್ಮಿಕ ರಸಪ್ರಶ್ನೆ, ಲಿಂಗಾAಗಯೋಗಿ ಅಷ್ಠಾಂಗ ಯೋಗ, ಧರ್ಮ ಚಿಂತನೆ, ಗೋಷ್ಟಿಗಳು ಮಹಿಳಾ ಗೋಷ್ಟಿಗಳು, ಕೃಷಿ ಚಿಂತನ ಗೋಷ್ಟಿ, ಧರ್ಮ ಗುರು ಬಸವಣ್ಣರವರ ಭಾವಚಿತ್ರದೊಂದಿಗೆ ವಚನ ಸಾಹಿತ್ಯದ ಮೆರವಣಿಗೆ ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಗೋಷ್ಟಿಯಲ್ಲಿ ಉಳವಿಯ ನಾಗಲಾಂಬೀಕ ಪೀಠ ಮತ್ತು ಚಿತ್ರದುರ್ಗದ ಬಸವ ಮಂಟಪದ ಪೀಠಾಧ್ಯಕ್ಷರಾದ ದಾನೇಶ್ವರಿ ಮಾತಾಜಿ, ಬೆಂಗಳೂರಿನ ಕುಂಬಳಗೋಡಿನ ಬಸವಗಂಗೋತ್ರಿ ಆಶ್ರಮದ ಪೀಠಾಧ್ಯಕ್ಷರಾದ ಸದ್ಗುರು ಬಸವಯೋಗಿ ಮಹಾಸ್ವಾಮಿ, ರಾಷ್ಟಿçÃಯ ಬಸವದಳದ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಚಂದ್ರಮೌಳಿ, ರಾಷ್ಟಿçÃಯ ಬಸವದಳದ ರಾಜ್ಯಾಧ್ಯಕ್ಷರಾದ ವಿರೇಶ್ ಕುಮಾರ್, ಜಿಲ್ಲಾಧ್ಯಕ್ಷರಾದ ಜೆ.ಸಿ.ಮನೋಹರ್, ಕೋಶಾಧ್ಯಕ್ಷರಾದ ಶಂಕರಪ್ಪ, ಪ್ರಧಾನ ಕಾರ್ಯದರ್ಶಿ ಅಕ್ಕಮಹಾದೇವಿ ತಿಪ್ಪೇಸ್ವಾಮಿ, ಈರಮ್ಮ ನಾಗರಾಜ್ ಸೇರಿದಂತೆ ಇತರರು ಭಾಗವಹಿಸಿದ್ದರು.