ಹೈದರಾಬಾದ್ : ಕೆಲವೊಮ್ಮೆ ನಮ್ಮ ಕನಸಿಗಾಗಿ ಕೆಲವೊಂದನ್ನು ಅದೆಷ್ಟೇ ಕಷ್ಟವಾದರೂ ತ್ಯಾಗ ಮಾಡಬೇಕಾಗುತ್ತದೆ. ಹೀಗೆ ತಾನು ಐಪಿಎಸ್ ಅಧಿಕಾರಿಯಾಗುವ ಕನಸಿಗಾಗಿ ಕ್ರಿಕೆಟ್ ವೃತ್ತಿಜೀವನವನ್ನೇ ತೊರೆದ ಕಾರ್ತಿಕ್ ಮಧಿರಾ ಅವರ ಯಶೋಗಾಥೆ ಇದು.
ಕಾರ್ತಿಕ್ ಮಧಿರಾ ಅವರು ಮೂಲತಃ ತೆಲಂಗಾಣದ ಹೈದರಾಬಾದ್ ನವರು. ಕಾರ್ತಿಕ್ ಅವರು ಅಂಡರ್-13, ಅಂಡರ್-15, ಅಂಡರ್-17, ಮತ್ತು ಅಂಡರ್-19 ಹಂತಗಳಲ್ಲಿ ಹಾಗೂ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಕ್ರಿಕೆಟ್ ಆಟಗಾರರಾಗಿದ್ದರು. ಅವರು ಜವಾಹರಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಎಂಜಿನಿಯರಿಂಗ್ ಪದವಿ ಗಳಿಸುತ್ತಾರೆ.
ಕಾರ್ತಿಕ್ ಅವರು ತಮ್ಮ ವೈಯಕ್ತಿಕ ಕಾರಣಗಳಿಂದ ಹಾಗೂ ಗಾಯದಿಂದಾಗಿ ತಮ್ಮ ಕ್ರಿಕೆಟ್ ಅನ್ನು ತೊರೆಯುತ್ತಾರೆ. ಯುಪಿಎಸ್ ಸಿ ಬರೆದು ಐಪಿಎಸ್ ಅಧಿಕಾರಿಯಾಗುವ ಆಕಾಂಕ್ಷೆಯನ್ನು ಹೊಂದಿದ್ದ ಅವರು ಈ ವೇಳೆ ಅವರು ಡೆಲಾಯ್ಟ್‌ನಲ್ಲಿ 6 ತಿಂಗಳ ಕಾಲ ಕೆಲಸ ಮಾಡುತ್ತಾರೆ. ನಂತರ ತಮ್ಮ ವೃತ್ತಿಯನ್ನು ತೊರೆದು ಯುಪಿಎಸ್ ಸಿ ಪರೀಕ್ಷೆಗೆ ತಯಾರಿಯನ್ನು ನಡೆಸುತ್ತಾರೆ.