ಮೈಸೂರು: ನಾಳೆ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ನೋಡಲು ಜನ ಕಾತುರರಾಗಿದ್ದಾರೆ.
ನಾಳೆ ವಿಜಯದಶಮಿಯ ದಿನವಾದ ಶನಿವಾರ (ಅ.12) ನಡೆಯಲಿದ್ದು, ಜಿಲ್ಲಾಡಳಿತವು ಅಂತಿಮ ಹಂತದ ಸಿದ್ಧತೆಗಳನ್ನು ನಡೆಸುತ್ತಿದೆ. ‘ರಾಜಪಥ’ದಲ್ಲಿ ಸಾಗಲಿರುವ ‘ಪರಂಪರೆಯ ತೇರು’ ವೀಕ್ಷಿಸಲು ಸಾವಿರಾರು ಮಂದಿ ಭಾಗವಹಿಸಲಿದ್ದಾರೆ.
ಶನಿವಾರ ಮಧ್ಯಾಹ್ನ 1.41ರಿಂದ 2.10ರವರೆಗೆ ಅರಮನೆ ಬಲರಾಮ ದ್ವಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಂದಿಧ್ವಜ ಪೂಜೆ ನೆರವೇರಿಸಿ ಚಾಲನೆ ನೀಡುವರು. ಸಂಜೆ 4ರಿಂದ 4.30ರವರೆಗೆ ಅರಮನೆ ಆವರಣದಲ್ಲಿ ‘ಅಭಿಮನ್ಯು’ ಹೊರಲಿರುವ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಗೊಂಡ ಚಾಮುಂಡೇಶ್ವರಿ ದೇವಿ ಮೂರ್ತಿಗೆ ಪೂಜೆ ಸಲ್ಲಿಸಲಿದೆ.
( ಸಾಂದರ್ಭಿಕ ಚಿತ್ರ)