ಬೆಳಗಾವಿ : ಇಂದು ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ನಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಕಳೆದ ತಿಂಗಳು 27 ರಂದು ಈ ಸಮಾವೇಶ ನಡೆಯಬೇಕಿತ್ತು. ಮನಮೋಹನ್ ಸಿಂಗ್ ನಿಧನದಿಂದ ರದ್ದಾಯಿತು. ಮಹಾತ್ಮಾ ಗಾಂಧಿ, ಬಾಬಾಸಾಹೇಬ್ ಅಂಬೇಡ್ಕರ್ ಎಷ್ಟು ಪ್ರಸ್ತುತ, ನಮ್ಮ ಸಂವಿಧಾನ ರಕ್ಷಣೆ ಮಾಡುವ ಜವಾಬ್ದಾರಿಯಿದೆ. ಸಂವಿಧಾನ ಇಡೀ ಭಾರತೀಯರನ್ನ ರಕ್ಷಣೆ ಮಾಡುತ್ತದೆ ಎಂದು ಹೇಳಿದರು.
1924 ರಲ್ಲಿ ಗಾಂಧೀಜಿ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಿತ್ತು. 1924 ರಲ್ಲಿ ಡಿಸೆಂಬರ್ 26 ರಂದು ನಡೆದ ಸಮಾವೇಶ ಅಧ್ಯಕ್ಷತೆ ಗಾಂಧೀಜಿ ವಹಿಸಿದ್ದರು. ಸಮಾವೇಶ ಸಿದ್ಧತೆಯನ್ನ ಡಿಕೆಶಿ ಅಚ್ಚುಕಟ್ಟಾಗಿ ಮಾಡಿದ್ದಾರೆ. 2 ಲಕ್ಷಕ್ಕೂ ಹೆಚ್ಚು ಜನ ಸೇರುತ್ತಾರೆ. ಸಮಾವೇಶದಲ್ಲಿ ಯಾವುದೇ ವಿಶೇಷ ಕೊಡುಗೆ ಘೋಷಣೆ ಮಾಡಲ್ಲ. ಇದು ನೂರು ವರ್ಷದ ಸವಿ ನೆನಪು ಎಂದು ಸ್ಪಷ್ಟಪಡಿಸಿದರು.