ಬೆಂಗಳೂರು : ಫಾಸ್ಟ್ಯಾಗ್ ಇಲ್ಲದೇ ಟೋಲ್ಗಳಲ್ಲಿ ಸಂಚರಿಸಿದ ವಾಹನ ಸವಾರರಿಗೆ ವಿಧಿಸಲಾಗುವ ದಂಡ ಸಂಗ್ರದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. 2024-25ನೇ ಸಾಲಿನಲ್ಲಿ, ಕರ್ನಾಟಕದಲ್ಲಿ 130 ಕೋಟಿ ರೂಪಾಯಿ ದಂಡ ಸಂಗ್ರಹವಾಗಿದೆ.
129.91 ಕೋಟಿ ರೂಪಾಯಿ ಸಂಗ್ರಹ: ಕೇಂದ್ರ ಸಾರಿಗೆ ಇಲಾಖೆಯ ಅಂಕಿ ಅಂಶಗಳ ಪ್ರಕಾರ, ಕರ್ನಾಟಕವು ಫಾಸ್ಟ್ಯಾಗ್ ಬಳಸದಿರುವುದರಿಂದ, ಅಮಾನ್ಯ ಫಾಸ್ಟ್ಯಾಗ್ಗಳಿಗೆ ವಿಧಿಸಿರುವ ದಂಡದಿಂದ 129.91 ಕೋಟಿ ರೂಪಾಯಿ ಸಂಗ್ರಹಿಸಿದೆ.
ಮಹಾರಾಷ್ಟ್ರ ರೂ. 110 ಕೋಟಿ, ಉತ್ತರ ಪ್ರದೇಶ ರೂ.81 ಕೋಟಿ, ಗುಜರಾತ್ ರೂ.78.5 ಕೋಟಿ, ಮತ್ತು ತಮಿಳುನಾಡು ರೂ.71.82 ಕೋಟಿ ದಂಡ ಸಂಗ್ರಹಿಸಿರುವುದರೊಂದಿಗೆ, ಕರ್ನಾಟಕ ಈ ಪೈಕಿ ಅಧಿಕ ಮೊತ್ತವನ್ನು ಸಂಗ್ರಹಿಸಿದ ಮೊದಲ ಸ್ಥಾನದಲ್ಲಿರುವ ರಾಜ್ಯವಾಗಿದೆ. ಸದ್ಯದ ನಿಯಮ ಪ್ರಕಾರ, ಫಾಸ್ಟ್ಯಾಗ್ ರಹಿತ ಸಂಚಾರಕ್ಕೆ ದುಪ್ಪಟ್ಟು ದಂಡ ವಿಧಿಸಲಾಗುತ್ತಿದೆ.

































