ಬೆಂಗಳೂರು : ಮಾಜಿ ಸಿಎಂ ಎಸ್.ಎಂ. ಕೃಷ್ಣ ನಿಧನಕ್ಕೆ ಸಂತಾಪ ವ್ಯಕ್ತಪಡಿಸಲು ಕರ್ನಾಟಕ ಸರ್ಕಾರ ಇಂದಿನಿಂದ ಮೂರು ದಿನ ಶೋಚಾರಣೆ ಘೋಷಿಸಿದೆ. ನಾಳೆ ಬುಧವಾರ ಒಂದು ದಿನ ಸರ್ಕಾರಿ ರಜೆ ಘೋಷಿಸಲಾಗಿದೆ. ಸರ್ಕಾರಿ ಕಚೇರಿ, ಶಾಲಾ ಕಾಲೇಜುಗಳಿಗೆ ಡಿ. 11ರಂದು ರಜೆ ನೀಡಲಾಗಿದೆ. ಖಾಸಗಿ ಶಾಲೆಗಳೂ ನಾಳೆ ಬಂದ್ ಆಗಿರುತ್ತವೆ. ಇದೇ ವೇಳೆ ಬ್ಯಾಂಕುಗಳಿಗೂ ರಜೆ ಇರುತ್ತದಾ? ಈ ಬಗ್ಗೆ ಅಧಿಕೃತ ಘೋಷಣೆಗಳು ಆಗಿಲ್ಲ.
ಬ್ಯಾಂಕ್ನ ರಜಾ ದಿನಗಳನ್ನು ಆರ್ಬಿಐ ನಿಗದಿ ಮಾಡುತ್ತದೆ. ಆದರೆ, ಭಾರತೀಯ ರಿಸರ್ವ್ ಬ್ಯಾಂಕ್ನಿಂದ ಈ ಬಗ್ಗೆ ಯಾವುದೇ ಪ್ರಕಟಣೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಬ್ಯಾಂಕುಗಳಿಗೆ ರಜೆ ಇರುವ ಸಾಧ್ಯತೆ ಇಲ್ಲ. ಬುಧವಾರ ರಾಷ್ಟ್ರವ್ಯಾಪಿ ಬ್ಯಾಂಕುಗಳು ಕಾರ್ಯನಿರ್ವಹಿಸುವಂತೆ ಕರ್ನಾಟಕದಲ್ಲೂ ಬ್ಯಾಂಕ್ ಕಚೇರಿಗಳು ಬಾಗಿಲು ತೆರೆದಿರುತ್ತವೆ.
ಡಿಸೆಂಬರ್ ತಿಂಗಳಲ್ಲಿ ದೇಶಾದ್ಯಂತ ಒಟ್ಟು 17 ದಿನ ಬ್ಯಾಂಕ್ ರಜೆ ಇರುತ್ತದೆ. ಇದರಲ್ಲಿ ಐದು ಭಾನುವಾರ ಮತ್ತು ಎರಡು ಸೋಮವಾರದ ರಜೆಗಳು ಸೇರಿವೆ. ಇದು ಬಿಟ್ಟರೆ ಸಾರ್ವತ್ರಿಕ ರಜೆ ಇರುವುದು ಡಿಸೆಂಬರ್ 25ರಂದು, ಕ್ರಿಸ್ಮಸ್ ಹಬ್ಬಕ್ಕೆ. ಇನ್ನುಳಿದವು ಪ್ರಾದೇಶಿಕ ರಜೆಗಳೇ ಆಗಿವೆ.