ನವದೆಹಲಿ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಮತ್ತು ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ ಅಧ್ಯಕ್ಷೆ ಖಲೀದಾ ಜಿಯಾ ಅವರ ಅಂತ್ಯಕ್ರಿಯೆಯು ಬಾಂಗ್ಲಾದ ಢಾಕಾದಲ್ಲಿ ಡಿಸೆಂಬರ್ ೩೧ರಂದು ನಡೆಯಲಿದ್ದು, ಭಾರತದ ವಿದೇಶಾಂಗ ಸಚಿವ ಜೈಶಂಕರ್ ಎಸ್. ಜೈಶಂಕರ್ ನಾಳೆ ಭಾಗವಹಿಸಲಿದ್ದಾರೆ.
ಖಲೀದಾ ಜಿಯಾ ಅವರ ಅಂತ್ಯಕ್ರಿಯೆ ಬುಧವಾರ ನಡೆಯಲಿದ್ದು, ಅವರ ಪತಿ ಮತ್ತು ಮಾಜಿ ಅಧ್ಯಕ್ಷ ಜಿಯಾವುರ್ ರೆಹಮಾನ್ ಅವರ ಸಮಾಧಿಯ ಪಕ್ಕದಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ.
ಖಲೀದಾ ಜಿಯಾ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್ಪಿ) ದೀರ್ಘಕಾಲದ ನಾಯಕಿ ಮತ್ತು ಮೂರು ಬಾರಿ ಪ್ರಧಾನಿಯಾಗಿದ್ದರು. ಖಲೀದಾ ಜಿಯಾ ಅವರ ನಿಧನಕ್ಕೆ ಗೌರವ ಸಲ್ಲಿಸಲು ಬಾಂಗ್ಲಾದೇಶದಲ್ಲಿ 3 ದಿನಗಳ ಶೋಕಾಚರಣೆಯನ್ನು ಘೋಷಿಸಲಾಗಿದೆ.
ಜಿಯಾ ಅವರ ಅಧಿಕಾರದ ಎರಡೂ ಅವಧಿಗಳಲ್ಲಿ, ಚೀನಾದೊಂದಿಗೆ ತಮ್ಮ ಸಂಬಂಧ ಬಲಪಡಿಸಿದರು. ಬಾಂಗ್ಲಾ ದೇಶಕ್ಕೆ ಮಿಲಿಟರಿ ಉಪಕರಣಗಳನ್ನು ಚೀನಾ ಒದಗಿಸುತ್ತಿತ್ತು.
ಜಿಯಾ ಅವರ ಮಗ ರೆಹಮಾನ್ 17 ವರ್ಷಗಳ ಗಡಿಪಾರಾಗಿ ವಾಪಸ್ ಆಗಿದೆ. ಇದೀಗ ಮುಂದಿನ ಚುನಾವಣೆಗೆ ಸಿದ್ಧತೆಯಲ್ಲಿದ್ದಾರೆ.

































