ಉತ್ತರಪ್ರದೇಶ : UPSC ಪರೀಕ್ಷೆಗಳಲ್ಲಿ ವಿಫಲರಾದ ಎಲ್ಲರಿಗೂ ಕಾಜಲ್ ಜಾವ್ಲಾ ಅವರ ಕಥೆ ಸ್ಫೂರ್ತಿದಾಯಕವಾಗಿದೆ.
ಕಾಜಲ್ ಜಾವ್ಲಾ ಉತ್ತರ ಪ್ರದೇಶದ ಮೀರತ್ ನಿವಾಸಿ. 2010ರಲ್ಲಿ ಎಲೆಕ್ಟ್ರಾನಿಕ್ ಕಮ್ಯುನಿಕೇಷನ್ ನಲ್ಲಿ ಬಿ.ಟೆಕ್. ವಿದ್ಯಾಭ್ಯಾಸ ಮುಗಿಸಿ ವಿಪ್ರೋದಲ್ಲಿ ಉದ್ಯೋಗ ಆರಂಭಿಸಿದರು. ಅಲ್ಲಿ ಅವರ ಸಂಬಳ ತಿಂಗಳಿಗೆ 23 ಲಕ್ಷ ರೂಪಾಯಿ.
ಕೆಲಸದ ಜೊತೆಗೆ UPSCಗೆ ತಯಾರಿ ಮುಂದುವರೆಸಿದರು. 9 ಗಂಟೆಗಳ ಕಾಲ ಕೆಲಸ ಮಾಡಿದ ನಂತರ ಕಾಜಲ್ ಕ್ಯಾಬ್ ನಲ್ಲಿ ಓದುತ್ತಿದ್ದರು. ದೊಡ್ಡ ಸಂಬಳ ಇದ್ದರೂ ಕಠಿಣ ಪರಿಶ್ರಮದಿಂದ ಪರೀಕ್ಷೆಗೆ ತಯಾರಿ ನಡೆಸಿದರು.
ಇದೇ ವೇಳೆ ಕಾಜಲ್ ಜಾವ್ಲಾ ಮದುವೆ ಆಶಿಶ್ ಮಲಿಕ್ ಜೊತೆ ನಿಗದಿ ಆಗಿತ್ತು. ಅವರು ದೆಹಲಿಯ ಅಮೆರಿಕನ್ ರಾಯಭಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದವರು. ಪತಿ ಆಶಿಶ್ ತುಂಬಾ ಸಹಕಾರ ನೀಡುತ್ತಿದ್ದರು. ಕಾಜಲ್ ನ ಕನಸಿಗೆ ಪತಿ ಪ್ರೋತ್ಸಾಹಿಸುತ್ತಿದ್ದರು.
ಮದುವೆಯ ನಂತರವೂ ಕಾಜಲ್ ಜಾವ್ಲಾ ಅವರ ಸಂಪೂರ್ಣ ಗಮನವನ್ನು ಪರೀಕ್ಷಾ ತಯಾರಿಗೆ ನೀಡಿದರು. ಅವರ ಪತಿ ಮನೆಗೆಲಸದ ಜವಾಬ್ದಾರಿಯನ್ನು ವಹಿಸಿಕೊಂಡರು. ಕಾಜಲ್ ಯಾವತ್ತೂ ಕೋಚಿಂಗ್ ಸಹಾಯ ಪಡೆದಿಲ್ಲ. ಸಮಯದ ಕೊರತೆಯ ನಡುವೆಯೂ ಸ್ವಯಂ ಅಧ್ಯಯನ ಮಾಡಿ 28ನೇ ರ್ಯಾಂಕ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.