ಚಿತ್ರದುರ್ಗ : ಕಾಂತರಾಜ್ ಆಯೋಗದ ಜಾತಿ ಗಣಿತಿಯ ವರದಿಯು ತಾಂತ್ರಿಕವಾಗಿ ಸರಿ ಆಗಿರುವುದಿಲ್ಲ.ಇದರ ಬಗ್ಗೆ ನಮ್ಮ ತಕರಾರು ಇದೆ. ರಾಜ್ಯದಲ್ಲಿ ಸುಮಾರು ಒಂದುವರೆ ಕೋಟಿ ವೀರಶೈವ ಲಿಂಗಾಯತ ಸಮುದಾಯದವರಿದ್ದಾರೆ.ಕೆಲವು ಕಡೆ ಜಾತಿಗಣತಿ ಸರಿಯಾಗಿಲ್ಲ. ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾದ ರಾಜ್ಯ ಉಪಾದ್ಯಕ್ಷರಾದ ಕೆ.ಬಿ.ಶ್ರೀನಿವಾಸ್ ತಿಳಿಸಿದ್ದಾರೆ.
ಚಿತ್ರದುರ್ಗ ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸರ್ಕಾರ ನಡೆಸಿದ ಜಾತಿ ಗಣತಿಯಲ್ಲಿ ಲಿಂಗಾಯತ ಸಮುದಾಯದವನ್ನು ಸರಿಯಾದ ರೀತಿಯಲ್ಲಿ ಜನಗಣತಿ ಮಾಡಿಲ್ಲ, ಮನೆ.ಮನೆಗಳಿಗೆ ಭೇಟಿಯನ್ನು ನೀಡಿದೆ ವರದಿಯನ್ನು ನೀಡಿದ್ದಾರೆ ಎಂದರು.
ಇದನ್ನು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ಒಪ್ಪುವುದಿಲ್ಲ, ಇದರ ಬದಲಿಗೆ ನಾವೇ 18 ತಿಂಗಳ ಕಾಲ ರಾಜ್ಯದಲ್ಲಿ ಜಿಲ್ಲೆ, ತಾಲ್ಲೂಕು, ಗ್ರಾಮ, ಹೋಬಳಿಯಲ್ಲಿ ಪ್ರವಾಸ ಮಾಡುವುದರ ಮೂಲಕ ನಮ್ಮ ಲಿಂಗಾಯತ ಸಮುದಾಯದವರು ಎಷ್ಟು ಇದ್ದಾರೆ ಎಂಬ ನಿಖರವಾದ ಮಾಹಿತಿಯನ್ನು ಸರ್ಕಾರಕ್ಕೆ ನೀಡಲಾಗುವುದು ಇದರ ಬಗ್ಗೆ ನಮ್ಮ ಮುಖಂಡರಾದ ಈಶ್ವರ ಖಂಡ್ರೆ ರವರು ಸರ್ಕಾರದ ಗಮನ ಸೆಳೆಯಲಿದ್ದಾರೆ. ಈಗಾಗಲೇ ನಮ್ಮ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ರವರು ವರದಿಯ ಬಗ್ಗೆ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ ಎಂದರು.
ಗೋಷ್ಟಿಯಲ್ಲಿ ಭಾಗವಹಿಸಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾದ ಜಿಲ್ಲಾಧ್ಯಕ್ಷರಾದ ಎಂ.ವಿ.ಶಿವಮೂರ್ತಿ ಮಾತನಾಡಿ, ನಮ್ಮ ಮಹಾಸಭಾದಿಂದ ಪ್ರತಿ ಜಿಲ್ಲೆಯಲ್ಲಿಯೂ ಸಹಾ ಹಾನಗಲ್ಲು ಕುಮಾರಸ್ವಾಮಿಯವರ ಸಭಾ ಭವನವನ್ನು ನಿರ್ಮಾಣ ಮಾಡಲು ಮುಂದಾಗಿದ್ದು ಇದರ ನಿರ್ಮಾಣಕ್ಕೆ ಜಾಗವನ್ನು ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗುವುದು, ಇದ್ದಲ್ಲದೆ ಸರ್ಕಾರದ ಜಾಗವನ್ನು ಸಹಾ ಗುರುತಿಸಲಾಗಿದೆ, ಇದನ್ನು ನಮಗೆ ನೀಡಿದೆ ಮುಂದಿನ ದಿನದಲ್ಲಿ ಭೂಮಿ ಪೂಜೆಯನ್ನು ನಡೆಸಲಾಗುವುದು ನಮ್ಮ ಅಧಿಕಾರದ ಅವಧಿಯಲ್ಲಿ ಈ ಕಟ್ಟಡವನ್ನು ಸರ್ಕಾರ, ದಾನಿಗಳ ಸಹಾಯದಿಂದ ಪೂರ್ಣವಾಗಿ ನಿರ್ಮಾಣ ಮಾಡಲಾಗುವುದು ಎಂದರು.