ಕರ್ನಾಟಕದಿಂದ ಡೀಸೆಲ್ ತುಂಬಿಸುವುದರಿಂದ ಕಾಸರಗೋಡು ಡಿಪೋಗೆ ಪ್ರತಿ ದಿನ 25000 ರೂ. ಲಾಭವಾಗುತ್ತಿದೆ. ಕೇರಳದಲ್ಲಿ ಡೀಸೆಲ್ ಕೊರತೆ ತೀವ್ರಗೊಂಡಿದ್ದು, ತೆರಿಗೆ ಹೆಚ್ಚಳ ಮುಂಗಡಪತ್ರದಲ್ಲಿ ಏರ್ಪಡಿಸಿರುವುದರಿಂದ ನಷ್ಟ ಭರಿಸಲು ಕೆಎಸ್‌ಆರ್‌ಟಿಸಿ ಕಂಡುಕೊಂಡ ದಾರಿಯೇ ಕರ್ನಾಟಕದಿಂದ ಡೀಸೆಲ್ ತುಂಬಿಸುವುದು.
2023 ರ ಫೆಬ್ರವರಿಯಲ್ಲಿ ಕರ್ನಾಟಕದ ಪಂಪ್‌ಗಳಿಂದ ಡೀಸೆಲ್ ತುಂಬಿಸಲು ಆರಂಭಿಸಲಾಗಿತ್ತು. ಆರಂಭದಲ್ಲಿ ಡಿಪೋದ 26 ಬಸ್‌ಗಳು ಕರ್ನಾಟಕದ ಪಂಪ್‌ಗಳಿಂದ ಡೀಸೆಲ್ ತುಂಬಿಸುತ್ತಿದ್ದವು. ಕಾಸರಗೋಡು-ಮಂಗಳೂರು ಸರ್ವಿಸ್‌ಗಳನ್ನು ನಡೆಸಲು ಒಂದು ದಿನಕ್ಕೆ 2,860 ಲೀಟರ್ ಡೀಸೆಲ್ ಅಗತ್ಯವಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಕಾಸರಗೋಡು ಡಿಪೋದಿಂದ ಕೊಲ್ಲೂರು, ಸುಳ್ಯ, ಪುತ್ತೂರು ಭಾಗಗಳಿಗೆ ಸರ್ವಿಸ್ ನಡೆಸುವ ಬಸ್‌ಗಳು ಕರ್ನಾಟಕದಿಂದ ಡೀಸೆಲ್ ತುಂಬಿಸಿದರೆ ಪ್ರತಿ ದಿನ 50 ಸಾವಿರ ರೂ. ಲಾಭ ಪಡೆಯಲು ಸಾಧ್ಯವಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ಇದಕ್ಕೆ ಅನುಮತಿ ಲಭಿಸಿಲ್ಲ.ನಷ್ಟ ಲೆಕ್ಕಗಳು, ಆರ್ಥಿಕ ಬಿಕ್ಕಟ್ಟು ಪರಿಹರಿಸಲಾಗದ ಕೆಎಸ್‌ಆರ್‌ಟಿಸಿಗೆ ಕರ್ನಾಟಕದ ಡೀಸೆಲ್ ತುಂಬಿಸುವುದರಿಂದ ಲಭಿಸುವ ಲಾಭ ಭರವಸೆಯುಂಟು ಮಾಡಲಿದೆ ಎಂಬ ನಿರೀಕ್ಷೆ ಅಧಿಕಾರಿಗಳದ್ದಾಗಿದೆ.