ಹೈದರ್‌ಬಾದ್ : ನಟ ಪ್ರಭಾಸ್ ಅವರ ಮದುವೆ ಬಗ್ಗೆ ಯಾವಾಗಲೂ ಪ್ರಶ್ನೆ ಎದುರಾಗುತ್ತದೆ. ಈ ಪ್ಯಾನ್ ಇಂಡಿಯಾ ಹೀರೋ ಯಾವಾಗ ಮದುವೆ ಆಗುತ್ತಾರೆ ಎಂಬುದನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈಗ ಪ್ರಭಾಸ್ ಅವರಿಗೆ 45 ವರ್ಷ ವಯಸ್ಸು. ಇದೀಗ ಅವರಿಗೆ ಕಂಕಣ ಭಾಗ್ಯ ಕೂಡಿಬಂದಿದೆ ಎಂದು ಸುದ್ದಿ ಹಬ್ಬಿದೆ.
ಈ ಸುದ್ದಿ ಕೇಳುತ್ತಿದ್ದಂತೆಯೇ ಅಭಿಮಾನಿಗಳಿಗೆ ಅನುಷ್ಕಾ ಶೆಟ್ಟಿ ನೆನಪಾಗಿದೆ. ಆದರೆ ಪ್ರಭಾಸ್ ಮದುವೆ ಆಗುತ್ತಿರುವ ಹುಡುಗಿ ಅನುಷ್ಕಾ ಶೆಟ್ಟಿ ಅಲ್ಲ ಎಂಬುದು ಬೇಸರದ ಸಂಗತಿ.ವರದಿಗಳ ಪ್ರಕಾರ, ಪ್ರಭಾಸ್ ಅವರ ಮದುವೆ ಮಾತುಕಥೆ ನಡೆಯುತ್ತಿದ್ದು, ಹೈದರಾಬಾದ್ನ ಹುಡುಗಿ ಜೊತೆ ಪ್ರಭಾಸ್ ಅವರು ಹಸೆಮಣೆ ಏರಲು ಸಜ್ಜಾಗಿದ್ದಾರೆ.
ದೊಡ್ಡ ಉದ್ಯಮಿಯೊಬ್ಬರ ಮಗಳ ಜೊತೆ ಪ್ರಭಾಸ್ ಮದುವೆ ನೆರವೇರಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಮದುವೆ ತಯಾರಿ ನಡೆಯುತ್ತಿದ್ದು, ಪ್ರಭಾಸ್ ಸಂಬಂಧಿ ಶ್ಯಾಮಲಾ ದೇವಿ ಅವರು ಎಲ್ಲ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ ಎಂದು ವರದಿ ಆಗಿದೆ.
ಆದ್ರೆ ಪ್ರಭಾಸ್ ಕುಟುಂಬದವರು ಇನ್ನೂ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.