ಬೆಂಗಳೂರು: ನಟ ನಿರ್ದೇಶಕ ರಿಷಬ್ ಶೆಟ್ಟಿ ಯುಗಾದಿ ದಿನವೇ ‘ಅಧ್ಯಾಯ ಕಾಂತಾರ ಚಾಪ್ಟರ್ ಎರಡು ಇಲ್ಲಿಂದ ಶುರು ಎಂದು ಬರೆದ ಫೋಟೋ ಹಂಚಿಕೊಂಡಿದ್ದಾರೆ.
ಬಿಳಿ ಬಣ್ಣದ ಬೋರ್ಡ್ ನಲ್ಲಿ ಓಂ ಎಂದು ಬರೆಯಲಾಗಿದೆ. ಮಧ್ಯಭಾಗದಲ್ಲಿ ಅಧ್ಯಾಯ ಎರಡು ಇಲ್ಲಿಂದ ಶುರು ಎಂದು ಬರೆದು ಕೊನೆಗೆ ಹ್ಯಾಪಿ ಯುಗಾದಿ, ಯುಗಾದಿ ಹಬ್ಬದ ಶುಭಾಶಯಗಳು ಎಂದು ಬರೆಯಲಾಗಿದೆ. ‘ಕಾಂತಾರ’ ಮತ್ತು ‘ಕಾಂತಾರ ಚಾಪ್ಟರ್ 1’ ಯಶಸ್ಸಿನ ಬಳಿಕ ‘ಕಾಂತಾರ ಚಾಪ್ಟರ್ 2’ ಭಾರಿ ನಿರೀಕ್ಷೆ ಮೂಡಿಸಿದೆ. ಚಿತ್ರದ ಕುರಿತಾಗಿ ರಿಷಬ್ ಶೆಟ್ಟಿ ಎಲ್ಲಿಯೂ ಮಾಹಿತಿ ನೀಡಿರಲಿಲ್ಲ.
ಇದೀಗ ಯುಗಾದಿಯಂದು ‘ಕಾಂತಾರ ಚಾಪ್ಟರ್ 2’ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಇಲ್ಲಿಂದ ಅಧ್ಯಾಯ ಎರಡು ಶುರು ಎಂದು ತಿಳಿಸಿದ್ದಾರೆ. ತಾರಾಗಣ, ಚಿತ್ರೀಕರಣ ಸೇರಿದಂತೆ ಈಗಾಗಲೇ ಚಿತ್ರಕ್ಕಾಗಿ ಪೂರ್ವ ತಯಾರಿ ನಡೆಸಿರುವ ಅವರು ಶೀಘ್ರವೇ ಮತ್ತಷ್ಟು ಮಾಹಿತಿ ಹಂಚಿಕೊಳ್ಳುವ ಸಾಧ್ಯತೆ ಇದೆ.
































