ನನ್ನ ಈ ಎತ್ತರಕ್ಕೆ ಕಬೀರಾನಂದ ಶ್ರೀಗಳು ಕಾರುಣ್ಯ: ಡಾ.ಕಮಲಮ್ಮ.!

WhatsApp
Telegram
Facebook
Twitter
LinkedIn

 

ಚಿತ್ರದುರ್ಗ; ನನ್ನ ಈ ಎತ್ತರಕ್ಕೆ ಸದ್ಗುರು ಕಬೀರಾನಂದ ಶ್ರೀಗಳು ಕಾರುಣ್ಯ ಕಾರಣವಾಗಿದೆ ಎಂದು ರಾಜ್ಯೋತ್ಸವ ಪ್ರಶಸ್ತ್ರಿ ಪುರಸ್ಕøತರು, ನಿವೃತ್ತ ಕಾಲೇಜು ಶಿಕ್ಷಣ ನಿರ್ದೆಶಕರಾದ ಶ್ರೀಮತಿ ಡಾ.ಕಮಲಮ್ಮ ತಿಳಿಸಿದರು.

ಚಿತ್ರದುರ್ಗ ನಗರದ ಕಬೀರಾನಂದ ನಗರದ ಶ್ರೀ ಗುರು ಕಬೀರಾನಂದ ಆಶ್ರಮದವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಸದ್ಗುರು ಕಬೀರಾನಂದ ಮಹಾಸ್ವಾಮಿಗಳವರ 68ನೇ ಹಾಗೂ ಶ್ರೀ ಸದ್ಗುರು ಕಬೀರೇಶ್ವರ ಮಹಾಸ್ವಾಮಿಗಳವರ 58ನೇ ಪುಣ್ಯಾರಾಧನೆ ಸಮಾರೋಪ ಸಮಾರಂಭದಲ್ಲಿ ಶ್ರೀಮಠದಿಂದ ನೀಡಿದ ಸನ್ಮಾನವನ್ನು ಸ್ವೀಕಾರ ಮಾಡಿ ಮಾತನಾಡಿ ಅವರು ನಾನು ಮೂಲತ ಚಿತ್ರದುರ್ಗದವಳು ನನ್ನ ಮನೆಯೂ ಸಹಾ ಮಠದ ಬಳಿಯಲ್ಲಿಯೇ ಇತ್ತು ನಮ್ಮ ತಂದೆಯವರಿಗೆ ಐದು ಜನ ಹೆಣ್ಣು ಮಕ್ಕಳು ಇವರ ವಿದ್ಯಾಭ್ಯಾಸಕ್ಕೆ ಶ್ರೀ ಮಠ ಸಹಾಯವನ್ನು ಮಾಡಿದೆ. ಇಲ್ಲಿನ ಕಬೀರಾನಂದಶ್ರೀಗಳು ನಮ್ಮ ವಿದ್ಯಾಭ್ಯಾಸಕ್ಕೆ ಸಹಾಯವನ್ನು ಮಾಡಿದ್ದಲ್ಲದೆ ರಾತ್ರಿ ಸಮಯದಲ್ಲಿ ನಮಗೆ ಓದಲು ಟೀಯನ್ನು ಮಾಡಿಕೊಂಡುವುದರ ಮೂಲಕ ಸಹಾಯವನ್ನು ಮಾಡಿದ್ದರು ಎಂದು ನೆನೆಪಿಕೊಂಡರು.

ನಾನು ಇಷ್ಠರ ಮಟ್ಟಗೆ ಬೆಳೆಯಲು ಶ್ರೀಮಠ ಸಹಾಯವಾಗಿದೆ ನನ್ನ ಬೆಳವಣಿಗೆ ಹಂತ ಹಂತವಾಗಿ ಏರಿಕೆಯನ್ನು ಕಂಡಿದ್ದು, ಉನ್ನತವಾದ ಸ್ಥಾನವನ್ನು ಪಡೆಯಲು ಸಹಾಯವಾಯಿತು. 2012ರಲ್ಲಿ ಸರ್ಕಾರಿ ಕೆಲಸದಿಂದ ನಿವೃತ್ತಿಯಾದ ಮೇಲೆ ನನ್ನ ಸೇವೆಯನ್ನು ಕಂಡು ಈ ಸಾಲಿನಲ್ಲಿ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿದೆ. ಇದನ್ನು ಮನಗಂಡು ನನಗೆ ಶ್ರೀಮಠದಲ್ಲಿ ಸನ್ಮಾನ ಮಾಡಿದ್ದು ನನಗೆ ತವರು ಮನೆಯಲ್ಲಿ ಸಿಕ್ಕ ಸನ್ಮಾನದಷ್ಟು ಸಂತೋಷವಾಗಿದೆ. ಎಂದ ಅವರು ನಾವು ಪ್ರಗತಿಯನ್ನು ಕಾಣಬೇಕಾದರೆ ಗುರುವಿನ ದಯೆ ಇಲ್ಲದೆ ಏನನ್ನು ಸಾಧಿಸಲು ಸಾಧ್ಯವಿಲ್ಲ ಈ ಹಿನ್ನಲೆಯಲ್ಲಿ ಗುರುವಿನ ಕಾರುಣ್ಯವನ್ನು ಪಡೆದಾಗ ಮಾತ್ರ ನಮ್ಮ ಬದುಕು ಉತ್ತಮಗೊಳ್ಳಲು ಸಾಧ್ಯವಿದೆ ಎಂದರು.

ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ಕೊಡಿಸಿ, ಅದು ನಮನ್ನು ಎತ್ತರಕ್ಕೆ ಕರೆದುಕೊಂಡು ಹೋಗಲು ಸಾಧ್ಯವಾಗುತ್ತದೆ. ಶಿಕ್ಷಣದಿಂದ ಜ್ಞಾನವನ್ನು ಸಂಪಾದಿಸಲು ಸಾಧ್ಯವಿದೆ. ಇದರಿಂದ ಉತ್ತಮ ಪ್ರಜೆಗಳನ್ನಾಗಿ ರೂಪುಗೊಳ್ಳಲು ಸಾಧ್ಯವಿದೆ. ಶಿಕ್ಷಣದಿಂದ ದೂರ ಇಡಬೇಡಿ, ನನ್ನ ಈ ಎತ್ತರಕ್ಕೆ ಶಿಕ್ಷಣವೂ ಸಹಾ ಸಹಾಯವಾಗಿದೆ ಎಂದು ಕಮ್ಮಲಮ್ಮ ತಿಳಿಸಿದರು.

ಶ್ರೀಮಠದ ಸನ್ಮಾನಕ್ಕೆ ಪಾತ್ರರಾದ ಮತ್ತೋರ್ವರಾದ ಚಿತ್ರದುರ್ಗ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷರಾದ ಡಾ.ವಿ.ಎಲ್,ಪ್ರಶಾಂತ್ ಮಾತನಾಡಿ, ಇಂದಿನ ದಿನಮಾನದಲ್ಲಿ ಓದುವವರ ಸಂಖ್ಯೆ ಕಡಿಮೆಯಾಗಿ ಮೋಬೈಲ್ ನೋಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ನಮ್ಮ ಮುಂದಿನ ಪೀಳಿಗೆಗೆ ಏನನ್ನು ನೀಡಬೇಕೆ ಎನ್ನುವುದು ಪ್ರಶ್ನೆಯಾಗಿದೆ. ಪುಸ್ತಕದಲ್ಲಿರುವುದು ಮಸ್ತಕದ್ದಾಗ ಮಾತ್ರ ಬೇರೆಯವರಿಗೆ ತಿಳಿಸಲು ಸಾಧ್ಯವಿದೆ. ನಮಗೆ ಕಷ್ಠ ಕಾಲದಲ್ಲಿ ಕಬೀರಾನಂದಜ್ಜರವರ ಸ್ಮರಣೆಯನ್ನು ಮಾಡುವುದರ ಮೂಲಕ ನಮಗೆ ಬಂದ ಎಲ್ಲಾ ಕಷ್ಠಗಳು ಪರಿಹಾರವಾಗುತ್ತವೆ, ಮಕ್ಕಳನ್ನು ಚಿಕ್ಕ ವಯಸ್ಸಿನಿಂದಲೇ ಮಠ, ದೇವಾಲಯಗಳಿಗೆ ಕರೆ ತರುವುದರ ಮೂಲಕ ಅವರಿಗೆ ಸಂಸ್ಕಾರವನ್ನು ಕಲಿಸಬೇಕಿದೆ ಎಂದರು.

ಸಾಹಿತಿಗಳಾದ ಹುರಳಿ ಬಸವರಾಜು ಉಪನ್ಯಾಸ ನೀಡುತ್ತಾ, ಕಬೀರಾನಂದ ಶ್ರೀಗಳು ಚಿಕ್ಕ ವಯಸ್ಸಿನಿಂದಲೇ ತನ್ನ ಲೀಲೆಗಳನ್ನು ತೋರಿಸುತ್ತಾ ಹೆಸರನ್ನು ಪಡೆದಿದ್ದರು. ತಮ್ಮ ವಯಸ್ಸಿನಲ್ಲಿಯೇ ವಿವಿಧ ಕಡೆಗಳಲ್ಲಿ ಸಂಚಾರವನ್ನು ಮಾಡುವುದರ ಮೂಲಕ ಹಲವಾರು ವಿಷಯದ ಜ್ಞಾನವನ್ನು ಪಡೆದಿದ್ದರು, ಚಿತ್ರದುರ್ಗಕ್ಕೆ ಬಂದು ಇಲ್ಲಿ ಶ್ರೀಮಠವನ್ನು ಸ್ಥಾಪನೆ ಮಾಡುವುದರ ಮೂಲಕ ಇಲ್ಲಿ ಗೋಶಾಲೆಯನ್ನು ಪ್ರಾರಂಭ ಮಾಡಿ ಗೋವುಗಳನ್ನು ರಕ್ಷಣೆ ಮಾಡಲು ಮುಂದಾದರು, ಇಲ್ಲಿಗೆ ಬರುವಾಗ ಕಸದ ರಾಶಿಯಾಗಿದ್ದ ಈ ಜಾಗವನ್ನು ಸ್ವಚ್ಚ ಮಾಡಿ ಮಠವನ್ನು ನಿರ್ಮಾಣ ಮಾಡಲು ಮುಂದಾದರು ಎಂದರು.

ಸಮಾರೋಪ ಸಮಾರಂಭದ ಸಾನಿಧ್ಯವನ್ನು ಶ್ರೀ ಗುರು ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಮಹಾಸ್ವಾಮಿಗಳು ವಹಿಸಿದ್ದು, ಶಾರದಾ ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗಳಾದ ಶ್ರೀ ಸ್ವಾಮಿ ಬ್ರಹ್ಮನಿಷ್ಠಾನಂದಜೀ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಕೆ.ಸಿ.ನಾಗರಾಜ್, ನಗರಸಭಾ ಸದಸ್ಯರಾದ ವೆಂಕಟೇಶ್, ವೀರಶೈವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಿರ್ದೆಶಕರಾದ ಸಿದ್ದವ್ವನಹಳ್ಳಿ ಪರಮೇಶ್, ಜಿ.ಪಂ.ನಿವೃತ್ತ ವ್ಯವಸ್ಥಾಪಕರಾದ ನಾಗರಾಜ್ ಸಂಗಂ ಭಾಗವಹಿಸಿದ್ದರು,

ಶ್ರೀ ಸದ್ಗುರು ಕಬೀರಾನಂದ ಮಹಾಸ್ವಾಮಿಗಳವರ 68ನೇ ಹಾಗೂ ಶ್ರೀ ಸದ್ಗುರು ಕಬೀರೇಶ್ವರ ಮಹಾಸ್ವಾಮಿಗಳವರ 58ನೇ ಪುಣ್ಯಾರಾಧನೆಯ ಅಂಗವಾಗಿ ನ. 18 ರಿಂದ 23 ರವರೆಗೆ ಆರೂಢ ಮೇರು ಜೀವನ ಚರಿತ್ರೆ ಪಾರಾಯಣ ಪ್ರವಚನ ನಡೆದಿದ್ದು, ಬೆಳಿಗ್ಗೆ ಬ್ರಾಹ್ಮೀ ಮಹೂರ್ತದಲ್ಲಿ ಶ್ರೀ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ನಡೆದಿದ್ದು ಸಂಜೆ ಮಹಾ ಮಂಗಳಾರತಿ ನಡೆಯಿತು.

ಸುಬ್ರಯಾಭಟ್ಟರು ವೇದ ಘೋಷಗಳನ್ನು ಮಾಡಿದರೆ ಶಿಕ್ಷಕಿ ಶ್ರೀಮತಿ ಜ್ಯೋತಿ ಪ್ರಾರ್ಥಿಸಿದರು ತಿಪ್ಪೇಸ್ವಾಮಿ ಸ್ವಾಗತಿಸಿದರು, ಮುರುಗೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon