ಪಾಟ್ನಾ : ಬಿಹಾರ ಕೆಡರ್‌ನ 2019ರ ಬ್ಯಾಚ್‌ನ ಐಪಿಎಸ್ ಅಧಿಕಾರಿ ಕಾಮ್ಯಾ ಮಿಶ್ರಾ ಕೇವಲ 28 ವರ್ಷ ವಯಸ್ಸಿನಲ್ಲೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಸುದ್ದಿಯಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯರಾಗಿದ್ದ ಕಾಮ್ಯಾ, ಆರು ವರ್ಷಗಳ ಕಾಲ ಐಪಿಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ನಂತರ ಈ ನಿರ್ಧಾರ ಕೈಗೊಂಡಿದ್ದಾರೆ. ಅವರ ಈ ದಿಢೀರ್ ರಾಜೀನಾಮೆ ಅನೇಕರನ್ನು ಅಚ್ಚರಿಗೊಳಿಸಿದೆ.
ವರದಿಗಳ ಪ್ರಕಾರ, ಕಾಮ್ಯಾ ಅವರು ಮೂಲತಃ ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ರೈರಂಗಪುರದವರು. ಕಾಮ್ಯಾ ಅವರ ತಂದೆ ರಾಜಕುಮಾರ್ ಮಿಶ್ರಾ ಗಣಿಗಾರಿಕೆ ಮತ್ತು ಉಕ್ಕು ಉದ್ಯಮದಲ್ಲಿ ಪ್ರಮುಖ ಉದ್ಯಮಿಯಾಗಿದ್ದು, ಅವರು ತಮ್ಮ ತಂದೆಯ ಏಕೈಕ ಮಗಳು.
ಕಾಮ್ಯಾ ಅವರು ಕೇವಲ 22 ನೇ ವಯಸ್ಸಿನಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಹಿಮಾಚಲ ಪ್ರದೇಶ ಕೆಡರ್‌ಗೆ ನಿಯೋಜಿತರಾದರು. ತಮ್ಮ ಬ್ಯಾಚ್‌ಮೇಟ್ ಮತ್ತು ಐಪಿಎಸ್ ಅಧಿಕಾರಿಯಾದ ಅವಧೇಶ್ ಸರೋಜ್ ದೀಕ್ಷಿತ್ ಅವರನ್ನು ವಿವಾಹವಾದ ನಂತರ, ಬಿಹಾರ ಕೆಡರ್‌ಗೆ ವರ್ಗಾವಣೆಗೊಂಡರು. ರಾಜಸ್ಥಾನದ ಕರೌಲಿ ಜಿಲ್ಲೆಯವರಾದ ಅವಧೇಶ್ ಪ್ರಸ್ತುತ ಬಿಹಾರದ ಗೋಪಾಲ್‌ಗಂಜ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ತರಬೇತಿಯ ಸಮಯದಲ್ಲಿ ಭೇಟಿಯಾಗಿದ್ದ ಕಾಮ್ಯಾ ಮತ್ತು ಅವಧೇಶ್ 2021 ರಲ್ಲಿ ಉದಯಪುರದಲ್ಲಿ ವಿವಾಹವಾದರು. 2019 ರ ಬ್ಯಾಚ್‌ನ ಅಧಿಕಾರಿಯಾದ ಅವಧೇಶ್, ಐಐಟಿ ಬಾಂಬೆಯಿಂದ ಏರೋಸ್ಪೇಸ್ ಇಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. ಯುಪಿಎಸ್‌ಸಿ ಪರೀಕ್ಷೆ ಬರೆಯುವ ಮುನ್ನ ಅವರು ಜೋಧ್‌ಪುರ ಮತ್ತು ನಾಶಿಕ್‌ನಲ್ಲಿ ಹಲವಾರು ತಿಂಗಳುಗಳ ಕಾಲ ಜೆಇಇ ವಿದ್ಯಾರ್ಥಿಗಳಿಗೆ ಬೋಧಿಸಿದ್ದರು.
ಕಾಮ್ಯಾ ತಮ್ಮ ಕುಟುಂಬದ ವ್ಯವಹಾರವನ್ನು ನಿರ್ವಹಿಸಲು ಸಹಾಯ ಮಾಡಲು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ. ರಾಜೀನಾಮೆ ನೀಡುವ ಸಮಯದಲ್ಲಿ, ಕಾಮ್ಯಾ ಅವರು ಬಿಹಾರದ ದರ್ಭಾಂಗದ ಗ್ರಾಮೀಣ ಎಸ್ಪಿ ಆಗಿ ಸೇವೆ ಸಲ್ಲಿಸುತ್ತಿದ್ದರು.