ಚಿತ್ರದುರ್ಗ : ಗುರುಸಿದ್ದಪ್ಪರವರು ತಮ್ಮ ಜೀವನ ಹಾಗೂ ರಾಜಕೀಯದಲ್ಲೂ ಯಾವುದೇ ರೀತಿಯ ಕಪ್ಪು ಚುಕ್ಕೆ ಇಲ್ಲದೆ ಹಣ, ಅಧಿಕಾರಕ್ಕೆ ಅಸೆಪಡೆದ ತಮ್ಮ ಪಾಲಿನ ಕೆಲಸವನ್ನು ಮಾಡಿಕೊಂಡು ಮಾರ್ಗದರ್ಶಿಗಳಾಗಿದ್ದರು ಎಂದು ಕರ್ನಾಟಕ ಪ್ರದೇಶ ಜನತಾದಳದ ಪ್ರಧಾನ ಕಾರ್ಯದರ್ಶಿ ಮತ್ತು ಚಿತ್ರದುರ್ಗ ನಗರಸಭೆ ಮಾಜಿ ಅಧ್ಯಕ್ಷರಾದ ಬಿ. ಕಾಂತರಾಜ್ ತಿಳಿಸಿದರು.
ಚಿತ್ರದುರ್ಗ ನಗರದ ಜಿಲ್ಲಾ ಜೆ.ಡಿ.ಎಸ್ ಘಟಕದ ಜೆ.ಪಿ.ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಕ್ಷದ ಹಿರಿಯ ಉಪಾಧ್ಯಕ್ಷರಾಗಿದ್ದ ಜೆ.ಎನ್.ಕೋಟೆ ಗುರುಸಿದ್ದಪ್ಪನವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಗುರುಸಿದ್ದಪ್ಪರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು. ಗುರುಸಿದ್ದಪ್ಪರವರು ಯಾವಾಗಲೂ ಬೇರೆಯವರಿಗೆ ಒಳ್ಳೇಯದ್ದನೆ ಬಯಸುತ್ತಿದ್ದರು, ಅಲ್ಲದೆ ತಾವು ಸಹಾ ಬೇರೆಯವರಿಗೆ ಕೆಟ್ಟದನ್ನು ಮಾಡಿಲ್ಲ, ತಮ್ಮ ಬದುಕಿನಲ್ಲಿ ಹೆಚ್ಚಿನ ಸಮಯವನ್ನು ರಾಜಕೀಯಕ್ಕೆ ನೀಡಿ ಕುಟುಂಬಕ್ಕೆ ಕಡಿಮೆ ಸಮಯವನ್ನು ನೀಡಿದ್ದರು, 50 ವರ್ಷದಿಂದ ರಾಜಕಾರಣ ಮಾಡಿದ್ದಾರೆ ಯಾವುದೇ ರೀತಿಯ ಆಸ್ತಿ, ಹಣ, ಮಾಡಿಲ್ಲ ಯಾವುದೇ ಶಿಫಾರಸ್ಸ್ನ್ನು ಶಾಸಕರು, ಮಂತ್ರಿಗಳತ್ತ ತೆಗೆದುಕೊಂಡು ಹೋಗಿಲ್ಲ ಬೇರೆಯವರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡಿದ್ದಾರೆ ಎಂದರು.
ಇತ್ತಿಚಿನ ದಿನಮಾನದಲ್ಲಿ ರಾಜಕೀಯ ಎಂದತರೆ ಹಣ ಮಾಡುವ ಸಂಸ್ಥೆ ಎಂದು ಹಲವಾರು ಜನತೆ ತಿಳಿದಿದ್ದಾರೆ ಆದರೆ ಇದಕ್ಕೆ ಅಪವಾದ ಎನ್ನುವಂತೆ ಗುರುಸಿದ್ದಪ್ಪರವರು ತಾವು ಇರುವಷ್ಟು ದಿವಸವೂ ಸಹಾ ಹಣ ಮಾಡದೇ ಮತ್ತು ಅಧಿಕಾರವನ್ನು ಬಳಸದೇ ಸಿದಾ-ಸದಾವಾಗಿದ್ದರು. ಇಂದಿನ ದಿನಮಾನದಲ್ಲಿ ಇಂತಹ ಜನತೆ ಸಿಗುವುದು ಕಷ್ಟವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ಬೆಳವಣಿಗೆಯಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿದ್ದರು, ಪಕ್ಷದಿಂದ ಎಲ್ಲೆ ಕಾರ್ಯಕ್ರಮವಾದರೂ ಸಹಾ ಅಲ್ಲಿ ಬಾಗಿಯಾಗುವುದರ ಮೂಲಕ ಪಕ್ಷದ ಸಂಘಟನೆಯಲ್ಲಿ ಪಾಲ್ಗೊಂಡಿದ್ದರು. ಪಕ್ಷಕ್ಕೆ ನಿಷ್ಠೆಯಿಂದ ಇರುವುದರ ಮೂಲಕ ಮಿತ ಭಾಷಿಗಳಾಗಿ ಉತ್ತಮವಾದ ಉಡುಪನ್ನು ಧರಿಸುವುದರ ಮೂಲಕ ಬೇರೆಯವರನ್ನು ತಮ್ಮತ್ತ ಸೆಳೆಯುತ್ತಿದ್ದರು ಎಂದು ಕಾಂತರಾಜು ತಿಳಿಸಿದರು.
ಜೆ.ಡಿ.ಎಸ್ ಘಟಕದ ಮಾಜಿ ಜಿಲ್ಲಾ ಅಧ್ಯಕ್ಷರಾದ ಡಿ.ಯಶೋಧರ, ಜಿಲ್ಲಾ ಜೆ ಡಿ ಎಸ್ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಡಿ. ಗೋಪಾಲಸ್ವಾಮಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಜೆ.ಡಿ.ಎಸ್ ಘಟಕದ ಅಧ್ಯಕ್ಷರಾದ ಎಂ ಜಯಣ್ಣ ವಹಿಸಿದ್ದರು.
ಈ ಸಂದರ್ಭದಲ್ಲಿ ಭಾಗವಹಿಸಿದ್ದ ಜಿಲ್ಲಾ ಕಾರ್ಯಧ್ಯಕ್ಷರಾದ ಜಿ.ಬಿ. ಶೇಖರ್. ಚಿತ್ರದುರ್ಗ ತಾಲ್ಲೂಕು ಘಟಕದ ಅಧ್ಯಕ್ಷರಾದ ಸಣ್ಣತಿಮ್ಮಪ್ಪ, ಪೈಲ್ವಾನ್ ತಿಪ್ಪೇಸ್ವಾಮಿ, ಹೂಳಲ್ಕೆರೆ ತಾಲೂಕು ಘಟಕದ ಅಧ್ಯಕ್ಷರಾದ ಪರಮೇಶ್ವರಪ್ಪ, ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಪ್ರತಾಪ್ ಜೋಗಿ,ರುದ್ರಪ್ಪ, ಚಂದ್ರಣ್ಣ, ಚಂದ್ರಶೇಖರ್, ಮಾತನಾಡಿದರು, ರಾಘವೇಂದ್ರರವರು ಗುರುಸಿದ್ದಪ್ಪರವರ ಬಗ್ಗೆ ಕವನ ವಾಚನ ಮಾಡಿದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ರಾಜ್ಯ ಕಾರ್ಯದರ್ಶಿ ಎಂ.ಕೆ.ಹಟ್ಟಿಯ ಈರಣ್ಣ, ಮೊಳಕಾಲ್ಮೂರು ಅಧ್ಯಕ್ಷರಾದ ಕರಿಬಸಪ್ಪ, ನೇಕಾರ ಘಟಕದ ಅಧ್ಯಕ್ಷರಾದ ಲಿಂಗರಾಜು, ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಗೀತಾ, ರಾಜ್ಯ ಎಸ್.ಸಿ.ಘಟಕದ ಕಾರ್ಯದರ್ಶಿ ರಮೇಶ್, ರಾಜ್ಯ ಯುವ ಘಟಕದ ಕಾರ್ಯದರ್ಶಿ ಹನುಮಂತರಾಯಪ್ಪ, ಗುರುಸಿದ್ದಪ್ಪರವರ ಪತ್ನಿ ಸಾಕಮ್ಮ, ಮಗ ಸಿದ್ದೇಶ್, ಹಿರಿಯೂರು ತಾಲ್ಲೂಕಿನ ಘಟಕದ ಅಧ್ಯಕ್ಷರಾದ ಹನುಮಂತ ರಾಯಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.