ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ವಿರುದ್ಧ ಈಕಾರಣಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣಗೌಡ ಕಿಡಿಕಾರಿದ್ದಾರೆ.
ಏಕೆಂದ್ರೆ , ನಟಿ ರಶ್ಮಿಕಾ ಮಂದಣ್ಣ ಕನ್ನಡಿದಂದ ಹೋಗಿ ಈಗ ಬೇರೆ ಭಾಷೆಯ ಸಿನಿಮಾ ಮಾಡುತ್ತಿದ್ದಾರೆ. ಕೊಡಗಿನ ರಶ್ಮಿಕಾ ಅಪ್ಪಟ ಕನ್ನಡದ ಹೆಣ್ಣುಮಗಳು. ನಾನು ಹೈದರಾಬಾದ್ ನವಳು ಎಂದಿದ್ದವರು. ನಾನು ತೆಲುಗಿನ ಆಂಧ್ರಪ್ರದೇಶದವರು ಎಂದಿದ್ದಾರೆ. ಕನ್ನಡದವರಾಗಿ ಕನ್ನಡ ನಾಡನ್ನೇ ಮರೆತರೆ ಹೇಗೆ? ಎಂದು ಪ್ರಶ್ನಿಸಿದ್ದಾರೆ.
ನೀವು ಚಿಗುರಿದಷ್ಟು ಬೇರೆ ಭಾಷೆಗಳಲ್ಲಿ ಅವಕಾಶ ಸಿಕ್ಕಿದೆ. ಬೇರೆ ಭಾಷೆಗಳಲ್ಲಿ ಸಿನಿಮಾ ಮಾಡುತ್ತಿದ್ದೀರಿ ಎಂದು ಕನ್ನಡ ನಾಡನ್ನೇ ಮರೆತರೆ ನೀವೆಂತಹ ಮೀರ್ ಸಾಧಿಕ್ ಇರಬೇಕು ಎನ್ನಿಸುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ನೀವೆಷ್ಟೇ ದೊಡ್ಡ ವ್ಯಕ್ತಿಗಳಾದರೂ ಈ ನೆಲದ ಋಣ ತೀರಿಸಬೇಕು. ಇನ್ನಾದರೂ ಕುವೆಂಪು ಹೇಳಿದ ಮಾತು ಅರ್ಥಮಾಡಿಕೊಳ್ಳಿ. ‘ಎಲ್ಲೇ ಇರು, ಹೇಗೆ ಇರು ಎಂದೆಂದಿಗೂ ಕನ್ನಡವಾಗಿರು’ ಎಂದು ಹೇಳಿದ್ದಾರೆ.