ಚಿತ್ರದುರ್ಗ : ಕೆಳಗೋಟೆ ಸಿ.ಕೆ.ಪುರದಲ್ಲಿರುವ ಚನ್ನಕೇಶವಸ್ವಾಮಿಯ ಶ್ರೀದೇವಿ ಭೂದೇವಿ ಸಹಿತ ಕಲ್ಯಾಣೋತ್ಸವ ಹಾಗೂ ರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಬುಧವಾರ ವಿಜೃಂಭಣೆಯಿಂದ ನಡೆಯಿತು.
ಬಗೆ ಬಗೆಯ ಹೂವು, ಹಾರ, ಹಸಿರು ಪತ್ರೆ, ಮಾವಿನ ತಳಿರಿನಿಂದ ರಥವನ್ನು ಸಿಂಗರಿಸಲಾಗಿತ್ತು. ಶ್ರೀದೇವಿ ಭೂದೇವಿಯನ್ನು ವಿಶೇಷವಾಗಿ ಅಲಂಕರಿಸಿ ರಥದಲ್ಲಿ ಕೂರಿಸಿ ಪೂಜೆ ಸಲ್ಲಿಸಿದ ನಂತರ ರಥವನ್ನು ನೂರಾರು ಭಕ್ತರು ಎಳೆದರು. ರಥೋತ್ಸವದಲ್ಲಿ ಮಂಡಕ್ಕಿ ತೂರಿ ಕೆಲವರು ಭಕ್ತಿ ಸಮರ್ಪಿಸಿದರು.
ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಚನ್ನಕೇಶವಸ್ವಾಮಿ ದೇವಸ್ಥಾನದ ಸಂಚಾಲಕ, ಹಿರಿಯ ನ್ಯಾಯವಾದಿ ಫಾತ್ಯರಾಜನ್, ನಗರಸಭೆ ಮಾಜಿ ಸದಸ್ಯರುಗಳಾದ
ಪಿ.ತಿಪ್ಪೇಸ್ವಾಮಿ, ಡಿ.ಪ್ರಕಾಶ್, ಆರ್.ವಿ.ಮಾರುತೇಶ್ರೆಡ್ಡಿ, ಗಂಗಾಧರ್, ಜಗನ್ನಾಥ, ಗೌಡ, ಗಿರೀಶ, ಹನುಮಂತರೆಡ್ಡಿ, ಸನ್ನಿ ಇನ್ನು ಅನೇಕರು ರಥೋತ್ಸವದಲ್ಲಿ ಭಾಗವಹಿಸಿದ್ದರು.