ಬೆಳಗಾವಿ: ಇಡಿ ಪ್ರಕಟಿಸಿದ ತನಿಖೆಯಲ್ಲಿ ಸಿದ್ದರಾಮಯ್ಯ ಅಷ್ಟೆ ಅಲ್ಲದೆ ಬೇರೆ ಬೇರೆ ಸೈಟ್ ಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಇದರಲ್ಲಿ ರಾಜಕಾರಣ ಇಲ್ಲ, ಕಾನೂನು ಪ್ರಕಾರ ಇಡಿ ಕೆಲಸ ಮಾಡುತ್ತಿದೆ. ಮುಡಾ ಹಗರಣದಲ್ಲಿ ಸಿಬಿಐ ತನಿಖೆ ಮಾಡಲಿ ಎಂದು ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಅವರು ಆಗ್ರಹಿಸಿದರು.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ತಪ್ಪು ಮಾಡಿದ್ದಾರೆ. ಹಗರಣ ಬಂದ್ಮೇಲೆ ಎಷ್ಟೋ ದಿನಗಳ ನಂತರ ಮುಡಾ ಆಸ್ತಿಗಳು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಯಾವುದೆ ಕಂಡೀಷನ್ ಇಲ್ಲದೆ ಸಿದ್ದರಾಮಯ್ಯ ಆಸ್ತಿ ಹಸ್ತಾಂತರ ಮಾಡಿದ್ದಾರೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ತಪ್ಪು ಇದೆ, ಸಿಬಿಐ ತನಿಖೆ ಮಾಡಲಿ. ರಾಜ್ಯ ಕಾಂಗ್ರೆಸ್ ಅಧೀನದಲ್ಲಿರೋ ಲೋಕಾಯುಕ್ತ ತನಿಖೆಯಲ್ಲಿ ಅರ್ಥ ಇಲ್ಲ. ಸಿಎಂ ಸಿದ್ದರಾಮಯ್ಯ ಇವತ್ತಲ್ಲ, ನಾಳೆ ರಾಜೀನಾಮೆ ಕೊಡುವ ಪರಿಸ್ಥಿತಿ ಎದುರಾಗುತ್ತೆ. ಸಿದ್ದರಾಮಯ್ಯ ಯಾವಾಗ ಬೇಕಾದರೂ ರಾಜೀನಾಮೆ ಕೊಡುವ ಪರಿಸ್ಥಿತಿ ಬರುತ್ತೆ, ರಾಜ್ಯ ಕಾಂಗ್ರೆಸ್ ನಲ್ಲಿ ಅರಾಜಕತೆ ಸೃಷ್ಟಿಯಾಗಲಿದೆ ಎಂದರು.