ಬೆಂಗಳೂರು : ಇತ್ತೀಚೆಗೆ ಯುಪಿಎಸ್‌ಸಿ ಪರೀಕ್ಷೆ ಬರೆಯುವವ ಪೈಕಿ ಬಿಇ, ಎಂಟೆಕ್, ಎಂಸ್ಸಿ, ಎಂಬಿಬಿಎಸ್ ಹೀಗೆ ಟೆಕ್ ಹಾಗೂ ವೈದ್ಯಕೀಯ ಕೋರ್ಸ್ ಓದಿದವರೇ ಹೆಚ್ಚು. ಅಂತಹ ಅಭ್ಯರ್ಥಿಗಳ ಪೈಕಿ 2024ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆ ಬರೆದು ಮೊದಲ ಪ್ರಯತ್ನದಲ್ಲೇ ಕನ್ನಡಿಗ ವಿ ವಿಕಾಸ್ ಸಾಧನೆ ಮಾಡಿದ್ದಾರೆ. ಅವರ ಸ್ಪೂರ್ತಿದಾಯಕ ಕಥೆ ಇಲ್ಲಿದೆ.
ಟೆಕ್ ಪದವೀಧರ ಆಗಿರುವ ವಿಕಾಸ್ ರವರದ್ದು. ವಿಶೇಷ ಅಂದ್ರೆ ಮೊದಲ ಪ್ರಯತ್ನದಲ್ಲೇ ಈ ಕನ್ನಡಿಗ ಯುಪಿಎಸ್‌ಸಿ ಸಿಎಸ್‌ಇ ಪರೀಕ್ಷೆಯನ್ನು 288ನೇ Rank ನಲ್ಲಿ ಪಾಸ್ ಮಾಡಿರುವುದು ರಾಜ್ಯಕ್ಕೆ ಹೆಮ್ಮೆಯ ವಿಷಯವು ಆಗಿದೆ.
ವಿ ವಿಕಾಸ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಕಾಗೋಡು ತಿಮ್ಮಪ್ಪ ನಗರದ ಅಣಲೆಕೊಪ್ಪ ಬಡಾವಣೆಯ ನಿವಾಸಿ. ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ವಿಜಯೇಂದ್ರ ಸಿ ಪಾಟೀಲ ಹಾಗೂ ಶಿಕ್ಷಕಿ ಮಹಾಲಕ್ಷ್ಮಿ ಹೆಗಡೆ ದಂಪತಿಯ ಪುತ್ರ. ಉನ್ನತ ಶಿಕ್ಷಣ ಅಂತ ಬಂದಾಗ ವಿಕಾಸ್ ಐಐಟಿ ರೂರ್ಕಿಯಲ್ಲಿ ಇ ಅಂಡ್ ಇ ಎಂಟೆಕ್ ಪದವಿ ಪಡೆದಿದ್ದಾರೆ. 27 ವರ್ಷದ ವಿಕಾಸ್‌ಗೆ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿನಲ್ಲಿ ಗೆಲುವು ಸಿಕ್ಕಿದೆ.
ಸಾಮಾನ್ಯವಾಗಿ ಐಐಟಿಗಳಲ್ಲಿ ಓದುವವರು ಮಾತ್ರವಲ್ಲದೇ, ಟೆಕ್ ಕೋರ್ಸ್‌ಗಳು, ಎಂಬಿಬಿಎಸ್ ಕೋರ್ಸ್‌ಗಳನ್ನು ಓದುವವರಿಗೆ ಏಕಾಗ್ರತೆ ಎಂಬುದು, ತಾಳ್ಮೆ ಎಂಬುದು, ಹೆಚ್ಚು ಕಾಲ ಓದುವ ಹವ್ಯಾಸ ಎಲ್ಲವೂ ಕರಗತವಾಗಿರುತ್ತವೆ. ಈ ನಿಟ್ಟಿನಲ್ಲಿ ನೋಡುವುದಾದಲ್ಲಿ ಕನ್ನಡಿಗ ವಿಕಾಸ್ ತಮ್ಮ ಮೊದಲ ಪ್ರಯತ್ನದಲ್ಲೇ ಐಎಎಸ್ ಗೆಲ್ಲಲು ಹಲವು ಪ್ರೇರಣೆ ಪ್ರಯತ್ನಗಳ ಪೈಕಿ ಅವರ ಐಐಟಿ ಜರ್ನಿ, ಶೈಕ್ಷಣಿಕ ಕೋರ್ಸ್‌ಗಳ ಹಿನ್ನೆಲೆಯು ಹೆಚ್ಚಾಗಿ ಸಹಾಯ ಮಾಡಿದೆ.